ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಪಬ್ಲಿಕ್ ಟಿವಿ ವಿರುದ್ಧ ಗರಂ ಆಗಿದ್ದಾರೆ. ಈ ಸಂಬಂಧ ಸುದೀರ್ಘ ಪತ್ರ ಬರೆದಿರುವ ಅವರು ಕದನ ಕುತೂಹಲಕ್ಕೆ ಜುಲೈ 11ರ ಮುಹೂರ್ತ ನಿಗದಿ ಮಾಡಿದ್ದಾರೆ.
ಹಾಗಾದ್ರೆ ರಕ್ಷಿತ್ ಶೆಟ್ಟಿ ಆಕ್ರೋಶಕ್ಕೆ ಕಾರಣವೇನು ಅನ್ನುವುದನ್ನು ನೋಡುವುದಾದರೆ, ರಕ್ಷಿತ್ ಆಕ್ರೋಶ ಕಾರಣ ಇಂದು ನಿನ್ನೆಯ ಘಟನೆಯಲ್ಲ. ಸಾಕಷ್ಟು ಹಿಂದಿನಿಂದಲೂ ಪಬ್ಲಿಕ್ ಟಿವಿಯ ವರದಿಗಳು ಅವರನ್ನು ಘಾಸಿ ಮಾಡಿದಂತಿದೆ. ಇದು ಅವರ ಬಹಿರಂಗ ಪತ್ರದಲ್ಲೇ ಗೊತ್ತಾಗುತ್ತದೆ.
ಇನ್ನು ಬುಧವಾರ ರಕ್ಷಿತ್ ಶೆಟ್ಟಿ ಬಗ್ಗೆ ”ಯಾಕಿಂಗೆ ಇವರೆಲ್ಲ?” ಎಂಬ ಟೈಟಲ್ ನಲ್ಲಿ ಪ್ರಸಾರವಾದ ಕಾರ್ಯಕ್ರಮ ಕಿರಿಕ್ ಪಾರ್ಟಿಯ ನಾಯಕನನ್ನು ರೊಚ್ಚಿಗೆಬ್ಬಿಸಿದೆ. ಅದರಲ್ಲಿ ರಕ್ಷಿತ್ ಶೆಟ್ಟಿ ಅವರನ್ನು ಸ್ವಯಂಘೋಷಿತ ಸಿಂಪಲ್ ಸ್ಟಾರ್ ಎಂದು ಕರೆದಿರುವ ಪಬ್ಲಿಕ್ ಟಿವಿ ಅವನೇ ಶ್ರೀಮನ್ನಾರಾಯಣ ಸಿನಿಮಾದಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಬೇಕೆಂದು ಒದ್ದಾಡುತ್ತಿದ್ದ ಈತ ಪಾನ್ ಬೀಡ ಶಾಪ್ ಸ್ಟಾರ್ ಕೂಡ ಆಗಲಿಲ್ಲ. ಅದಕ್ಕಿಂತ ಹೆಚ್ಚಾಗಿ ಸಿನಿಮಾ ನಿರ್ಮಾಪಕನಿಗೆ ಆಕಾಶ ತೋರಿಸಿಯೇ ಬಿಟ್ಟ.
ಇದನ್ನೂ ಓದಿ : ಪಬ್ಲಿಕ್ ಟಿವಿ ವಿರುದ್ಧ ಸಿಡಿದೆದ್ದ ರಕ್ಷಿತ್ ಶೆಟ್ಟಿ :ಜುಲೈ 11 ಏನಾಗುತ್ತದೆ…?
ಅಸಲಿಗೆ ಅವನೇ ಶ್ರೀಮನ್ನಾರಾಯಣ ಸಿನಿಮಾ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ್ ಮತ್ತು ರಕ್ಷಿತ್ ಶೆಟ್ಟಿ ಸಂಬಂಧ ಹೇಗಿದೆ ? ಇಬ್ಬರೂ ಸಿನಿಮಾ ವ್ಯವಹಾರ ಕಡಿದುಕೊಂಡಿದ್ದೇಕೆ ? ರಕ್ಷಿತ್ ಶೆಟ್ಟಿ ನಾಯಿ ಬಾಲ ಹಿಡಿದುಕೊಂಡಿದ್ದೇಕೆ” ಎಂದು ಪ್ರಶ್ನೆ ಮಾಡಿತ್ತು.
ಸ್ವಯಂಘೋಷಿತ ಸಿಂಪಲ್ ಸ್ಟಾರ್, ಪಾನ್ ಬೀಡ ಶಾಪ್ ಸ್ಟಾರ್ ಈ ಶಬ್ಧಗಳು ರಕ್ಷಿತ್ ಶೆಟ್ಟಿಯವರಿಗೆ ತುಂಬಾ ನೋವುಂಟು ಮಾಡಿದಂತಿದೆ.
Discussion about this post