ಹಣೆಯ ಮೇಲೆ ನಾಮ ಹಾಕಿಕೊಂಡಿದ್ರು ಇರಿಯಲಾಗುತ್ತದೆ ಅಂದ್ರೆ ಅದೆಷ್ಟರ ಮಟ್ಟಿಗೆ ಇವರ ಮನಸ್ಸಿನಲ್ಲಿ ವಿಷ ಬೀಜ ಬಿತ್ತಿರಬೇಕು ( Prem Singh)
ಶಿವಮೊಗ್ಗ : ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಮಾಯಕ ಕಾರ್ಮಿಕನೊಬ್ಬನಿಗೆ ಇರಿದ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಮಾಲ್ ನಲ್ಲಿ ವೀರ ಸಾವರ್ಕರ್ ಫೋಟೋ ಹಾಕಿದ ಕುರಿತಂತೆ ಎದ್ದ ವಿವಾದ, ವೀರ ಸಾವರ್ಕರ್ ಮತ್ತು ಟಿಪ್ಪು ಸುಲ್ತಾನ್ ಫೋಟೋ ವಿವಾದಕ್ಕೆ ತಿರುಗಿತ್ತು. ಇದರ ಬೆನ್ನಲ್ಲೇ ಪ್ರೇಮ್ ಸಿಂಗ್ ( Prem Singh) ಅನ್ನುವ ಅಮಾಯಕನಿಗೆ ಚೂರಿಯಿಂದ ಇರಿದ ಪ್ರಕರಣವೂ ನಡೆದಿತ್ತು. ಈ ಮೂಲಕ ಶಿವಮೊಗ್ಗದಲ್ಲಿ ಕೋಮು ಗಲಭೆಗೆ ಹುನ್ನಾರ ನಡೆಸಲಾಗಿದೆಯೇ ಅನ್ನುವ ಅನುಮಾನ ಹುಟ್ಟಿತ್ತು. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ನಡುವೆ ಪ್ರೇಮ್ ಸಿಂಗ್ ಗೆ ಚೂರಿದ ಹಾಕಿದ ಆರೋಪಿಗಳು ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಸ್ಫೋಟಕ ಮಾಹಿತಿಗಳನ್ನು ಕೊಟ್ಟಿದ್ದಾರೆ. ಪ್ರೇಮ್ ಸಿಂಗ್ ಉದ್ದ ನಾಮ ಹಾಕಿಕೊಂಡಿದ್ದ ಅನ್ನುವ ಕಾರಣಕ್ಕೆ ಆತನಿಗೆ ಚಾಕುವಿನಿಂದ ಇರಿದಿದ್ದೇವೆ ಎಂದು ಕಿರಾತಕರು ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾರೆ.
ಇದನ್ನೂ ಓದಿ : praveen nettar case : ಕೊಲೆಗಾರರ ಆಸ್ತಿ ಮುಟ್ಟುಗೋಲಿಗೆ ಕ್ರಮ : ಅಲೋಕ್ ಕುಮಾರ್
ಆಗಸ್ಟ್ 15 ರಂದು ಶಿವಮೊಗ್ಗ ಪಟ್ಟಣದ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಧಿ ಬಜಾರ್ ತರಕಾರಿ ಮಾರುಕಟ್ಟೆ ಸಮೀಪ ಮನೆ ಕಡೆ ಹೋಗುತ್ತಿದ್ದ 20 ವರ್ಷದ ಪ್ರೇಮ್ ಸಿಂಗ್ ಮೇಲೆ ನದೀಮ್, ಅಬ್ದುಲ್ ರೆಹಮಾನ್ ಮತ್ತು ಇತರ ಇಬ್ಬರು ಆರೋಪಿಗಳು ದಾಳಿ ನಡೆಸಿದ್ದರು.
Discussion about this post