ಸುಮಲತಾ ಅಂಬರೀಶ್ ಅವರು ಸಂಸತ್ತಿನಲ್ಲಿ ಇಂದು ಚೊಚ್ಚಲ ಭಾಷಣ ಮಾಡಿದ್ದಾರೆ. ರಾಜ್ಯ ಹಾಗೂ ತನ್ನ ಕ್ಷೇತ್ರದ ರೈತರ ಕಾಳಜಿಯನ್ನು ವ್ಯಕ್ತಪಡಿಸಿದ್ದ ಅವರು ಮುಂದೊಂದು ದಿನ ಉತ್ತಮ ಸಂಸದೀಯ ಪಟುವಾಗ್ತಾರೆ ಅನ್ನುವ ಮುನ್ಸೂಚನೆ ಕೊಟ್ಟಿದ್ದರು.
ದೆಹಲಿಗೆ ಅಗತ್ಯವಾಗಿರುವ ಭಾಷೆಯ ಮೇಲೆ ಅವರಿಗೆ ಹಿಡಿತವಿರುವುದರಿಂದ ಮಂಡ್ಯಕ್ಕೆ ಮೋಸವಾಗುವುದಿಲ್ಲ ಅನ್ನುವ ಭರವಸೆಯನ್ನು ಹುಟ್ಟಿಸಿದ್ದಾರೆ. ಮಂಡ್ಯದ ಕಬ್ಬು, ಭತ್ತ ಬೆಳೆಗಾರರ ಕುರಿತಂತೆ ದಯವಿಟ್ಟು ಸಹಾಯಕ್ಕೆ ಧಾವಿಸಿ ಎಂದು ಸಂಸತ್ತಿನಲ್ಲಿ ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದ್ದರು.
ಎಲ್ಲೂ ಕೂಡಾ ತಮ್ಮ ಭಾಷಣದಲ್ಲಿ ಅವರು ಸಿಎಂ ಕುಮಾರಸ್ವಾಮಿ ಹೆಸರು ಪ್ರಸ್ತಾಪಿಸಿ ಇರಲಿಲ್ಲ. ಮೈತ್ರಿ ಸರ್ಕಾರದ ಬಗ್ಗೆ ಮಾತೇ ಆಡಿರಲಿಲ್ಲ.
ಆದರೆ ಪಬ್ಲಿಕ್ ಟಿವಿ ಮಾತ್ರ ಸುಮಲತಾ ಅವರ ಬಗ್ಗೆ ಕೊಟ್ಟ ಸುದ್ದಿಯನ್ನು ನೋಡಿದ್ರೆ, ಜೆಡಿಎಸ್ ನಾಯಕರು, ಕಾರ್ಯಕರ್ತರು ಸುಮಲತಾ ವಿರುದ್ಧ ಸಿಡಿದೇಳುವುದರಲ್ಲಿ ಸಂಶಯವೇ ಇರಲಿಲ್ಲ.
ಪಬ್ಲಿಕ್ ಟಿವಿ ಕೊಟ್ಟಿರುವ ಸುದ್ದಿಯ ಸ್ಕೀನ್ ಶಾಟ್ ಗಳನ್ನು ಒಂದ್ಸಲ ನೋಡಿಕೊಳ್ಳಿ.
ಮಾಧ್ಯಮಗಳು ಅಭಿವೃದ್ಧಿಗೆ ಪೂರಕವಾಗಿರಬೇಕು, ಜನರ ನಡುವೆ ದ್ವೇಷ ಹುಟ್ಟಿಸುವಂತಿರಬಾರದು, ಸರಿಯಾದ ಮಾಹಿತಿಯನ್ನು ಕೊಡುವಂತಿರಬೇಕು ಎಂದು ಪತ್ರಿಕಾ ದಿನಾಚರಣೆಯಲ್ಲಿ ಭಾಷಣ ಬಿಗಿಯಲಾಗಿದೆ. ಆದರೆ ಪಬ್ಲಿಕ್ ಟಿವಿ ಮಾಡಿದ್ದೇನು.
ಕನಿಷ್ಟ ಪಕ್ಷ ಕರ್ನಾಟಕ ವಿಶ್ವಾಸ ಇಟ್ಟುಕೊಂಡಿರುವ ಪತ್ರಕರ್ತ ರಂಗನಾಥ್ ಅವರ ವಾಹಿನಿಯಾದರೂ ಮಾಧ್ಯಮ ಧರ್ಮ ಪಾಲಿಸುತ್ತದೆ ಅಂದುಕೊಂಡರೆ ಅದು ಸುಳ್ಳಾಗಿದೆ.
ಸಾಲ ಮನ್ನಾ ಬರೀ ಭರವಸೆ, ಅನ್ನದಾತರು ಎಲ್ಲಿ ಹೋಗಬೇಕು,? ರೈತರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಕಾರಣ, ಸಿಎಂಗೆ ಸುಮಲತಾ ಟಾಂಗ್, ದೋಸ್ತಿ ಸರ್ಕಾರದ ವಿರುದ್ಧ ಸಂಸತ್ ನಲ್ಲಿ ಸುಮಲತಾ ಅಬ್ಬರ ಹೀಗೆ ಸಾಲು ಸಾಲು ಸುಳ್ಳು ಪಬ್ಲಿಕ್ ಟಿವಿ ಪರದೆ ಮೇಲೆ ಕಾಣಿಸಿತ್ತು.
ಖಂಡಿತಾ ಇವೆಲ್ಲವೂ ರಂಗನಾಥ್ ಅವರ ಅರಿವಿಗೆ ಬರುವುದಿಲ್ಲ. ಈಗ ಅರಿವಿಗೆ ತರುವ ಕೆಲಸವನ್ನು ನಾವು ಮಾಡುದ್ದೇವೆ. ಕೈಗೊಂಡ ಕ್ರಮವೇನು ಅನ್ನುವುದನ್ನು ದಯವಿಟ್ಟು ಹೇಳ್ತಿರಾ ಸರ್.
Discussion about this post