ಬೆಂಗಳೂರು : ರಾಜಕೀಯದ ಲಾಭಕ್ಕಾಗಿ ಸಿದ್ದರಾಮಯ್ಯ ಹುಟ್ಟು ಹಾಕಿದ ಕೇಸರಿ ವಿವಾದ ಇದೀಗ ಅಭಿವೃದ್ಧಿ ವಿಚಾರಗಳನ್ನು ಮರೆಮಾಚಿ ಸದ್ದು ಮಾಡುತ್ತಿದೆ. ಎರಡೂ ಪಕ್ಷಗಳು ಪರಸ್ಪರ ಆರೋಪದಲ್ಲಿ ತೊಡಗಿದೆ.
ಈ ನಡುವೆ ಸಿದ್ದರಾಮಯ್ಯ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಪೊಲೀಸರು ಕೇಸರಿ ಶಾಲು ಧರಿಸಿದ್ದನ್ನು ಮತ ಬ್ಯಾಂಕ್ ರಾಜಕೀಯ ಮಾಡಲಾಗುತ್ತಿದೆ. ಚುನಾವಣೆಯ ಹಿನ್ನಲೆಯಲ್ಲಿ ಕೋಮು ಭಾವನೆಯನ್ನು ಪ್ರಚೋದಿಸಲಾಗುತ್ತಿದೆ ಅಂದಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕೇಸರಿ ಬಣ್ಣ ನಿಷೇಧಕ್ಕೆ ಒಳಗಾಗಿಲ್ಲ, ರಾಷ್ಟ್ರ ಧ್ವಜದಲ್ಲೇ ಕೇಸರಿ ಬಣ್ಣವಿದೆ ಹಾಗಂತ ಕೆಲವರು ಅದನ್ನು ತೆಗೆಯಲು ಹೇಳಿದರೆ ತೆಗೆದು ಹಾಕಲು ಸಾಧ್ಯವೇ. ನಾಳೆ ಕೇಸರಿ ಬಾತ್ ತಿನ್ನಬಾರದೆಂದು ಬ್ಯಾನ್ ಮಾಡಿ ಅಂತಾನೂ ಹೇಳಬಹುದು, ಅದಕ್ಕೆ ಹಸಿರು ಬಣ್ಣವೋ ಮತ್ಯಾವುದೋ ಬಣ್ಣ ಹಾಕಿ ಅಂತ ಹೇಳಬಹುದು, ಆಗ ಹಾಗೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಈ ನಡುವೆ ಸಿದ್ದರಾಮಯ್ಯ ಅವರಿಗೆ ತಿರುಗೇಟು ಕೊಟ್ಟಿರುವ ಸಚಿವ ಸುನಿಲ್ ಕುಮಾರ್, ಕೇಸರಿ ತ್ಯಾಗದ ಸಂಕೇತ. ಪೊಲೀಸರಾಗಲಿ, ಬೇರೆಯವರಾಗಲಿ ಅದನ್ನು ಧರಿಸಿದರೆ ಸಿದ್ದರಾಮಯ್ಯ ಅವರಿಗೆ ಸಮಸ್ಯೆಯೇನು ಎಂದು ಪ್ರಶ್ನಿಸಿದ್ದಾರೆ.
Discussion about this post