ಪವಿತ್ರಾ ಲೋಕೇಶ್ pavithra lokesh ಗುಪ್ತಗಾಮಿನಿ ಅನ್ನೋ ಸೀರಿಯಲ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದರು.
ಪವಿತ್ರಾ ಲೋಕೇಶ್, pavithra lokesh ಕನ್ನಡದ ಅದ್ಭುತ ನಟಿ. ಇತ್ತೀಚೆಗೆ ವೈಯುಕ್ತಿಕ ಕಾರಣಗಳಿಂದ ಸುದ್ದಿಯಾದ ಕಾರಣ ಜನ ಅವರನ್ನು ಒಂದಿಷ್ಟು ಟೀಕಿಸಿದ್ದರು. ಹಾಗಂತ ಅದು ಅವರ ವೈಯುಕ್ತಿಕ ಬದುಕು, ಆ ಬಗ್ಗೆ ನಿರ್ಧಾರ ಮತ್ತು ನಿಲುವು ತಳೆಯುವ ಅಧಿಕಾರ ಅವರಿಗಿದೆ. ಅವರ ನಿರ್ಧಾರಗಳಲ್ಲಿ ಮೂಗು ತೂರಿಸುವ , ಸರಿ ತಪ್ಪು ಎಂದು ತೀರ್ಪು ಕೊಡುವ ಅಧಿಕಾರ ನಮಗಿಲ್ಲ.
ಏನಿವೇ, ಇದೀಗ ಪವಿತ್ರಾ ಲೋಕೇಶ್ ವಿಚಾರ ಯಾಕಪ್ಪ ಅಂದ್ರೆ, ಕನ್ನಡ ಧಾರಾವಾಹಿಯೊಂದರಲ್ಲಿ ಅವರು ನಟಿಸಲಿದ್ದಾರೆ ಅನ್ನುವ ಸುದ್ದಿಗಳು ಬರುತ್ತಿದೆ. ಸದ್ಯಕ್ಕೆ ಯಾವ ಧಾರಾವಾಹಿ ಅನ್ನೋದು ಮಾತ್ರ ಗೊತ್ತಾಗಿಲ್ಲ.
ಇದನ್ನೂ ಓದಿ : 18 ಜಿಲ್ಲೆ ಸಂಪರ್ಕಿಸೋ Peenya Flyover 4 ದಿನ ಬಂದ್
ಸದ್ಯಕ್ಕೆ ಶ್ರೀಗೌರಿ, ಲಕ್ಷ್ಮಿ ಟಿಫನ್ ರೂಮ್, ಲಕ್ಷ್ಮಿ ನಿವಾಸ ಅನ್ನೋ ಧಾರಾವಾಹಿಗಳು ವಿವಿಧ ವಾಹಿನಿಗಳಲ್ಲಿ ಪ್ರಸಾರಕ್ಕೆ ಸಿದ್ದವಾಗಿದೆ.ಈ ಪೈಕಿ ಯಾವುದಾದರೊಂದು ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನಲಾಗಿದೆ.
ಒಂದು ವೇಳೆ ಈ ಮೂರು ಪ್ರಾಜೆಕ್ಟ್ ಗಳಲ್ಲಿ ಪವಿತ್ರಾ ಲೋಕೇಶ್ ಕಾಣಿಸಿಕೊಂಡಿಲ್ಲ ಅಂದ್ರೆ ಪದ್ಮಾವತಿ ಅನ್ನೋ ಹೊಸ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳೋದು ಪಕ್ಕಾ ಅನ್ನಲಾದೆ. 201ರಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಪ್ರಾರಂಭಿಸಿದ್ದ ಪದ್ಮಾವತಿ 2019ರಲ್ಲಿ ಮುಕ್ತಾಯಗೊಂಡಿತ್ತು.
ಇದೇ ಟೈಟಲ್ ನಲ್ಲಿ ಕಲರ್ಸ್ ವಾಹಿನಿ ಧಾರಾವಾಹಿಯೊಂದನ್ನು ನಿರ್ಮಿಸುತ್ತಿದ್ದು, ಅದರಲ್ಲಿ ಪವಿತ್ರಾ ಲೋಕೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಅನ್ನೋದು ಊಹೆ. ಸದ್ಯಕ್ಕೆ ಎಲ್ಲವೂ ಗಾಳಿ ಸುದ್ದಿ.
ಪವಿತ್ರಾ ಲೋಕೇಶ್ ಅವರು ಜೀವನ್ಮುಖಿ, ಗುಪ್ತಗಾಮಿನಿ, ಈಶ್ವರಿ, ಸ್ವಾಭಿಮಾನ, ಒಲವೇ ನಮ್ಮ ಬದುಕು, ದೇವಿ, ಅರಮನೆ ಗಿಳಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಗುಪ್ತಗಾಮಿನಿ ಧಾರಾವಾಹಿಯ ನಟನೆ ಅವರಿಗೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿತ್ತು.
Read this : ಅಯೋಧ್ಯೆ ಮಂದಿರ ಉದ್ಘಾಟನೆಯಂದೆ ಹೆರಿಗೆ ಮಾಡಿಸಿ
Discussion about this post