ಮಂಗಳೂರು : ಕೊರೋನಾ ಸೋಂಕು ಇದೀಗ ಹಳ್ಳಿಗಳಿಗೆ ವ್ಯಾಪಿಸಲಾರಂಭಿಸಿದೆ ಮೊದಲ ಅಲೆಗೆ ಹೋಲಿಸಿದರೆ ಎರಡನೇ ಅಲೆ ಗ್ರಾಮವನ್ನು ಹಿಂಡಿ ಹಿಪ್ಪೆ ಮಾಡಿದೆ. ಮೊದಲೇ ಗ್ರಾಮಗಳಲ್ಲಿ ವಯಸ್ಸಾದವರೇ ಹೆಚ್ಚಿನ ಸಂಖ್ಯೆ ವಾಸಿಸುತ್ತಿದ್ದಾರೆ. ಹೀಗಾಗಿ ಸೋಂಕು ತುಂಬಾ ಅಪಾಯಕಾರಿಯಾಗಿ ಪರಿಣಮಿಸಿದೆ.
ಈ ನಡುವೆ ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆ ಇನ್ನಿಲ್ಲದಂತೆ ಪ್ರಯತ್ನಿಸುತ್ತಿದೆ. ಅದರಲ್ಲೂ ಜಿಲ್ಲಾಧಿಕಾರಿಗಳೊಂದಿಗೆ ಪ್ರಧಾನಿ ನರೇಂದ್ಪ ಮೋದಿಯವರು ಸಭೆ ನಡೆಸಿದ ಬಳಿಕ ಗ್ರಾಮಗಳನ್ನು ಕೊರೋನಾದಿಂದ ರಕ್ಷಿಸುವ ಕಾರ್ಯ ಚುರುಕು ಪಡೆದಿದೆ.
ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತ್ ಕೊರೋನಾ ನಿಯಂತ್ರಣದ ನಿಟ್ಟಿನಲ್ಲಿ ಮಾಡುತ್ತಿರುವ ಕಾರ್ಯ ಭಾರತಕ್ಕೆ ಮಾದರಿ ಅನ್ನುವುದರಲ್ಲಿ ಎರಡು ಮಾತಿಲ್ಲ.
ಈಗಿರುವ ಪರಿಸ್ಥಿತಿಯಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಲಾಕ್ ಡೌನ್ ಬಿಟ್ರೆ ಅನ್ಯ ಮಾರ್ಗವಿಲ್ಲ. ಲಾಕ್ ಡೌನ್ ಬೇಡ ಅನ್ನುವುದಾಗಿದ್ರೆ ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು, ಆದರೆ ಜನ ಅದನ್ನು ಫಾಲೋ ಮಾಡೋದರಲ್ಲಿ ಹಿಂದುಳಿದಿದ್ದಾರೆ. ಹೀಗಾಗಿ ಲಾಕ್ ಡೌನ್ ಅನಿವಾರ್ಯವಾಗಿದೆ. ಆದರೆ ಈದ ಜಾರಿಯಲ್ಲಿರುಲ ಲಾಕ್ ಡೌನ್ ನಿಂದ ಸೋಂಕನ್ನು ನಿಯಂತ್ರಿಸೋದು ಕಷ್ಟ ಎಂದು ಅರಿತ ಪುಣಚ ಗ್ರಾಮ ಪಂಚಾಯತ್ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದೆ. ವಾರದಲ್ಲಿ ಮೂರು ದಿನ ಸಂಪೂರ್ಣ ಲಾಕ್ ಡೌನ್ ಮಾಡೋ ಮೂಲಕ ಸೋಂಕಿನ ಚೈನ್ ಬ್ರೇಕ್ ಮಾಡುವಲ್ಲಿ ಯಶಸ್ಸು ಸಾಧಿಸಲಾಗಿದೆ.
ಮಂಗಳವಾರ,ಗುರುವಾರ, ಹಾಗೂ ಶನಿವಾರದಂದು ಸಂಪೂರ್ಣ ಲಾಕ್ ಡೌನ್ ಈ ಗ್ರಾಮದಲ್ಲಿ ಜಾರಿಯಲ್ಲಿದ್ದು ಯಾವುದೇ ವ್ಯವಹಾರಗಳು ನಡೆಯುವುದಿಲ್ಲ. ಇನ್ನು ಗ್ರಾಮ ಪಂಚಾಯತ್ ನಿರ್ಧಾರಕ್ಕೆ ರಿಕ್ಷಾ ಚಾಲಕರು, ಅಂಗಡಿ ಮಾಲೀಕರು ಕೂಡಾ ಕೈ ಜೋಡಿಸಿದ್ದು, ಸಂಪೂರ್ಣ ಲಾಕ್ ಡೌನ್ ಗೆ ಯಾವುದೇ ಅಡ್ಡಿಯಾಗಿಲ್ಲ.
ಇನ್ನು ಗ್ರಾಮ ಪಂಚಾಯತ್ ನಿರ್ಧಾರವನ್ನು ಜಾರಿ ಮಾಡಲು ವಿಟ್ಲ ಪೊಲೀಸರು ಕೂಡಾ ಸಹಕರಿಸಿದ್ದು, ಅನಗತ್ಯವಾಗಿ ಗ್ರಾಮಗಳಲ್ಲಿ ವಾಹನ ಓಡಾಟ ಕಂಡು ಬಂದ್ರೆ, ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ.
ಈ ಹಿಂದೆ ಇದೇ ಗ್ರಾಮ ಪಂಚಾಯತ್ ತನ್ನ ವ್ಯಾಪ್ತಿಯಲ್ಲಿ ಮಾಸ್ಕ್ ಹಾಕದವರಿದೆ ದಂಡ ವಿಧಿಸುವ ಮೂಲಕ ಸದ್ದು ಮಾಡಿತ್ತು. ಪಂಚಾಯತ್ ನ ಅಧ್ಯಕ್ಷರು ಹಾಗೂ ಸದಸ್ಯರೇ ರಸ್ತೆಗಿಳಿದ್ದು ಅಪರೇಷನ್ ಮಾಸ್ಕ್ ಮಾಡಿದ್ದರು.
Discussion about this post