ಉಡುಪಿಯ ಅಷ್ಟಮಠಗಳಲ್ಲೊಂದಾದ ಪುತ್ತಿಗೆ ಮಠದ ನೂತನ ಶಿಷ್ಯ, 31ನೇ ಉತ್ತರಾಧಿಕಾರಿಯಾಗಿ ಕುಂಜಿಬೆಟ್ಟಿನ ಪ್ರಶಾಂತ್ ಆಚಾರ್ಯ(29) ಸೋಮವಾರ ಧಾರ್ಮಿಕ ಅಧಿಕಾರ ಸ್ವೀಕರಿಸಿದ್ದಾರೆ.
ಹಿರಿಯಡ್ಕದಲ್ಲಿರುವ ಪುತ್ತಿಗೆ ಮೂಲ ಮಠದಲ್ಲಿ ಸನ್ಯಾಸಾಶ್ರಮದ ಅಂಗವಾಗಿ ಸ್ವರ್ಣಾ ನದಿಯಲ್ಲಿ ಮುಳುಗು ಹಾಕಿ ಸ್ನಾನ, ಲೌಕಿಕ ವಸ್ತ್ರ ತ್ಯಾಗದೊಂದಿಗೆ ಕಾಷಾಯ ವಸ್ತ್ರ, ದಂಡ ಸ್ವೀಕಾರ ಪ್ರಕ್ರಿಯೆ ನಡೆಯಿತು.
ಅಷ್ಟಮಠಗಳ ಯತಿಗಳ ಗೈರಿನ ನಡುವೆ ಪುತ್ತಿಗೆ ಮಠಕ್ಕೆ ಶಿಷ್ಯ ಸ್ವೀಕಾರ…!
ಪುತ್ತಿಗೆ ಮಠದ ಪಟ್ಟದ ದೇವರಾದ ಶ್ರೀವಿಠಲ ದೇವರು ಹಾಗೂ ಕ್ಷೇತ್ರದ ಅಧಿದೇವತೆ ನರಸಿಂಹ ದೇವರ ಸನ್ನಿಧಾನದಲ್ಲಿ ನೂತನ ಯತಿಗೆ ಪುತ್ತಿಗೆ ಶ್ರೀಸುಗುಣೇಂದ್ರತೀರ್ಥರು ಪ್ರಣವ ಮಂತ್ರೋಪದೇಶ ಮಾಡಿದರು.
ಈ ಬಳಿಕ ಮಾತನಾಡಿದ ಪುತ್ತಿಗ ಮಠದ ಹಿರಿಯ ಶ್ರೀಗಳು, ಸನ್ಯಾಸ ದೀಕ್ಷೆ ನೀಡುವ ಮುನ್ನ ಪ್ರಶಾಂತ್ ಆಚಾರ್ಯರಿಗೆ ತಿಳಿಯದಂತೆ ಅವರು ಕೆಲಸ ಮಾಡುತ್ತಿದ್ದ ಕಂಪನಿಯ ಅಧಿಕಾರಿಗಳನ್ನು, ಸಹೋದ್ಯೋಗಿಗಳನ್ನು ಮಠಕ್ಕೆ ಕರೆಸಿ ಅವರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೇವೆ.
ಬಾಡಿಗೆ ಮನೆ ಮಾಲೀಕರ ಬಳಿಯೂ ವಿಚಾರಿಸಿದ್ದೇವೆ. ಎಲ್ಲರ ಬಳಿ ಮಾತನಾಡಿದ ಮೇಲೆ ಅವರಿಗೆ ಹುಡುಗಿಯರ ಬಗ್ಗೆ ಆಸಕ್ತಿ ಇಲ್ಲ ಎಂದು ತಿಳಿದು ಸನ್ಯಾಸಾಶ್ರಮ ನೀಡಿದ್ದೇವೆ ಎಂದು ಪುತ್ತಿಗೆ ಶ್ರೀಗಳು ಹಾಸ್ಯ ಚಟಾಕಿ ಹಾರಿಸಿದರು.
Discussion about this post