ಬೆಂಗಳೂರು : ಸಚಿವ ಡಾ. ಸುಧಾಕರ್ ಕೊಟ್ಟಿರುವ ಒನ್ ವೈಫ್ ಛಾಲೆಂಜ್ ಇಂದು ವಿಧಾನಸಭೆಯಲ್ಲೂ ಪ್ರತಿಧ್ವನಿಸಿದೆ.
ಮಧ್ಯಾಹ್ನ ಕಲಾಪ ಪ್ರಾರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಶಾಸಕ ಆರ್ ದೇಶಪಾಂಡೆ, 225 ಸದಸ್ಯರು ಹರಿಶ್ಚಂದ್ರರಲ್ಲ ಎಂದು ಸಚಿವ ಸುಧಾಕರ್ ಆರೋಪಿಸಿದ್ದಾರೆ. ಈ ಆರೋಪದಲ್ಲಿ ಸ್ಪೀಕರ್ ಆದ ನೀವು ಕೂಡಾ ಸೇರಿದ್ದೀರಿ.
ಹೀಗಾಗಿ ಸುಧಾಕರ್ ಅವರು ಕ್ಷಮೆ ಕೇಳಬೇಕು, ಕ್ಷಮೆ ಕೇಳುವುದಿಲ್ಲ ಅನ್ನುವುದಾದರೆ ಸುಧಾಕರ್ ಸವಾಲಿನ ಕುರಿತಂತೆ ನ್ಯಾಯಾಂಗ ತನಿಖೆಯಾಗಲಿ ಎಂದು ಆಗ್ರಹಿಸಿದರು.
ಈ ವೇಳೆ ಸದನದಲ್ಲಿ ಗದ್ದಲ ಗೊಂದಲ ನಡೆಯಿತು. ಈ ನಡುವೆ ಮಾತನಾಡಿದ ಸ್ಪೀಕರ್ ವಿಶ್ವೇಶರ ಹೆಗ್ಗಡೆ, ನಾವು ಯಾರು ಸದನದ ಸದಸ್ಯರ ಹಾಗೂ ಸದನದ ಬಗ್ಗೆ ಯಾವುದೇ ರೀತಿ ಸಂಶಯ, ಅಗೌರವ ಬರುವ ರೀತಿಯಲ್ಲಿ ಯಾರೂ ತಮ್ಮ ಭಾವನೆಯನ್ನು ವ್ಯಕ್ತಪಡಿಸಬಾರದು.
ನಾವೆಲ್ಲ ಜವಬ್ದಾರಿಯುತ ಜನಪ್ರತಿನಿಧಿಗಳು, ಹೀಗಾಗಿ ಇದು ಎಲ್ಲರಿಗೂ ಅನ್ವಯವಾಗುತ್ತದೆ. ನಾವು ಯಾವುದಾದರೂ ಭಾವನೆಯಲ್ಲಿ ಯಾವುದಾದರೂ ಆವೇಶದಲ್ಲಿ ನಮ್ಮ ಯಾವುದೋ ಕಾರಣಕ್ಕಾಗಿ ಸದನದ ಎಲ್ಲಾ ಸದಸ್ಯರ ಬಗ್ಗೆ ಹಗುರವಾಗಿ ಅಗೌರವ ಬರೋ ರೀತಿಯಲ್ಲಿ ಮಾತನಾಡಬಾರದು ಎಂದರು.
ಆದರೆ ಇದರಿಂದ ತೃಪರಾಗದ ಪ್ರತಿಪಕ್ಷ ಸದಸ್ಯರು ಪ್ರತಿಭಟನೆಯನ್ನು ಮುಂದುವರಿಸಿದರು.
Discussion about this post