Deepavali ಗಾಗಿ ಸಿದ್ದರಾಮಯ್ಯ ಕೊಡ್ತಾರ ಬಸ್ ಭಾಗ್ಯ
ಸಾಲು ಸಾಲು ಸರ್ಕಾರಿ ರಜೆ, ಹಬ್ಬ ಹರಿ ದಿನ ಬಂದ್ರೆ ಸಾಕು ಖಾಸಗಿ ಬಸ್ ಮಾಲೀಕರು ಕಾಸು ಮಾಡಲು ಕುಳಿತು ಬಿಡ್ತಾರೆ. ಸರಣಿ ರಜೆಗಳೆಲ್ಲಾ ಖಾಸಗಿ ಬಸ್ ಮಾಲೀಕರಿಗೆ ಸಂಕ್ರಾತಿಯೂ ಹೌದು, ದೀಪಾವಳಿಯೂ ಹೌದು. ಇನ್ನು ದೀಪಾವಳಿಯೇ ( Deepavali )ಬಂದು ಬಿಟ್ರೆ ಕೇಳಬೇಕಾ, ಪ್ರಯಾಣಿಕರನ್ನು ದೋಚುವುದೇ. ಹಾಗಂತ ಇದೇನು ಹೊಸದಲ್ಲ, ಪ್ರತೀ ವರ್ಷದ ಸಂಪ್ರದಾಯ. ಈ ಹಿಂದಿನ ಸರ್ಕಾರಗಳೂ ಖಾಸಗಿ ಬಸ್ ಮಾಲೀಕರ ಮುಂದೆ ನಡು ಬಗ್ಗಿಸಿ ನಿಂತಿತ್ತು. ಈ ಬಾರಿ ಸಿದ್ದರಾಮಯ್ಯ ಸರ್ಕಾರವೂ ಹೊರತಲ್ಲ ಶರಣಾಗಿದೆ.
ಹೌದು ಸಾಲು ಸಾಲು ರಜೆ ಹಿನ್ನಲೆಯಲ್ಲಿ ಟಿಕೆಟ್ ದರ ಏರಿಸದಂತೆ ಸಾರಿಗೆ ಇಲಾಖೆ ಖಾಸಗಿ ಬಸ್ ಮಾಲೀಕರಿಗೆ ಸೂಚಿಸಿದೆ. ( ಹೀಗೆ ಸೂಚಿಸುವುದು ನಾಟಕದ ಒಂದು ಭಾಗವೂ ಹೌದು). ಆದರೆ ಸಾರಿಗೆ ಇಲಾಖೆಯ ಸೂಚನೆಗೆ ಕ್ಯಾರೇ ಅನ್ನದ ಬಸ್ ಮಾಲೀಕರು ಮನಸ್ಸಿಗೆ ದೋಚಿದ ದರ ನಿಗದಿ ಮಾಡಿದ್ದಾರೆ.
ಇದನ್ನೂ ಓದಿ : ಹೆಲ್ಮೆಟ್ ಜಾಗೃತಿಗೆ Angelo Mathews ಏಂಜೆಲೋ ಮ್ಯಾಥ್ಯೂಸ್ ‘ಟೈಂ ಔಟ್’ ಪ್ರಕರಣ
ಪ್ರತೀ ಸಲ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬೆಂಗಳೂರಿನಿಂದ ದೂರದ ಊರಿಗೆ ತೆರಳುವ ಪ್ರಯಾಣಿಕರಿಂದ ಮೂರು ನಾಲ್ಕು ಪಟ್ಟು ಹಣವನ್ನು ವಸೂಲಿ ಮಾಡಲಾಗುತ್ತದೆ. ಈ ಬಗ್ಗೆ ಸಾರಿಗೆ ಇಲಾಖೆಗೆ ಪ್ರತೀ ವರ್ಷ ದೂರು ಸಲ್ಲಿಕೆಯಾಗುತ್ತದೆ. ಸಾರಿಗೆ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವುದಾಗಿಯೂ ಹೇಳುತ್ತದೆ. ಕೆಲವೊಮ್ಮೆ ದಂಡವನ್ನು ವಿಧಿಸಿದ ಉದಾಹರಣೆಗಳೂ ಇವೆ. ಆದರೆ ಖಾಸಗಿ ಬಸ್ ಮಾಲೀಕರು ತಮ್ಮ ಚಾಳಿ ಬಿಟ್ಟಿಲ್ಲ. ಖಾಸಗಿ ಬಸ್ ಮಾಲೀಕರ ವಸೂಲಿ ಬಾಕತನಕ್ಕೆ ಬ್ರೇಕ್ ಹಾಕಲು ಸರ್ಕಾರಕ್ಕೂ ಸಾಧ್ಯವಾಗಿಲ್ಲ.
ಇನ್ನು ಈ ಬಾರಿ ಎರಡನೇ ಶನಿವಾರ, ದೀಪಾವಳಿ ಹಬ್ಬದ ಜೊತೆಗೆ ಬಂದಿರುವ ಕಾರಣ ಸಾಲು ಸಾಲು ರಜೆಗಳು ಲಭ್ಯವಾಗಿದೆ. ಹೀಗಾಗಿ ರಾಜಧಾನಿಯಿಂದ ವಿವಿಧ ಜಿಲ್ಲೆಗಳಿಗೆ ತೆರಳುವವರು ಶುಕ್ರವಾರ ರಾತ್ರಿಯೇ ಪ್ರಯಾಣ ಬೆಳೆಸುತ್ತಾರೆ. ಇದರ ಲಾಭ ಪಡೆಯಲು ಮುಂದಾಗಿರುವ ಖಾಸಗಿ ಬಸ್ ಮಾಲೀಕರು ಪ್ರಯಾಣ ದರವನ್ನು ಅನೈತಿಕವಾಗಿ ಅವೈಜ್ಞಾನಿಕವಾಗಿ ಏರಿಸಿದ್ದಾರೆ. ಶೇ 5 ರಿಂದ ಶೇ 10ರಷ್ಟು ದರ ಏರಿಸಿದ್ರೆ ಪರವಾಗಿಲ್ಲ, ಸಹಿಸಿಕೊಳ್ಳಬಹುದಿತ್ತು.
KSRTC ಕೂಡಾ ಹೀಗೆ ಹಬ್ಬದ ಸಂದರ್ಭದಲ್ಲಿ ಸದ್ದಿಲ್ಲದೆ ದರ ಏರಿಸುತ್ತದೆ. ಆದರೆ ಅದು ಶೇ 5 ರಿಂದ ಶೇ 10ರಷ್ಟು ಮಾತ್ರ ಅನ್ನುವುದು ಗಮನಾರ್ಹ.
Private bus fares from Bengaluru to cities such as Hubballi-Dharwad, Mangaluru, Belagavi, Vijayapura, Kalaburagi, Hyderabad and Chennai have shot through the roof ahead of the Deepavali holidays.
Discussion about this post