ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್(70) ಇಂದು ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ,
ಕದ್ರಿ ಗೋಪಾಲನಾಥ್ ಅವರು ವಿದೇಶಿ ವಾದ್ಯವನ್ನು ಸಂಪೂರ್ಣ ತನ್ನದಾಗಿಸಿಕೊಂಡಿಡು, ಅದಕ್ಕೆ ಭಾರತೀಯ ಸಂಗೀತವನ್ನು ಕರಗತ ಮಾಡಿಸಿದರಲ್ಲಿ ಇವರು ಒಬ್ಬರು. ಹುಟ್ಟಿದ್ದು ಮಂಗಳೂರಿನಲ್ಲಿ 1948ರಲ್ಲಿ ಬಾಲ್ಯದಲ್ಲಿ ಸಂಗೀತದ ಒಲವನ್ನು ಬೆಳೆಸಿಕೊಂಡಿದ್ದರು. ಅವರ ತಂದೆಯೇ ಅವರಿಗೆ ಗುರುವಾಗಿದ್ದರು. ಸಂಗೀತ ಮಾಂತ್ರಿಕನ ಅಗಲಿಕೆಗೆ ಅನೇಕ ಗಣ್ಯರ ಕಂಬನಿ ಮಿಡಿದಿದ್ದಾರೆ
ಗೋಪಾಲನಾಥ್ ಅವರ ಪ್ರಥಮ ಕಾರ್ಯಕ್ರಮ ಮದ್ರಾಸಿನ ಚೆಂಬೈ ಮೆಮೋರಿಯಲ್ ಟ್ರಸ್ಟ್ ನಲ್ಲಿ ನಡೆಸಯಿತು. ಅದು ವರಿಗೆ ಎಲ್ಲೆಡೆಪ್ರಸಿದ್ದಿ ತಂದುಕೊಟ್ಟಿದೆ. ಯುರೋಪ್, ಅಮೆರಿಕಾ, ಕೆನಡಾ, ಆಸ್ಟ್ರೇಲಿಯಾ, ಜರ್ಮನಿ ಸಿಂಗಪುರ,ಬಹರೇನ್,ಕತಾರ್, ಮಲೆಷಿಯಾ, ಶ್ರೀಲಂಕಾ ಸೇರಿದಂತೆ ಹಲವು ದೇಶಗಳಲ್ಲಿ ಯಶಸ್ವಿ ಕಚೇರಿಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ.
ಕದ್ರಿ ಗೋಪಾಲನಾಥ್ ಅವರಿಗೆ ಸಲ್ಲದ ಪ್ರಶಸ್ತಿಗಳೇ ಇಲ್ಲ ಪದ್ಮಶ್ರೀ ಪ್ರಶಸ್ತಿ, ಕೇಂದ್ರ ಸಂಗೀತ, ನಾಟಕ ಅಕಾಡೆಮಿ ಪ್ರಶಸ್ತಿ, ತಮಿಳುನಾಡು ಸರ್ಕಾರದ ಕಲೈಮಾಮಣಿ, ಕರ್ನಾಟಕ ಕಲಾಶ್ರೀ, ಗಾನಕಲಾ ಭೂಷಣ, ನಾದ ಗಂಧರ್ವ, ನಾದಕಲಾ ರತ್ನ, ನಾದಕಲಾನಿಧಿ, ಸಂಗೀತ ವಿದ್ಯಾರತ್ನ, ಸಂಗೀತ ರತ್ನ, ಶೃಂಗೇರಿ ಮಂತ್ರಾಲಯ ಅಹೋಬಿಲ ಮುಂದಾದ ಪೀಠಗಳಿಂದ ಸನ್ಮಾನ, ಕಂಚಿ ಕಾಮಕೋಠಿ ಅಸ್ಥಾನ ವಿದ್ವಾನ್, ಬೆಂಗಳೂರು ವಿಶ್ವವಿದ್ಯಾಲಯಯ ಗೌರವ ಡಾಕ್ಟರೇಟ್ ಮುಂದಾದ ಅನೇಕ ಪ್ರಶಸ್ತಿ ಗೌರವಗಳು ಕದ್ರಿ ಗೋಪಾಲನಾಥರನ್ನು ಆರಿಸಿಕೊಂಡು ಬಂದಿವೆ.
ಕದ್ರಿ ಗೋಪಾಲನಾಥ್ ಅವರ ಸ್ಯಾಕ್ಸೋಫೋನ್ ವಾದಗಳಿಗೆ ಮನಸೋಲದವರಿಲ್ಲ. ಅದರಲ್ಲೂ ಪ್ರವೀಣ್ ಗೋಡ್ಖಿಂಡಿ ಅವರ ಜೊತೆಗಿನ ಜುಗಲ್ಬಂದಿ ಅಲ್ಬಂ ರಾಗ್ ರಂಗ್ 1998ರಲ್ಲಿ ಬಿಡುಗಡೆ ಆಯಿತು. ಈ ರಾಗ್ ರಂಗ್ ಈಗಲೂ ಭಾರೀ ಪ್ರಸಿದ್ಧಿ ಪಡೆದಿದೆ.
ಗೋಪಾಲನಾಥ್ ವಿಶ್ವ ಮಟ್ಟಕ್ಕೆ ಏರಿದ್ದರೂ ಅವರ ಪತ್ನಿ ಸರೋಜಿನಿಯವರು ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ವಿಶೇಷ ಅಂದರೆ ಇವರು ಶಿಕ್ಷಕಿಯಾಗಿದ್ದ ಶಾಲೆಯಲ್ಲಿಯೇ ರಿಷಬ್ ಶೆಟ್ಟಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರವನ್ನು ಚಿತ್ರೀಕರಿಸಿದ್ದರು.
ಇನ್ನು ಗೋಪಾಲನಾಥ್ ಅವರ ಪುತ್ರ ಮಣಿಕಾಂತ್ ಕದ್ರಿ ಸಂಗೀತ ಲೋಕದ ಮತ್ತೊಬ್ಬ ಮಾಂತ್ರಿಕನಾಗಿದ್ದಾರೆ.
Discussion about this post