ಪೊಲೀಸ್ ಮುಖ್ಯಸ್ಥರೇ ( Cops cannot stop vehicle Praveen sood ) ಹೊರಡಿಸಿದ ಆದೇಶ ಜಾರಿಯಾಗೋದಿಲ್ಲ ಅಂದ್ರೆ ಪೊಲೀಸ್ ವ್ಯವಸ್ಥೆ ಹೇಗಿರಬಹುದು ಊಹಿಸಿ
ಬೆಂಗಳೂರು : ಸಂಚಾರ ಉಲ್ಲಂಘನೆ ನೆಪದಲ್ಲಿ ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ದಾಖಲೆ ಪರಿಶೀಲಿಸಿ ಜನರಿಗೆ ತೊಂದರೆ ಕೊಡಬೇಡಿ ಎಂದು ಸಾಕಷ್ಟು ವಾರಗಳ ಹಿಂದೆ ಡಿಜಿಪಿ ಪ್ರವೀಣ್ ಸೂದ್ ( Cops cannot stop vehicle Praveen sood ) ಆದೇಶ ಹೊರಡಿಸಿದ್ದರು. ಆದರೆ ಪೊಲೀಸ್ ಮಹಾನಿರ್ದೇಶಕರು ಹೊರಡಿಸಿದ್ದ ಆದೇಶ ಪಾಲನೆಯಾಗಿರಲಿಲ್ಲ. ಅವರೇನೂ ಕಚೇರಿಯಲ್ಲಿ ಕೂತು ಹೊರಡಿಸಿದ್ರು ಅಂತಾ ಬೀದಿಯಲ್ಲಿ ನಿಂತ ಪೊಲೀಸರು ವಾಹನಕ್ಕೆ ಕೈ ಹಾಕುವ ಕಾರ್ಯ ನಿಂತಿರಲಿಲ್ಲ.
ಇದೀಗ ಎರಡನೇ ಸಲ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಜನರಿಗೆ ತೊಂದರೆ ಕೊಡುವ ರೀತಿಯಲ್ಲಿ ವಾಹನಗಳನ್ನು ಅಡ್ಡ ಹಾಕಬೇಡಿ ಎಂದು ಮತ್ತೊಂದು ಆದೇಶ ಹೊರಡಿಸಿದ್ದಾರೆ. ಎರಡನೇ ಸಲದ ಆದೇಶದಲ್ಲಿ ಸಾಕಷ್ಟು ವಿಷಯಗಳನ್ನು ಪ್ರಸ್ತಾಪಿಸಲಾಗಿದೆ.
ಇದನ್ನೂ ಓದಿ : DMK MP Senthilkumar : ನಾವು ನಾಸ್ತಿಕರು : ಭೂಮಿ ಪೂಜೆ ವೇಳೆ ಹಿಂದೂ ಅರ್ಚಕರನ್ನು ಕಂಡು ಡಿಎಂಕೆ ಸಂಸದ ಗರಂ
ಈ ಹಿಂದೆ ಸಂಚಾರ ನಿಯಮ ಉಲ್ಲಂಘನೆ ನೆಪದಲ್ಲಿ ವಾಹನಗಳನ್ನು ಅಡ್ಡಗಟ್ಟಿ ಕಿರುಕುಳ ನೀಡುತ್ತಿರುವ ಬಗ್ಗೆ ಡಿಜಿಪಿಗೆ ದೂರುಗಳು ಸಲ್ಲಿಕೆಯಾಗಿತ್ತು. ಈ ಹಿನ್ನಲೆಯಲ್ಲಿ ಕಣ್ಣಿಗೆ ಕಾಣುವಂತೆ ಸಂಚಾರ ನಿಯಮ ಉಲ್ಲಂಘಣೆ ಕಂಡರೆ ಮಾತ್ರ ವಾಹನ ತಡೆಯಿರಿ ಎಂದು ಸೂಚಿಸಲಾಗಿತ್ತು. ಹಾಗಿದ್ದರೂ ಮರೆಯಲ್ಲಿ ನಿಂತು ವಾಹನ ನಿಲ್ಲಿಸುವ ಕಾರ್ಯವನ್ನು ಪೊಲೀಸರು ಮುಂದುವರಿಸಿದ್ದರು.
ಇದೀಗ ಎರಡನೇ ಪೊಲೀಸ್ ಮಹಾನಿರ್ದೇಶಕರ ಎರಡನೇ ಆದೇಶಕ್ಕೆ ಕೆಳಹಂತದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಗೌರವ ಕೊಡ್ತಾರ ಕಾದು ನೋಡಬೇಕು.
ಬೊಮ್ಮಾಯಿ ಸಂಪುಟದ ಸಚಿವರ ಮೇಲೆ ಸಂತೋಷ್ ಗರಂ
ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಅನ್ನುವುದೇ ವಿಪರ್ಯಾಸ. ಈ ನಡುವೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಸಚಿವರಿಗೆ ಚಾಟಿ ಬೀಸಿದ್ದಾರೆ
ಬೆಂಗಳೂರು : ಸರಕಾರವನ್ನು ಕೇವಲ ಸಿಟಿ ರವಿ, ನಳಿನ್ ಕುಮಾರ್ ಕಟೀಲು ಸಮರ್ಥಿಸಿಕೊಂಡರೆ ಸಾಕಾ, ಸಚಿವರು ತಮ್ಮ ಸರ್ಕಾರ, ತಮ್ಮ ಪಕ್ಷವನ್ನು ಸಮರ್ಥ ಮಾಡಿಕೊಳ್ಳಲು ಇರುವ ಸಮಸ್ಯೆಯಾದರೇನು, ಹೀಗೆ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ತಮ್ಮ ಅಸಂತೋಷವನ್ನು ಹೊರ ಹಾಕಿದ್ದಾರೆ ಎಂದು ಮೂಲಗಳು ಹೇಳಿವೆ.
ಬೊಮ್ಮಾಯಿ ಸಂಪುಟದ ಬಹುತೇಕ ಸಚಿವರು ಕೇವಲ ತಮ್ಮ ಇಲಾಖೆಗೆ ಸೀಮಿತವಾಗಿದ್ದಾರೆ. ಸರ್ಕಾರ ಮತ್ತು ಪಕ್ಷವನ್ನು ಸಮರ್ಥಿಸಿಕೊಳ್ಳಲು ವಿಫಲರಾಗುತ್ತಿದ್ದಾರೆ ಅನ್ನುವುದೇ ಸಂತೋಷ್ ಅವರ ಅಸಂತೋಷಕ್ಕೆ ಕಾರಣ ಎನ್ನಲಾಗಿದೆ. ಶುಕ್ರವಾರ ದೇವನಹಳ್ಳಿಯ ರೆಸಾರ್ಟ್ ನಲ್ಲಿ ನಡೆದ ಚಿಂತನಾ ಸಭೆಯಲ್ಲಿ ಮಾತನಾಡಿದ ಬಿ ಎಲ್ ಸಂತೋಷ್ ಸಚಿವರ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರಂತೆ.
ಸಚಿವರು ತಮ್ಮ ಇಲಾಖೆಗೆ ಸೀಮಿತವಾದರೆ ಆಗಲ್ಲ, ಸರ್ಕಾರ ಅಂದ್ರೆ ಅದು ಒಗ್ಗಟ್ಟಿನಿಂದ ನಡೆಯುತ್ತದೆ. ಸಚಿವರು ತಂಡವಾಗಿ ಕೆಲಸ ಮಾಡಿದಾಗ ಮಾತ್ರ ಒಗ್ಗಟ್ಟು ಕಾಣಿಸುತ್ತದೆ ಅಂದ ಸಂತೋಷ್ , ಹೊಂದಾಣಿಕೆ ರಾಜಕೀಯ ಬಗ್ಗೆಯೂ ಕಿಡಿಕಾರಿದ್ದಾರಂತೆ. ಬೆಂಗಳೂರಿನಲ್ಲೇ ಈ ಹೊಂದಾಣಿಕೆ ರಾಜಕೀಯ ಹೆಚ್ಚಾಗಿದ್ದು, ಕೆಲ ಜಿಲ್ಲೆಗಳಿಗೂ ಹರಡುತ್ತಿದೆ. ಇದರಿಂದ ಕಾರ್ಯಕರ್ತರು ಬೇಸರಗೊಂಡಿದ್ದಾರೆ. ಅನ್ಯ ಪಕ್ಷದ ಮುಖಂಡರಿಗೆ ನಿಷ್ಠೆ ತೋರುವುದರಿಂದ ನಮ್ಮ ಪಕ್ಷ ಕಾರ್ಯಕರ್ತರು ಕಣ್ಣೀರು ಹಾಕುವಂತಾಗಿದೆ ಎಂದು ಸಂತೋಷ್ ಬೇಸರ ಹೊರ ಹಾಕಿದ್ದಾರೆ ಅನ್ನಲಾಗಿದೆ.
ಇಲ್ಲಿ ನೋಡಿದರೆ ಬಿಜೆಪಿ ಸಚಿವರು ಸರ್ಕಾರ ಪಕ್ಷವನ್ನು ಸಮರ್ಥಿಸಿಕೊಳ್ಳುತ್ತಿಲ್ಲ ಅಂತಾರೆ, ಅಲ್ಲಿ ನೋಡಿದರೆ ಸಿದ್ದರಾಮಯ್ಯ ನಾನು ಒಬ್ಬ ಮಾತನಾಡಿದ್ರೆ ಬಿಜೆಪಿಯ 25 ಮಂದಿ ನನ್ನ ಮೇಲೆ ಮುಗಿ ಬೀಳ್ತಾರೆ, ನನ್ನ ಸಹಾಯಕ್ಕೆ ಕಾಂಗ್ರೆಸ್ ನ ಯಾವೊಬ್ಬ ಮುಖಂಡನು ಬರೋದಿಲ್ಲ, ಯಾವ ನಾಯಕನೂ ಮಾತನಾಡೋದಿಲ್ಲ ಅಂತಾರೆ. ಹಾಗಾದ್ರೆ ಯಾವುದು ಸತ್ಯ
Discussion about this post