ಸಿದ್ದರಾಮೋತ್ಸವದ ( siddaramosthava )ಬಗ್ಗೆ ಇದೀಗ ಎಐಸಿಸಿಯಲ್ಲೇ ಗೊಂದಲವಿದೆ. ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಗೈರು ಹಾಜರಾದ್ರೆ ಸಿದ್ದರಾಮಯ್ಯ ಬೆಂಬಲಿಗರು ಮುನಿಸಿಕೊಳ್ಳಬಹುದು. ಭಾಗವಹಿಸಿದ್ರೆ ಸಿದ್ದರಾಮಯ್ಯ ಬೆನ್ನಿಗೆ ರಾಹುಲ್ ಅನ್ನುವ ಸಂದೇಶ ರವಾನೆಯಾಗುತ್ತದೆ.
ಬೆಂಗಳೂರು : ಆಗಸ್ಟ್ 3ರಂದು ದಾವಣಗೆರೆಯಲ್ಲಿ ನಡೆಯುವ ಸಿದ್ದರಾಮೋತ್ಸವ ( siddaramosthava ) ಕಾರ್ಯಕ್ರಮ ಇದೀಗ ಬಹುಚರ್ಚಿತ ವಿಷಯ. ಈ ಕಾರ್ಯಕ್ರಮ ವಿಚಾರದಲ್ಲಿ ಡಿಕೆ ಶಿವಕುಮಾರ್ ( Dk Shivakumar ) ಸಮಾಧಾನಗೊಂಡರೂ ಡಿಕೆಶಿ ಬೆಂಬಲಿಗರು ಸಮಾಧಾನಗೊಂಡಿಲ್ಲ. ಎಲ್ಲಿ ನಮ್ಮ ನಾಯಕನಿಗೆ ಅನ್ಯಾಯವಾಗುತ್ತದೋ ಅನ್ನುವ ಆತಂಕ ಅವರದ್ದು.
ಈ ನಡುವೆ ರಾಹುಲ್ ಗಾಂಧಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಬಹುತೇಕ ಖಚಿತವಾಗಿದೆ. ಇಡಿ ವಿಚಾರಣೆ ವಿಚಾರದಲ್ಲಿ ಹೆಚ್ಚು ಕಡಿಮೆಯಾದರೆ ಮಾತ್ರ ರಾಹುಲ್ ಗಾಂಧಿ ( Rahul gandhi ) ಗೈರು ಹಾಜರಾಗಲಿದ್ದಾರೆ. ಈ ನಡುವೆ ಸಿದ್ದರಾಮೋತ್ಸವದ ಬಗ್ಗೆ ಸಂಪೂರ್ಣ ವಿವರಗಳನ್ನು ತರಿಸಿಕೊಂಡಿರುವ ಎಐಸಿಸಿ ಇಡೀ ಕಾರ್ಯಕ್ರಮ ಹೇಗೆ ನಡೆಯಬೇಕು ಅನ್ನುವ ಸೂಚನೆಯನ್ನು ರವಾನಿಸಿದೆ ಅನ್ನಲಾಗಿದೆ.
ಇದನ್ನೂ ಓದಿ : Urfi Javed -ನಮ್ಮ ಕಣ್ಣುಗಳನ್ನು ದಾನ ಮಾಡಲು ರೆಡಿಯಾಗಿದ್ದೇವೆ : ಉರ್ಫಿಯ ಹೊಸ ಅವತಾರ ಕಂಡವರ ಮಾತು
ರಾಹುಲ್ ಗಾಂಧಿಯವರೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರಿಂದ ಪಕ್ಷಕ್ಕೆ ಹಾಗೂ ರಾಹುಲ್ ಅವರಿಗೆ ಮುಜುಗರವಾಗದಂತೆ ನೋಡಿಕೊಳ್ಳಬೇಕು. ಪಕ್ಷದ ಕಾರ್ಯಕ್ರಮವಾಗಿರಬೇಕು ಹೊರತು ವ್ಯಕ್ತಿಗಳನ್ನು ಮೆರೆಸಬಾರದು. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ, ಅವರ ನಾಯಕತ್ವದಲ್ಲಿ ಚುನಾವಣೆ, ಸಿದ್ದರಾಮಯ್ಯ ಕೈ ಬಲಪಡಿಸಿ, ಸಿದ್ದರಾಮಯ್ಯ ಅವರೇ ಶಕ್ತಿ ಈ ರೀತಿ ಮಾತುಗಳು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕೇಳಬಾರದು ಎಂದು ಹೈಕಮಾಂಡ್ ಸಿದ್ದರಾಮಯ್ಯ ಹುಟ್ಟು ಹಬ್ಬ ಆಚರಣಾ ಸಮಿತಿಗೆ ಸೂಚಿಸಿದೆಯಂತೆ.
ಇಸ್ಲಾಂ ಧರ್ಮ ಚೀನಾದಲ್ಲಿ ಚೀನೀ ದೃಷ್ಟಿಕೋನಕ್ಕೆ ಬದ್ಧವಾಗಿರಬೇಕು
ಚೀನಾದಲ್ಲಿರುವ ಇಸ್ಲಾಂ ಧರ್ಮ ದೃಷ್ಟಿಕೋನದಲ್ಲಿ ಚೀನಿಯಾಗಿರಬೇಕು
ಚೀನಾದಲ್ಲಿನ ಇಸ್ಲಾಂ ಧರ್ಮ ಚೀನೀ ದೃಷ್ಟಿಕೋನಕ್ಕೆ ಬದ್ಧವಾಗಿರತಕ್ಕದ್ದು. ಚೀನಾದಲ್ಲಿನ ಎಲ್ಲಾ ಧರ್ಮಗಳು ಕಮ್ಯುನಿಸ್ಟ್ ಪಕ್ಷದ ಸಮಾಜವಾದಿ ಪರಿಕಲ್ಪನೆಗೆ ಹೊಂದಿಕೊಳ್ಳತಕ್ಕದ್ದು ಎಂದು ಚೀನಾ ಅಧ್ಯಕ್ಷ ಷಿ ಜಿನ್ ಪಿಂಗ್ ಹೇಳಿದ್ದಾರೆ. ಉಯಿಘರ್ ಅನ್ನುವ ಮುಸ್ಲಿಮರೇ ಹೆಚ್ಚಿರುವ ಷಿಜಿಯಾಂಗ್ ಪ್ರದೇಶಕ್ಕೆ ಭೇಟಿ ಕೊಟ್ಟ ಬಳಿಕ ಮಾತನಾಡಿದ ಅವರು ಚೀನೀ ರಾಷ್ಟ್ರಕ್ಕಾಗಿ ಸಮುದಾಯ ಪ್ರಜ್ಞೆಯನ್ನು ಗಟ್ಟಿಗೊಳಿಸಬೇಕು ಅಂದರು.
ಷಿಜಿಯಾಂಗ್ ಪ್ರದೇಶದಲ್ಲಿ ಉಯಿಘರ್ ಮುಸ್ಲಿಂರ ಪ್ರತಿಭಟನೆಗಳನ್ನು ಹತ್ತಿಕ್ಕಲು ಚೀನಾದ ಪ್ರತಿಭಟನೆಗಳು ಪ್ರಯತ್ನಿಸುತ್ತಿದೆ. ಹೀಗಾಗಿ ಈ ಪ್ರದೇಶಕ್ಕೆ ಚೀನಾ ಅಧ್ಯಕ್ಷರ ಭೇಟಿ ಮಹತ್ವ ಪಡೆದುಕೊಂಡಿದೆ.
ಚೀನಾದಲ್ಲಿರುವ ಇಸ್ಲಾಂ ಧರ್ಮ ಆಡಳಿತದಲ್ಲಿರುವ ಕಮ್ಯೂನಿಸ್ಟ್ ಪಕ್ಷದ ನೀತಿಗಳೊಂದಿಗೆ ನಿಲ್ಲಬೇಕು ಅನ್ನುವುದು ಷಿ ಜಿನ್ ಪಿಂಗ್ ವಾದವಾಗಿದೆ. ಹಲವಾರು ವರ್ಷಗಳಿಂದ ಅವರು ಇದನ್ನೇ ಪ್ರತಿಪಾದಿಸಿಕೊಂಡು ಬಂದಿದ್ದಾರೆ.
Discussion about this post