ಶಾಸಕ ಅಶೋಕ್ ರೈ ಅವರು ಕ್ಷೇತ್ರದ ಅಭಿವೃದ್ಧಿ ಕುರಿತಂತೆ ಹಲವು ಕನಸು ಹೊಂದಿದ್ದಾರೆ
ಪುತ್ತೂರಿನ ಇತಿಹಾಸ ಪ್ರಸಿದ್ಧ ನಹತೋಭಾರ ಮಹಾಲಿಂಗೇಶ್ವರ ದೇವಾಲಯದ ಅಭಿವೃದ್ದಿಗೆ 2 ಕೋಟಿ ರೂಪಾಯಿ ಹಣವನ್ನು ತರುವಲ್ಲಿ ಶಾಸಕ ಅಶೋಕ್ ಕುಮಾರ್ ರೈ ಯಶಸ್ವಿಯಾಗಿದ್ದಾರೆ. ಈ ಮೂಲಕ ದೇವಾಲಯದ ಸಮಗ್ರ ಅಭಿವೃದ್ಧಿಗೆ ವೇಗ ಸಿಗಲಿದ್ದು, ಶೀಘ್ರದಲ್ಲೇ ಕಾಮಗಾರಿ ಕೂಡಾ ಪ್ರಾರಂಭವಾಗಲಿದೆ.
ಮಂಜೂರುಗೊಂಡಿರುವ ಅನುದಾನದಲ್ಲಿ ದೇವಸ್ಥಾನದ ಮುಖ್ಯರಸ್ತೆಯ ಕಿರು ಸೇತುವೆಯಿಂದ ದೇವಸ್ಥಾನದ ಎದುರಿನ ಗದ್ದೆಯ ಸ್ಮಶಾನದ ತನಕದ ತೋಡಿಗೆ ತಡೆಗೋಡೆ ಮತ್ತು ಕಾಂಕ್ರೀಟ್ ಆವರಣಗೋಡೆ ಕಾಮಗಾರಿ ನಡೆಯಲಿದೆ. ಈ ಸಂಬಂಧ ಶೀಘ್ರದಲ್ಲೇ ಟೆಂಡರು ಕರೆಯೋದಾಗಿ ತಿಳಿಸಿರುವ ಶಾಸಕ ಅಶೋಕ್ ರೈ, ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ತಾನು ಬದ್ಧ ಅಂದಿದ್ದಾರೆ.
ಇದನ್ನೂ ಓದಿ : ಕ್ಯೂಬಾದಲ್ಲಿ Cuba ಪೆಟ್ರೋಲ್ ದರ 456 ರೂಪಾಯಿಗೆ ಏರಿಕೆ
ಈ ನಡುವೆ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಕಚೇರಿ ಸಭಾಂಗಣದಲ್ಲಿ ದೇವಳದ ಅಭಿವೃದ್ಧಿ ಕುರಿತಂತೆ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಭವಿಷ್ಯದಲ್ಲಿ ಕೈಗೊಳ್ಳಬೇಕಾದ ಮತ್ತು ಕೈಗೊಳ್ಳಬಹುದಾದ ಕೆಲಸಗಳ ಕುರಿತಂತೆ ಚರ್ಚೆಗಳು ನಡೆದಿದೆ.
ಇದೇ ಸಭೆಯಲ್ಲಿ ಮಾತನಾಡಿರುವ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ. ದೇವಸ್ಥಾನದ ಅಭಿವೃದ್ಧಿಗೆ 8.50 ಕೋಟಿ ರೂಪಾಯಿ ಅನುಮೋದನೆಯಾಗಿದೆ. ಭಕ್ತರಿಂದ 31 ಲಕ್ಷ ರೂಪಾಯಿ ಸಂಗ್ರಹವಾಗಿದ್ದು, ಅಭಿವೃದ್ಧಿಯ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ಗಳನ್ನು ರಚಿಸಲಾಗಿದೆ ಅಂದರು.
ಈ ನಡುವೆ ದೇವಸ್ಥಾನದ ಬ್ರಹ್ಮಕಲಶ ಕುರಿತಂತೆ ಚರ್ಚೆಗಳು ನಡೆದಿದ್ದು, ಫೆಬ್ರವರಿಯೊಳಗೆ ಬ್ರಹ್ಮಕಲಶ ಅಸಾಧ್ಯ, ಈ ಕುರಿತಂತೆ ಹೊಸ ಸಮಿತಿ ಬಂದ ಬಳಿಕ ಚಿಂತನೆ ಮಾಡಬಹುದು ಎಂದು ಶಾಸಕ ಅಶೋಕ್ ರೈ ಹೇಳಿದ್ದು, ತರಾತುರಿಯ ನಿರ್ಧಾರದಿಂದ ಜನರಿಗೆ ತಪ್ಪು ಸಂದೇಶ ಹೋಗೋದು ಬೇಡ ಎಂದು ನಿರಂಜನ್ ರೈ ಹೇಳಿದ್ದಾರೆ.
ಇದಕ್ಕೆ ಕೇಶವಪ್ರಸಾದ್ ಮುಳಿಯ ಅವರು ಪ್ರತಿಕ್ರಿಯಿಸಿದ್ದು, ಬ್ರಹ್ಮಕಲಶ ಕುರಿತಂತೆ ದಿನಾಂಕವನ್ನು ಈಗಾಗಲೇ ನೋಡಲಾಗಿದೆ. ಅಷ್ಟಮಂಗಲ ಇಟ್ಟು ಬ್ರಹ್ಮಕಲಶ ಮಾಡದೇ ಹೋದರು ಎಂದು ವಿಚಾರ ಬರಬಾರದು ಅನ್ನೋದು ನಮ್ಮ ಅಭಿಪ್ರಾಯ ಅಂದರು.
ಒಟ್ಟಿನಲ್ಲಿ ಹತ್ತೂರ ಒಡೆಯನ ಸನ್ನಿಧಿಯಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳು ನಡೆಯಲಿದ್ದು, ದೇವಾಲಯ ಕೇವಲ ಧಾರ್ಮಿಕ ಸ್ಥಳವಲ್ಲ ಅದೊಂದು ಸಾಮಾಜಿಕ ಜವಾಬ್ದಾರಿಯ ಸ್ಥಳವೂ ಹೌದು, ಧರ್ಮದ ಅಭಿವೃದ್ಧಿಗೆ ಪೂರಕವಾದ ಸಾಮಾಜಿಕ ಚಟುವಟಿಕೆಗಳು ಕ್ಷೇತ್ರದಲ್ಲಿ ನಡೆಯಲಿ ಅನ್ನೋದು ಭಕ್ತರ ಆಶಯ.
Discussion about this post