ಧಾರವಾಡ : ರಾಮಮಂದಿರ ದೇಣಿಗೆ ವಿಚಾರದಲ್ಲಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಎತ್ತಿರುವ ಪ್ರಶ್ನೆಗಳು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮುಳ್ಳಾಗುವ ಲಕ್ಷಣಗಳು ಗೋಚರಿಸುತ್ತಿದೆ.
ಧಾರ್ಮಿಕ ನಂಬಿಕೆಯ ಭಾವನಾತ್ಮಕ ವಿಚಾರವೊಂದರಲ್ಲಿ ಮಾಜಿ ಸಿಎಂಗಳು ಕೊಟ್ಟಿರುವ ಹೇಳಿಕೆ ಅವರವರ ರಾಜಕೀಯ ಪಕ್ಷಗಳ ಸೋಲಿಗೆ ಕಾರಣವಾದರೂ ಅಚ್ಚರಿ ಇಲ್ಲ
ಈ ನಡುವೆ ರಾಮಮಂದಿರಕ್ಕೆ ಹಣ ನೀಡೋದಿಲ್ಲ ಅನ್ನುವ ಸುದ್ದರಾಮಯ್ಯ ಹೇಳಿಕೆಗೆ ತಿರುಗೇಟಿ ಕೊಟ್ಟಿರುವ ಮತ್ತೊಬ್ಬ ಮಾಜಿ ಸಿಎಂ ಬಾಲಿ ಸಚಿವ ಜಗದೀಶ್ ಶೆಟ್ಟರ್. ಅವರಿಬ್ಬರು ದೇಣಿಗೆ ಕೊಟ್ಟಿಲ್ಲ ಅಂದ್ರೆ ರಾಮಮಂದಿರ ನಿರ್ಮಾಣ ಕಾರ್ಯ ನಿಲ್ಲೋದಿಲ್ಲ.
ರಾಮಮಂದಿರ ಕಟ್ಟಬೇಕು ಅನ್ನುವುದು ದೇಶದ ಜನ ನಿರ್ಧಾರವಾಗಿದೆ. ಹೀಗಾಗಿಯೇ ದೇಣಿಗೆಗಾಗಿ ಹೋದ ಕಡೆ ಜನ ಕೈ ಎತ್ತಿ ದೇಣಿಗೆ ಕೊಡುತ್ತಿದ್ದಾರೆ. ಹೀಗಿರುವಾಗ ಮಂದಿರ ನಿರ್ಮಾಣವಾಗಿಯೇ ಆಗುತ್ತದೆ ಅಂದರು.
ಇನ್ನು ಕುಮಾರಸ್ವಾಮಿಯವರ ಹೇಳಿಕೆಗೆ ಉತ್ತರಿಸಿದ ಶೆಟ್ಟರ್, ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅವರು ಹಾಗೆ ಮಾತನಾಡುತ್ತಿದ್ದಾರೆ. ಅವರು ಎತ್ತಿರುವ ಅಪಸ್ವರವೇ ಅವರಿಗೆ ಕಪ್ಪು ಚುಕ್ಕೆಯಾಗಲಿದೆ ಅಂದರು.
ಈ ನಡುವೆ ಆರ್ ಎಸ್ ಎಸ್ ವಿರೋಧಿ ಹೇಳಿಕೆಗೆ ಪ್ರತಿಕ್ರಿಯಿಸಿದ ಶೆಟ್ಟರ್ ಆರ್ ಎಸ್ ಎಸ್ ಅನ್ನುವುದು ರಾಷ್ಟ್ರ ಭಕ್ತಿಯ ಸಂಕೇತ, ಸಂಘ ದೇಶವನ್ನು ಕಟ್ಟೋ ಕೆಲಸ ಮಾಡುತ್ತಿದೆ. ಸಂಘವನ್ನು ಟೀಕೆ ಮಾಡಿದವರು ಹಾಳಾಗಿದ್ದಾರೆ ಹೊರತು ಸಂಘಕ್ಕೆ ಏನೂ ಆಗಿಲ್ಲ.
ರಾಮಮಂದಿರ ನಿರ್ಮಾಣಕ್ಕೆ ಹಣ ಕೊಡಬೇಡಿ ಎಂದು ಪಿಎಫ್ಐ ನಾಯಕರೂ ಹೇಳುತ್ತಿದ್ದಾರೆ, ಸಿದ್ದರಾಮಯ್ಯ ಕೂಡಾ ಹೇಳುತ್ತಿದ್ದಾರೆ. ಅಲ್ಲಿಗೆ ಪಿಎಫ್ಐ ಮತ್ತು ಸಿದ್ದರಾಮಯ್ಯ ಒಂದೇ ಟೀಂ ಅನ್ನೋದು ಸಾಬೀತಾಯ್ತು ಎಂದು ಶೆಟ್ಟರ್ ಹೇಳಿದರು.
Discussion about this post