ParisOlympics2024 : 61 ಕೆಜಿಯಿಂದ 57 ಕೆಜಿಗೆ ಇಳಿಯಲು ಮಾಡಿದ ಕಸರತ್ತು ಹೇಗಿತ್ತು ಗೊತ್ತಾ..?
ParisOlympics2024ರಲ್ಲಿ ಈ ಬಾರಿ ಬಹು ಚರ್ಚೆಯಾಗಿದ್ದು, ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ ಅವರ ತೂಕದ ವಿಚಾರ. ಹಾಗೇ ನೋಡಿದ್ರೆ ವಿನೇಶ್ ಪೋಗಟ್ ಜಾಗದಲ್ಲಿ ಬೇರೆ ಯಾವ ಸ್ಪರ್ಧಿ ಇರುತ್ತಿದ್ರೂ ಈ ಮಟ್ಟಿಗೆ ಚರ್ಚೆಯಾಗುತ್ತಿರಲಿಲ್ಲ. ಕಾರಣ ಸಿದ್ದಾಂತಗಳ ಹೊರತಾಗಿಯೂ ಬದುಕಿದೆ..ಆದರೆ ನಿಯಮಗಳ ಹೊರತಾಗಿ ಸ್ಪರ್ಧೆಗಳಿರೋದಿಲ್ಲ ಅನ್ನೋ ಮಾತು ಅನೇಕರಿಗೆ ಗೊತ್ತಿಲ್ಲದೆ ಇರೋದು.
ಅದೇನೇ ಇರಲಿ ಈ ನಡುವೆ ಅಧಿಕ ಭಾರದ ಕಾರಣ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ ಫೈನಲ್ ಪಂದ್ಯದಿಂದ ಅನರ್ಹಗೊಂಡ ಬೆನ್ನಲ್ಲೇ ಶುಕ್ರವಾರ ನಡೆದಿದ್ದ 57 ಕೆಜಿ ವಿಭಾಗದ ಪುರುಷರ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದ ಅಮನ್ ಸೆಹ್ರಾವತ್ ಕೂಡಾ ಅನರ್ಹಗೊಳ್ಳುವ ಭೀತಿಗೆ ಎದುರಾಗಿದ್ದರಂತೆ. ಪಂದ್ಯಕ್ಕೂ ಮುನ್ನ ಅಮನ್ ಕೇವಲ 10 ಗಂಟೆಯಲ್ಲಿ 4.6 ಕೆಜಿ ತೂಕ ಇಳಿಸಿ ಕಂಚಿನ ಪದಕವನ್ನು ಕೊರಳಿಗೇರಿಕೊಂಡ ರೋಚಕ ಕಥೆ ಇದೀಗ ಬಹಿರಂಗಗೊಂಡಿದೆ.
ಅಮನ್ ಸೆಹ್ರಾವತ್ ಸೆಮಿಫೈನಲ್ ಪಂದ್ಯದಲ್ಲಿ ಸೋತ ನಂತರ 61 ಕೆಜಿ ತೂಕ ಹೊಂದಿದ್ದರಂತೆ. ಈ ವೇಳೆ ಕೋಚ್ ಗಳ ನೆರವಿನಿಂದ ನಿರಂತರ 10 ಗಂಟೆಗಳ ಕಾಲ ಕಸರತ್ತು ನಡೆಸಿ ಬರೋಬ್ಬರಿ 4.6 ಕೆಜಿ ತೂಕ ಇಳಿಸಿದ್ದಾರೆ ಎಂದು ಅವರ ಕೋಚ್ ಬಹಿರಂಗಪಡಿಸಿದ್ದಾರೆ.
Many congratulations Aman Sehrawat 🥉👏🇮🇳🙏
— geeta phogat (@geeta_phogat) August 9, 2024
कमाल कर दिया आपने 🫡🇮🇳 pic.twitter.com/xCHazOBqfE
ಅಮನ್ ಸೆಹ್ರಾವತ್ ಅವರ ಕೋಚ್ ವೀರೇಂದ್ರ ದಹಿಯಾ ಮಾಹಿತಿ ಪ್ರಕಾರ, ಗುರುವಾರ ಸಂಜೆ, ಸೆಮಿಫೈನಲ್ ಮುಕ್ತಾಯದ ನಂತ್ರ 61.5 ಕೆಜಿ ತೂಕವನ್ನು ಅಮನ್ ಸೆಹ್ರಾವತ್ ಹೊಂದಿದ್ದರು. ನಿಗದಿತ ಮಿತಿಗಿಂತ 4.5 ಕಿಲೋಗ್ರಾಂಗಳಷ್ಟು ಹೆಚ್ಚು ತೂಕ ಹೊಂದಿದ್ದರು.
ಈಗಾಗಲೇ ತೂಕದ ಕಾರಣಕ್ಕಾಗಿ ಕುಸ್ತಿಯಲ್ಲಿ ಒಂದು ಪದಕ ಕಳೆದುಕೊಂಡು ಆಘಾತದಲ್ಲಿದ್ದ ನಾವು ಮತ್ತೊಂದು ಪದಕ ಕಳೆದುಕೊಳ್ಳಬಾರದೆಂದು ನಿರ್ಧರಿಸಿದ ತಂಡ ತೂಕ ಇಳಿಸುವ ಸಾಹಸಕ್ಕೆ ಮುಂದಾಯ್ತು. ಕುಸ್ತಿ ತಂಡದ ಹಿರಿಯ ಭಾರತೀಯ ತರಬೇತುದಾರರಾದ ಜಗಮಂದರ್ ಸಿಂಗ್ ಜೊತೆ ಕೈ ಜೋಡಿಸಿದ ಆರು ಸದಸ್ಯರ ತಂಡ ಅಮನ್ ಸೆಹ್ರಾವತ್ ಅವರ ತೂಕ ಇಳಿಸೋ ಪ್ರಯತ್ನಕ್ಕೆ ಹಾಕಿತು. ಕೈಯಲ್ಲಿರುವ 10 ಗಂಟೆಯಲ್ಲಿ 4.5 ಕೆಜಿಯನ್ನು ಇಳಿಸಬೇಕಾಗಿತ್ತು.
ಹೇಗಿತ್ತು ತೂಕ ಇಳಿಸೋ ಕಸರತ್ತು
ಮೊದಲಿಗೆ ಅಮನ್ ಸೆಹ್ರಾವತ್ ಅವರನ್ನು ಟ್ರೆಡ್ಮಿಲ್ನಲ್ಲಿ 1 ಗಂಟೆ ಓಡಿಸಲಾಯ್ತು. ಇದಾದ ಬಳಿಕ 5 ನಿಮಿಷ ಬ್ರೇಕ್, ನಂತ್ರ ಒಂದೂವರೆ ಗಂಟೆ ಮ್ಯಾಚ್ ಸೆಷನ್ ಅಭ್ಯಾಸ, ನಂತ್ರ 30 ನಿಮಿಷಗಳ ಬ್ರೇಕ್, ಬಳಿಕ ಬಿಸಿ ನೀರಿನ ಸ್ನಾನ, ಇಷ್ಟು ಹೊತ್ತಿಗೆ ಅಮನ್ ಸೆಹ್ರಾವತ್ 3.6 ಕೆಜಿ ತೂಕ ಕಳೆದುಕೊಂಡಿದ್ದರು.
ಹೀಗಾಗಿ ಉಳಿದ ತೂಕ ಇಳಿಸೋ ಕಡೆ ಕೋಚ್ ಗಳು ಗಮನ ಹರಿಸಿದ್ರು, ಮಸಾಜ್ ಮಾಡಿ, ಲಘು ಜಾಗಿಂಗ್ ಹಾಗೂ ಮತ್ತೆ 15 ನಿಮಿಷಗಳ ರನ್ನಿಂಗ್ ಮಾಡಲಾಯ್ತು. ಅಷ್ಟು ಹೊತ್ತಿಗೆ ಗಡಿಯಾರ ಬೆಳಗಿನ ಜಾವ 4:30 ತೋರಿಸುತ್ತಿದ್ರೆ ತೂಕದ ಯಂತ್ರ ಅಮನ್ ಸೆಹ್ರಾವತ್ ಅವರು 56.9 ಕೆಜಿ ತೂಗುತ್ತಿದ್ದಾರೆ ಅನ್ನುತ್ತಿತ್ತು.
#WATCH | Paris: On winning a bronze medal in the men's freestyle wrestling event at #ParisOlympics2024, wrestler Aman Sehrawat says, "I am very happy and I can't still believe that I have won a medal for the country at the Olympics…" pic.twitter.com/0t4v5JmPSQ
— ANI (@ANI) August 9, 2024
ಅಮನ್ ಸೆಹ್ರಾವತ್ ಅವರ ತೂಕದ ನಿಗದಿತ ಪ್ರಮಾಣಕ್ಕಿಂತ 100 ಗ್ರಾಂ ಕಡಿಮೆಯೇ ಇದ್ದ ಕಾರಣ ತಂಡ ನಿಟ್ಟುಸಿರು ಬಿಟ್ಟಿತ್ತು.
ಈ ಎಲ್ಲಾ ಕಸರತ್ತುಗಳ ನಡುವೆ ಅಮನ್ ಸೆಹ್ರಾವತ್ ಅವರಿಗೆ ಯಾವುದೇ ಆಹಾರ ಪದಾರ್ಥಗಳನ್ನು ನೀಡಿರಲಿಲ್ಲ. ಜೇನುತುಪ್ಪ ಬೆರಸಿದ ಉಗುರುಬೆಚ್ಚಗಿನ ನೀರು, ಇಷ್ಟೇ ಇಷ್ಟು ಕಾಫಿಯನ್ನು ನೀಡಲಾಗಿತ್ತು.
Indian wrestler Aman Sehrawat won the bronze medal for India in the 57kg freestyle at the Paris 2024 Olympic Games on Friday. However, Sehrawat weighed in at 61.5kg after Thursday’s semi-final, some 4.6kg over the permitted limit, causing concern for Indian coaches Jagmandeer Singh and Virender Dahiya, who had already seen Vinesh Phogat disqualified for being just 100g overweight. But what followed was a remarkable journey over the next 10 hours as the coaches and Sehrawat worked tirelessly to shed 4.6kg before the bout.