ಬೆಂಗಳೂರು : ನನಗಿರೋದು ಒಬ್ಬಳೇ ಹೆಂಡತಿ, ಒಂದೇ ಸಂಸಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಎಲ್ಲಾ 224 ಶಾಸಕರ ಅನೈತಿಕ ಸಂಬಂಧದ ಬಗ್ಗೆ ತನಿಖೆಯಾಗಲಿ ಎಂದು ಆಗ್ರಹಿಸಿದ್ದ ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಸುಧಾಕರ್ ಅವರು ರಾಜ್ಯದ ಜನರಿಗೆ ನುಡಿಮುತ್ತಗಳನ್ನು ಉದುರಿಸಿದ್ದಾರೆ. ತನಿಖೆ ನಡೆಯಲಿ ಬಿಡಿ, ಬಹಳ ಸಂತೋಷ ಎಂದು ಡಿಕೆಶಿ ಟಾಂಗ್ ಕೊಟ್ಟಿದ್ದಾರೆ.
ಇವರ ಹೇಳಿಕೆಯನ್ನು ವಿಧಾನಸಭೆಯಲ್ಲಿ ಚರ್ಚಿಸಬೇಕಾಗಿದೆ, ಈ ಬಗ್ಗೆ ನಾಯಕರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಅಂದಿದ್ದಾರೆ.
ಗಮನಾರ್ಹ ಅಂಶ ಅಂದ್ರೆ ಓನ್ ವೈಫ್ ಚಾಲೆಂಜ್ ನಲ್ಲಿ ಸುಧಾಕರ್ ಡಿಕೆಶಿ ಹೆಸರನ್ನು ವಿಶೇಷವಾಗಿ ಪ್ರಸ್ತಾಪಿಸಿದ್ದರು. ಇದೀಗ ಡಿಕೆಶಿಯವರೇ ನನಗಿರೋದು ಒಬ್ಬಳೇ ಹೆಂಡ್ತಿ ಅನ್ನುವ ಮೂಲಕ ಓನ್ ವೈಫ್ ಚಾಲೆಂಜ್ ಸ್ವೀಕರಿಸಿದ್ದಾರೆ.
ಇದನ್ನು ಓದಿ : ಸಿದ್ದು, ಹೆಚ್ಡಿಕೆ, ಡಿಕೆಶಿ ಏಕಪತ್ನಿ ವೃತಸ್ಥರಾ…? ಯಾರಿಗಿದೆ ಅನೈತಿಕ ಸಂಬಂಧ…?
ಸುಧಾಕರ್ ಅನುಮಾನಪಟ್ಟ ಹಾಗೇ, ಡಿಕೆಶಿಯವರು ಅನೈತಿಕ ಸಂಬಂಧದಲ್ಲಿ ಇಲ್ಲ, ವಿವಾಹೇತರ ಸಂಬಂಧ ಇಟ್ಟುಕೊಂಡಿಲ್ಲ ಅನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.
ಹಾಗಿದ್ರೆ ಸುಧಾಕರ್ ಹೇಳಿದ್ದು ಸುಳ್ಳು ಅಂದಾಯ್ತು. ಸುಳ್ಳು ಹೇಳಿಲ್ಲ ಅನ್ನುವದಾದರೆ ಡಿಕೆಶಿಯವರು ಹೇಳಿರುವುದೆಲ್ಲಾ ಸುಳ್ಳು ಎಂದು ಸುಧಾಕರ್ ಸಾಬೀತುಪಡಿಸಬೇಕು ತಾನೇ.
ಶಾಸಕ ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದೆ ಎನ್ನಲಾದ ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಮುಗಿಬಿದ್ದಿರುವ ಪ್ರತಿಪಕ್ಷ ವಿರುದ್ಧ ವಾಗ್ದಾಳಿ ನಡೆಸಿದ್ದ ಸಚಿವ ಡಾ.ಕೆ.ಸುಧಾಕರ್, 224 ಶಾಸಕರ ವೈಯಕ್ತಿಕ ಜೀವನದ ಬಗ್ಗೆ ತನಿಖೆ ನಡೆಯಲಿ ಎಂದು ಸವಾಲು ಹಾಕಿದ್ದರು.
ಇದನ್ನು ಓದಿ : ಲಾಟರಿ ಮಾರಾಟಗಾರ್ತಿಯ ಪ್ರಾಮಾಣಿಕತೆಯಿಂದ ಆ ಕುಟುಂಬಕ್ಕೆ ಸಿಕ್ಕಿದ್ದು 6 ಕೋಟಿ…!
ಡಿ.ಕೆ. ಶಿವಕುಮಾರ್, ರಮೇಶ್ ಕುಮಾರ್, ಬಿ.ಮುನಿಯಪ್ಪ, ಸಿದ್ದರಾಮಯ್ಯನವರು ಮತ್ತು ಕುಮಾರಣ್ಣನವರು ಎಲ್ಲರೂ ಸತ್ಯಹರಿಶ್ಚದ್ರರಲ್ಲವೇ? ಏಕಪತ್ನಿವ್ರತಸ್ಥರಾಗಿ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರಲ್ಲವೇ? ಇವರೆಲ್ಲರೂ ಒಪ್ಪಿಕೊಳ್ಳಲಿ. 224 ಶಾಸಕರ ಮೇಲೆ ತನಿಖೆ ನಡೆಯಲಿ ಎಂದು ಸವಾಲು ಹಾಕಿದ್ದರು.
ಯಾರ್ಯಾರು ಮುಖ್ಯಮಂತ್ರಿ ಆಗಿದ್ದಾಗ ಏನೇನು ಮಾಡಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಶ್ರೀರಾಮಚಂದ್ರರೆಂದು ಹೇಳಿಕೊಳ್ಳುತ್ತಿದ್ದಾರಲ್ಲ, ಯಾರ್ಯಾರು ವಿವಾಹೇತರ ಮತ್ತು ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರೆ ಎಂಬುದು ಜನರಿಗೆ ಗೊತ್ತಾಗಲಿ. ಯಾರೆಲ್ಲ ಶ್ರೀರಾಮಚಂದ್ರರು.. ಮರ್ಯಾದಾ ಪುರುಷರು ಎಂಬುದು ಹೊರಬರಲಿ ಎಂದು ಸವಾಲು ಹಾಕಿದ್ದರು.
Discussion about this post