ಪ್ರತಾಪ್ ಸಿಂಹ ಇದೀಗ ಸಂಖ್ಯಾಶಾಸ್ತ್ರದ ಪ್ರಕಾರ ಹೆಸರು ಬದಲಾಯಿಸಿಕೊಂಡಿದ್ದಾರೆ
ಈ ರಾಜಕಾರಣಿಗಳಿಗೆ ಇದ್ದಷ್ಟು ದೇವರ ಭಯ, ರಾಜಕಾರಣಿಗಳಿಗೆ ಇರುವಷ್ಟು ಜ್ಯೋತಿಷ್ಯದ ಮೇಲಿನ ನಂಬಿಕೆ ಅದ್ಯಾರಿಗೂ ಇರಲು ಸಾಧ್ಯವಿಲ್ಲ. ಈ ರಾಜಕಾರಣಿಗಳು ದೇವರಿಗೆ ಹೊತ್ತು ಕೊಳ್ಳುವ ಹರಕೆಗಳೇ ಇದಕ್ಕೆ ಸಾಕ್ಷಿ. ಇದೀಗ ಅದ್ಯಾಗ ಈ ವಿಚಾರ ಅಂದ್ರೆ ಸಂಸದ ಪ್ರತಾಪ್ ಸಿಂಹ ಜ್ಯೋತಿಷ್ಯದ ಮೇಲಿನ ಅಪಾರ ನಂಬಿಕೆಯಿಂದ ತಮ್ಮ ಹೆಸರನ್ನೇ ಬದಲಾಯಿಸಲು ಹೊರಟ್ಟಿದ್ದಾರೆ
2024ರ ಲೋಕಸಭಾ ಎಲೆಕ್ಷನ್ ಗೆ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಸಿಗೋದು ಅನುಮಾನ ಅನ್ನುವ ಸುದ್ದಿಗಳು ಹರಿದಾಡುತ್ತಿದೆ. ಜೊತೆಗೆ ಮೈಸೂರಿನಲ್ಲಿ ಸ್ಪರ್ಧಿಸಿದರೂ ಸೋಲು ಭೀತಿ ಅವರನ್ನು ಕಾಡುತ್ತಿದೆ. ಈ ನಡುವೆ ಸದಾನಂದಗೌಡರಿಂದ ತೆರವಾಗಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದತ್ತ ಅವರ ದೃಷ್ಟಿ ನೆಟ್ಟಿದೆ.
ಇದನ್ನೂ ಓದಿ : ಇಂಡೋನೇಷ್ಯಾ ಕ್ರಿಕೆಟ್ ಟೀಂ ಸೇರಿದ ಬಂಟ್ವಾಳದ ಹಳ್ಳಿಯ ಯುವಕ
ಮೈಸೂರು- ಕೊಡಗು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಅವರು ಸಹ ತಮ್ಮ ಇಂಗ್ಲಿಷ್ ಹೆಸರಿನಲ್ಲಿ ಸಂಖ್ಯಾಶಾಸ್ತ್ರದ ಅನ್ವಯ ಸಣ್ಣ ಬದಲಾವಣೆ ಮಾಡಿಕೊಂಡಿದ್ದಾರೆ. Prathap simha ಎಂಬ ಹೆಸರನ್ನು ಅವರು Pratap Simmha ಎಂದು ಬದಲಿಸಿಕೊಂಡಿರುವುದಾಗಿ ಅಫಿಡೆವಿಟ್ ಮೂಲಕ ಘೋಷಿಸಿಕೊಂಡಿದ್ದಾರೆ.
Yeddyurappa ಎಂದು ಇದ್ದ ಹೆಸರನ್ನು Yediyurappa ಎಂದು ಬದಲಾಯಿಸಿಕೊಂಡಿದ್ದರು. ಎಂಎಲ್ಸಿ ಹೆಚ್ ವಿಶ್ವನಾಥ್ ಕೂಡ ತಮ್ಮ ಹೆಸರಿನ ಹಿಂದೆ ಅಡಗೂರು ಎಂದು ಸೇರಿಸಿಕೊಂಡಿದ್ದರು.ತಮಿಳುನಾಡು ಮಾಜಿ ಸಿಎಂ ಮುಖ್ಯಮಂತ್ರಿ ಜೆ. ಜಯಲಲಿತಾ ಸೇರಿ ಹತ್ತಾರು ರಾಜಕಾರಣಿಗಳು ಸಂಖ್ಯಾಶಾಸ್ತ್ರ ಮತ್ತು ರಾಜಕೀಯ ಭವಿಷ್ಯದ ದೃಷ್ಟಿಯಿಂದ ಹೆಸರು ಬದಲಿಸಿಕೊಂಡಿದ್ದರು.
BJP MP Simha changes name
In preparation for the Lok Sabha elections Mysuru MP Prathap Simhahas changed his name. He has removed ‘h’ from his first name and changed it to ‘Pratap’ and added ‘m’ to his surname and spells it as ‘Simmha’ through an affidavit sworn before a notary in the city.
Discussion about this post