ರಾಜಧಾನಿ ಬೆಂಗಳೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆ ಸಿಡಿಲು ಗುಡುಗು ಸಹಿತಿ ಮಳೆರಾಯ ಅಬ್ಬರಿಸಿದ್ದಾನೆ. ಕೆಲ ದಿನಗಳಿಂದ ಬಿಸಿಲಿನ ತಾಪ ಹೆಚ್ಚಾಗಿದ್ದ ಬೆಂಗಳೂರಿನಲ್ಲಿ ಮುಂಜಾನೆ ಸುರಿದ ಮಳೆ ಜನರಿಗೆ ತಂಪನ್ನು ನೀಡಿದೆ.
ಕಾರ್ಪೋರೇಷನ್, ಮೆಜೆಸ್ಟಿಕ್, ಕೆ.ಆರ್. ಮಾರ್ಕೆಟ್, ವಿಧಾನಸೌಧ, ಶಾಂತಿನಗರ, ಆರ್.ಟಿ.ನಗರ, ಮಲ್ಲೇಶ್ವರಂ, ಬಸವೇಶ್ವರನಗರ, ರಾಜಾಜಿನಗರ, ವಿಜಯನಗರ, ಉತ್ತರಹಳ್ಳಿ, ಯಶವಂತಪುರ, ವಸಂತನಗರ, ಮಲ್ಲಸಂದ್ರ, ಬಾಗಲಗುಂಟೆ, ಹೆಸರಘಟ್ಟ, ಚಿಕ್ಕಬಾಣಾವರ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ.
ಮಳೆಯ ಕಾರಣದಿಂದ ಹಲವು ಕಡೆ ನೀರು ನುಗ್ಗಿ ಜನ ಸಂಕಷ್ಟವನ್ನೂ ಅನುಭವಿಸಿದ್ದಾರೆ.ಇನ್ನು ಮಳೆ ನೀರು ನುಗ್ಗುವುದು ಬಡವರ ಮನೆಗೆ ಹೀಗಾಗಿ ಲಾಕ್ ಡೌನ್ ನಿಂದ ಕೆಲಸವಿಲ್ಲದೆ ಕೈ ಖಾಲಿಯಾಗಿರುವ ಮಂದಿ ಮತ್ತಷ್ಟು ಸಂಕಷ್ಟ ಎದುರಿಸುವಂತಾಗಿದೆ.
Discussion about this post