ಮಳೆಗಾಲದಲ್ಲಿ ಅದೆಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ( bengaluru ) ಅಪಾಯ ಅನ್ನುವುದು ಬೆನ್ನ ಹಿಂದೆಯೇ ಇರುತ್ತದೆ
ಬೆಂಗಳೂರು : ಮೂತ್ರ ವಿಸರ್ಜನೆಗೆ ತೆರಳಿದ್ದ ವೇಳೆ ಪಾಳುಬಿದ್ದ ಕಟ್ಟಡದ ಗೋಡೆ ಕುಸಿದು ಇಬ್ಬರು ಸ್ಥಳದಲ್ಲೇ ಮೃತ ಪಟ್ಟ ದಾರುಣ ಘಟನೆ ನಗರದ ಮೈಸೂರು ರಸ್ತೆಯ BHEL ಕಿಮ್ಕೋ ಜಂಕ್ಷನ್ ಬಳಿ ನಡೆದಿದೆ. ( bengaluru )ಮೃತರನ್ನು ತಮಿಳುನಾಡು ಮೂಲದ ಬಾಲ ( 30) ಮತ್ತು ರಾಜಮಣಿ ( 35 ) ಎಂದು ಗುರುತಿಸಲಾಗಿದೆ. ಇವರು ಹಲವು ವರ್ಷಗಳಿಂದ ವಾಲ್ಮೀಕಿ ನಗರದಲ್ಲಿ ವಾಸವಾಗಿದ್ದರು.
ಬಾಲ ಹಾಗೂ ರಾಜಮಣಿ ಬುಧವಾರ ಮಧ್ಯಾಹ್ನ ತಮ್ಮ ನಾಲ್ವರು ಸ್ನೇಹಿತರೊಂದಿಗೆ ನೈಸ್ ರಸ್ತೆಯ ಗಜಾನನ ಬಾರ್ ನಲ್ಲಿ ಮದ್ಯಪಾನ ಮಾಡಿ ಮನೆ ಮರಳುತ್ತಿದ್ದರು. ಈ ವೇಳೆ ಕಿಮ್ಕೊ ಜಂಕ್ಷನ್ ಬಳಿ ಮೂತ್ರ ವಿಸರ್ಜನೆಗೆ ತೆರಳಿದ್ದಾರೆ. ಅಷ್ಟು ಹೊತ್ತಿನ ತನಕ ನೇರವಾಗಿದ್ದ ಗೋಡೆ ಇವರು ಗೋಡೆ ಬದಿಗೆ ಹೋಗುತ್ತಿದ್ದಂತೆ ಬಾಲ ಮತ್ತು ರಾಜಮಣಿ ಮೇಲೆ ಬಿದ್ದಿದೆ.
ಇದನ್ನೂ ಓದಿ : vivo oppo : ಕಂಪನಿಯೊಂದೇ… ಬ್ರ್ಯಾಂಡ್ ಹಲವು : ಮೋಸ ನಾಲ್ಕು ಸಾವಿರ ಕೋಟಿ
ತಕ್ಷಣ ಸ್ನೇಹಿತರು ರಕ್ಷಣೆಗೆ ಧಾವಿಸಿದರಾದರೂ, ಕಲ್ಲು ಮಣ್ಣುಗಳ ಅಡಿಯಲ್ಲಿ ಸಿಲುಕಿದ ಕಾರಣ ಅವರಿಬ್ಬರನ್ನೂ ರಕ್ಷಿಸಲು ಸಾಧ್ಯವಾಗಲಿಲ್ಲ. ರಾಜಮಣಿ ಮನೆ ಹತ್ತಿರವೇ ಹೂ ವ್ಯಾಪಾರ ಮಾಡಿಕೊಂಡಿದ್ದರೆ ಬಾಲ ಗಾರೆ ಕೆಲಸಕ್ಕೆ ಹೋಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೆಟ್ರೋ ನಿಲ್ದಾಣದಿಂದ ಬೈಕ್ ಕದಿಯುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಆರೆಸ್ಚ್
2 ವರ್ಷಗಳಲ್ಲಿ ಒಂದೇ ಮೆಟ್ರೋ ನಿಲ್ದಾಣದಿಂದ ಬೈಕ್ ಕದಿಯುತ್ತಿದ್ದ ಅಂದ್ರೆ ಇವನು ಎಂತ ಕಳ್ಳನಿರಬೇಕು
ಬೆಂಗಳೂರು : ಎಣ್ಣೆ ಮತ್ತು ಜೂಜಿನ ಚಟಕ್ಕೆ ಬಿದ್ದ ಖಾಸಗಿ ಕಂಪನಿ ಸೆಕ್ಯೂರಿಟಿ ಗಾರ್ಡ್ ಒಬ್ಬ ಬೈಕ್ ಕಳ್ಳತನ ಕೃತ್ಯದಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ. ಅಚ್ಚರಿ ಅಂದ್ರೆ ಒಂದೇ ಜಾಗದಲ್ಲಿ ಸತತ 2 ವರ್ಷಗಳ ಕಾಲ ಈತ ಬೈಕ್ ಕದ್ದಿದ್ದಾನೆ.
ಲಗ್ಗೆರೆ ಸಮೀಪದ ಶ್ರೀನಿವಾಸ್ ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ.3 ವರ್ಷಗಳ ಹಿಂದೆ ಆಕಸ್ಮಿಕವಾಗಿ ತನ್ನ ಬೈಕ್ ಕೀ ಬಳಸಿ ಬೈಕ್ ಸ್ಟಾರ್ಟ್ ಮಾಡಿದಾಗ ಅದು ಸ್ಟಾರ್ಟ್ ಆಗಿತ್ತು. ಅವತ್ತೇ ಆ ಬೈಕ್ ಎಗರಿಸಿದ್ದ ಶ್ರೀನಿವಾಸ, ಕಳ್ಳತನದ ರುಚಿ ನೋಡಿದ್ದ. ಆ ಬೈಕ್ ಮಾರಿದಾಗ ಒಳ್ಳೆ ದುಡ್ಡು ಬೇರೆ ಸಿಕ್ಕಿತ್ತು. ಹೀಗಾಗಿ ಸೆಕ್ಯೂರಿಟಿ ಗಾರ್ಡ್ ಕೆಲಸದೊಂದಿಗೆ ಕಳ್ಳತನವನ್ನು ಸೈಡ್ ಬ್ಯುಸಿನೆಸ್ ಮಾಡಿಕೊಂಡ.
ಇದಾದ ಬಳಿಕ ಹಣದ ಅಗತ್ಯ ಇದ್ದಾಗಲೆಲ್ಲಾ ರಾಜಾಜಿನಗರ ಮೆಟ್ರೋ ನಿಲ್ದಾಣಕ್ಕೆ ಹೋಗೋದು ಬೈಕ್ ಎಗರಿಸುತ್ತಿದ್ದ. ಹಾಗೇ ತಂದ ಬೈಕ್ ಅನ್ನು ಕೋಲಾರ, ಆಂಧ್ರ ಪ್ರದೇಶಕ್ಕೆ ಒಯ್ದು ದಾಖಲೆಗಳನ್ನು ಆಮೇಲೆ ಕೊಡುವುದಾಗಿ ಹೇಳಿ 5 ರಿಂದ 10 ಸಾವಿರ ಪಡೆದು ಬರುತ್ತಿದ್ದ. ಹೀಗೆ ಸಿಕ್ಕ ಹಣದಲ್ಲಿ ಮತ್ತೆ ಮದ್ಯ ಕುಡಿದು ಜೂಜಾಡಿ ಮಜಾ ಉಡಾಯಿಸುತ್ತಿದ್ದ.
ಇತ್ತೀಚೆಗೆ ದೀಪಕ್ ಮಿಶ್ರಾ ಅನ್ನುವವರ ಬೈಕ್ ರಾಜಾಜಿನಗರ ಮೆಟ್ರೋ ನಿಲ್ದಾಣದಿಂದ ಕಳುವಾಗಿತ್ತು. ಈ ಬಗ್ಗೆ ಮಹಾಲಕ್ಷ್ಮಿ ಲೇ ಜೌಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿತ್ತು. ಈ ಸಂಬಂಧ ಪೊಲೀಸರು ಸಿಸಿ ಕ್ಯಾಮಾರದ ದೃಶ್ಯಗಳ ಆಧಾರದಲ್ಲಿ ತನಿಖೆ ಕೈಗೆತ್ತಿಕೊಂಡ ವೇಳೆ ಶ್ರೀನಿವಾಸನ ಕೈ ಚಳಕ ಗೊತ್ತಾಗಿದೆ. ಇದೀಗ ಆರೋಪಿ ಕಡೆಯಿಂದ 11.5 ಲಕ್ಷ ಮೌಲ್ಯದ 25 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ
Discussion about this post