ಅಶೋಕ್ (R Ashok) ಅವರ ಆಯ್ಕೆ ಉತ್ತರ ಕರ್ನಾಟಕ ಭಾಗದ ಬಿಜೆಪಿ ನಾಯಕರ ಕಣ್ಣು ಕೆಂಪಾಗಿಸಿದೆ
ಪದ್ಮನಾಭನಗರಕ್ಕೆ ಸೀಮಿತವಾಗಿರುವ ಬಿಜೆಪಿ ನಾಯಕ ಆರ್ ಅಶೋಕ್ (R Ashok) ಅವರನ್ನು ಪ್ರತಿಪಕ್ಷ ನಾಯಕನಾಗಿ ಬಿಜೆಪಿ ಆಯ್ಕೆ ಮಾಡಿದೆ. ದೆಹಲಿ ನಾಯಕರ ಈ ನಿರ್ಧಾರ ಅಚ್ಚರಿ ಹುಟ್ಟಿಸಿದ್ದು, ಪ್ರಭಾವಿಯಲ್ಲದ ನಾಯಕನಿಗೆ ಪ್ರತಿಪಕ್ಷ ಕೊಟ್ಟಿರುವ ರಹಸ್ಯವೇನು ಅನ್ನುವುದೇ ಎಲ್ಲರ ಪ್ರಶ್ನೆ.
ಆರ್ ಅಶೋಕ್ (R Ashok) ಅವರು 7ನೇ ಬಾರಿಗೆ ಶಾಸಕರಾಗಿದ್ದು ಆಯ್ಕೆಯಾಗಿದ್ದು, ಈ ಹಿಂದೆ ಒಂದು ಸಲ ವಿಪಕ್ಷ ಉಪನಾಯಕನಾಗಿ ಕೆಲಸ ಮಾಡಿದ್ದರು. ಒಕ್ಕಲಿಗ ಸಮುದಾಯದಿಂದ ಬಂದರೂ ಪ್ರಭಾವಿ ಒಕ್ಕಲಿಗ ನಾಯಕನಾಗಿ ಬೆಳೆಯಲಿಲ್ಲ. ಬೆಂಗಳೂರು ಕೇಂದ್ರಿತ ರಾಜಕಾರಣ ಮಾಡಿದ ಕಾರಣದಿಂದ ರಾಜ್ಯ ನಾಯಕನಾಗಿಯೂ ಅಶೋಕ್ ಬೆಳೆಯಲಿಲ್ಲ.
ಇದನ್ನೂ ಓದಿ : ಬಿಗ್ ಬಾಸ್ ಮನೆಯಲ್ಲಿ ಪೊಲೀಸರಿಂದ ಡ್ರೋನ್ ಪ್ರತಾಪ್ ( Drone Prathap ) ವಿಚಾರಣೆ
ಹಳೆ ಮೈಸೂರು ಭಾಗದಲ್ಲಿ ಅಶೋಕ್ ಅವರಿಗೆ ರಾಜಕೀಯ ಹಿಡಿತ ಎಂದು ಹೇಳಲಾಗಿತ್ತು, ಆದರೆ ಚುನಾವಣೆಯ ಅಖಾಡದಲ್ಲಿ ಅದು ಸಾಬೀತಾಗಿಲ್ಲ.
ಇನ್ನು ಸಾರಿಗೆ, ಆರೋಗ್ಯ, ಕಂದಾಯ ಮತ್ತು ಗೃಹ ಖಾತೆಗಳನ್ನು ನಿಭಾಯಿಸಿರುವ ಅಶೋಕ್ ಡಿಸಿಎಂ ಆಗಿಯೂ ಕಾರ್ಯ ನಿರ್ವಹಿಸಿದ್ದರು. ಸಚಿವರಾಗಿಯೂ ಹೇಳಿಕೊಳ್ಳುವ ಸಾಧನೆಗಳು ಅಶೋಕ್ ಅವರ ಬಯೋಡೇಟಾದಲ್ಲಿ ಇಲ್ಲ.
ಇನ್ನು ಸಿದ್ದರಾಮಯ್ಯರಂತಹ ನಾಯಕನನ್ನು ಎದುರಿಸಲು ಪ್ರಬಲ ಪ್ರತಿಪಕ್ಷ ನಾಯಕನ ಅಗತ್ಯವಿತ್ತು. ದಾಖಲೆಗಳನ್ನು ಮುಂದಿಟ್ಟು ಸರ್ಕಾರವನ್ನು ಇಕ್ಕಟಿಗೆ ಸಿಲುಕಿಸುವ ನಾಯಕ ಬೇಕಾಗಿತ್ತು. ಆದರೆ ಅಶೋಕ್ ಅವರ ಮೇಲೆ ಈಗಾಗಲೇ ಒಪ್ಪಂದದ ರಾಜಕೀಯ ಮಾಡ್ತಾರೆ ಅನ್ನುವ ಆರೋಪಗಳಿದೆ. ಮಾತ್ರವಲ್ಲದೆ ದಾಖಲೆಗಳನ್ನು ಇಟ್ಟು ಮಾತಾನಾಡುವ ಅಭ್ಯಾಸ ಅಶೋಕ್ ಅವರಿಗಿಲ್ಲ.
ಅಷ್ಟು ಮಾತ್ರವಲ್ಲದೆ ಅಶೋಕ್ ಅವರು ಎದ್ದು ನಿಂತ್ರೆ, ಈ ಬಾರಿ ನಿಮ್ಮ ಅವಧಿಯ ಅವ್ಯವಹಾರಗಳನ್ನು ತನಿಖೆ ಮಾಡಿಸೋಣ ಎಂದು ಕಾಂಗ್ರೆಸ್ ಸವಾಲು ಹಾಕಿದ್ರೂ ಅಚ್ಚರಿ ಇಲ್ಲ.
Discussion about this post