ಮಂಗಳೂರು : ಕಳೆದ ಕೆಲವು ದಿನಗಳಿಂದ ಹವಮಾನದಲ್ಲಿ ನಿರಂತರ ಬದಲಾವಣೆಗಳು ಕಂಡು ಬಂದಿದೆ. ಮಳೆ ಬಿಸಿಲು ಎಂದು ಜನ ಹೈರಣಾಗಿದ್ದಾರೆ.
ಈ ನಡುವೆ ಡಿಸೆಂಬರ್ 10ರವರೆಗೆ ಅಂದ್ರೆ ಇನ್ನೂ 3 ದಿನ ಮಳೆ ಚಳಿಯ ವಾತಾವರಣ ಮುಂದುವರಿಯಲಿದೆ ಎಂದು ಹವಮಾನ ಇಲಾಖೆ ಹೇಳಿದೆ.
ಕನ್ಯಾಕುಮಾರಿ ಭಾಗದಲ್ಲಿ ಬುರೇವಿ ಚಂಡ ಮಾರುತ ಪ್ರಭಾವ ಇನ್ನೂ ತಗ್ಗಿಲ್ಲ. ಈ ಕಾರಣದಿಂದ ರಾಜ್ಯದ ಒಳನಾಡಿನ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಡಿಸೆಂಬರ್ 10ರ ತನಕ ಹಗುರ ಮಳೆ ನಿರೀಕ್ಷಿಸಬಹುದಾಗಿದೆ.
ಈ ನಡುವೆ ಹವಮಾನದಲ್ಲಿ ಮತ್ತಷ್ಟು ಬದಲಾವಣೆಗಳಾದರೆ ಧಾರಾಕಾರ ಮಳೆಯಾಗುವ ಸಾಧ್ಯತೆಗಳಿದೆ.
Discussion about this post