ಹಿಂದೆಲ್ಲಾ ಒಂದ್ಸಲ ಮೊಬೈಲ್ ಚಾರ್ಚ್ ಮಾಡಿದ್ರೆ ಇಡೀ ದಿನ ಜಾರ್ಜ್ ಇಲ್ಲ ಅನ್ನು ಆತಂಕವಿರಲಿಲ್ಲ. ಆದರೆ ಈಗ ಬಂದಿರುವ ಮೊಬೈಲ್ ಗಳಲ್ಲಿ ನೂರಾರು APP ಗಳನ್ನು ತುಂಬಿಸಬಹುದಾಗಿದೆ. ಹೀಗಾಗಿ ಒಂದ್ಸಲ ಮಾಡಿದ ಜಾರ್ಜ್ ಅನ್ನು ಇಡೀ ದಿನ ಉಪಯೋಗಿಸುವುದು ಅಸಾಧ್ಯ. ಈ ಕಾರಣದಿಂದ ಮೊಬೈಲ್ ಜೊತೆಗೊಂದು ಪವರ್ ಬ್ಯಾಂಕ್ ಅನಿವಾರ್ಯವಾಗಿದೆ.
ಮೊಬೈಲ್ ಬಳಕೆದಾರರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಅನೇಕ ಕಂಪನಿಗಳು ಪವರ್ ಬ್ಯಾಂಕ್ ಅನ್ನು ಪರಿಚಯಿಸಿದೆ. ಆದರೆ ಅವೆಲ್ಲವೂ ಒಳ್ಳೆಯ ಕ್ವಾಲಿಟಿ ಹೊಂದಿರುವುದಿಲ್ಲ. ಹಾಗಾದರೆ ಯಾವುದಪ್ಪ ಬೆಸ್ಟ್ ಪವರ್ ಬ್ಯಾಂಕ್ ಎಂದು ಚಿಂತಿಸುತ್ತೀರಾ ಅದನ್ನ ನಾವು ಹೇಳ್ತಿವಿ. ಇಲ್ಲಿರುವ ಇಮೇಜ್ ಗಳನ್ನು ಕ್ಲಿಕ್ ಮಾಡಿದ್ರೆ ನೀವು ಬೆಸ್ಟ್ ಪವರ್ ಬ್ಯಾಂಕ್ ಗಳನ್ನು ಖರೀದಿಸಬಹುದಾಗಿದೆ.
ಆದರೆ ಖರೀದಿಗೂ ಮುನ್ನ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ.
1. ಪವರ್ ಬ್ಯಾಂಕ್ ಸಾಮರ್ಥ್ಯ :
ನಿಮ್ಮ ಮೊಬೈಲ್ ಬ್ಯಾಟರಿಯ ದುಪ್ಪಟ್ಟು ಸಾಮರ್ಥ್ಯವನ್ನು ಪವರ್ ಬ್ಯಾಂಕ್ ಹೊಂದಿರಲಿ. ಅದನ್ನು mAh (ಮಿಲಿಆ್ಯಂಪ್’ಅವರ್ಸ್) ನಲ್ಲಿ ಅಲೆಯಲಾಗುತ್ತದೆ. mAh ಹೆಚ್ಚಿದ್ದಷ್ಟು ಪವರ್ ಬ್ಯಾಂಕ್ ಸಾಮರ್ಥ್ಯ ಹೆಚ್ಚಿರುತ್ತದೆ. ನಿಮ್ಮ ಫೋನ್ ಬ್ಯಾಟರಿ ಸಾಮರ್ಥ್ಯ 1500 mAh ಆಗಿದ್ದರೆ, ನೀವು 3000 mAh ಸಾಮರ್ಥ್ಯದ ಪವರ್ ಬ್ಯಾಂಕ್ ಅನ್ನು ಬುಕ್ ಮಾಡಿ.
2. ಕನೆಕ್ಟಿವಿಟಿ ಆಯ್ಕೆಗಳು ಮತ್ತು ಯುಎಸ್’ಬಿ ಚಾರ್ಜಿಂ ಗ್ : ಪವರ್ ಬ್ಯಾಂಕಿನಲ್ಲಿ ಇಂತಹ ಆದಷ್ಟು ಹೆಚ್ಚು ಆಯ್ಕೆಗಳಿದ್ದರೆ, ಏಕಲಕಾಲದಲ್ಲಿ ಒಂದಕ್ಕಿಂತ ಹೆಚ್ಚು ಉಪಕರಣಗಳನ್ನು ಚಾರ್ಜ್ ಮಾಡಬಹುದು. ಮೊಬೈಲ್, ಟ್ಯಾಬ್ಲೆಟ್, MP3 ಪ್ಲೇಯರ್, ಇಯರ್ ಫೋನ್ ಹೀಗೆ ಮುಂತಾದ ಉಪಕರಣಗಳನ್ನು ಏಕಕಾಲದಲ್ಲಿ ಚಾರ್ಜ್ ಮಾಡಬಹುದು.
3 . ಎಲ್’ಇಡಿ ಇಂಡಿಕೇಟರ್ಸ್:
ಪವರ್ ಬ್ಯಾಂಕಿನಲ್ಲಿ ಎಲ್’ಇಡಿ ಇಂಡಿಕೇಟರ್ಸ್ ಇದ್ದರೆ ಬಹಳ ಸೂಕ್ತ. ಪವರ್ ಬ್ಯಾಂಕ್ ಚಾರ್ಜ್ ಆಗುತ್ತಿದೆಯೋ ಇಲ್ಲವೋ, ಎಷ್ಟು ಚಾರ್ಜ್ ಆಯ್ತು ಎಂಬುವುದನ್ನು ತಿಳಿದುಕೊಳ್ಳಲು ಇದು ಸೂಕ್ತ. Fast Charge Power Bank ಖರೀದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
4. ವಿಶ್ವಾಸಾರ್ಹ ಬ್ರಾಂಡ್:
ಪವರ್ ಬ್ಯಾಂಕ್ ಖರೀದಿಸುವಾಗ ಮಾರುಕಟ್ಟೆಯಲ್ಲಿ ಚಿರಪರಿಚಿತವಾಗಿರುವ ಬ್ರಾಂಡ್’ನ್ನೇ ಆಯ್ಕೆ ಮಾಡಿ. ಏಕೆಂದರೆ ನಿಮ್ಮ ದುಬಾರಿ ಫೋನ್’ಗಳು ಕಳಪೆ ಚಾರ್ಜಿಂಗ್ ಸಾಧನಗಳಿಂದ ಹಾಳಾಗುವ ಸಾಧ್ಯತೆಗಳಿರುತ್ತವೆ.
5. ಸುರಕ್ಷತೆ:
ಪವರ್ ಬ್ಯಾಂಕ್ ಖರೀದಿಸುವಾಗ ಸುರಕ್ಷತೆಯನ್ನು ಗಮನದಲ್ಲಿಡಬೇಕಾದುದು ಅತೀ ಅಗತ್ಯ. ಪವರ್’ಬ್ಯಾಂಕನ್ನು ದೀರ್ಘಕಾಲ (ಉದಾ. ಮಲಗುವಾಗ) ಚಾರ್ಜಿಂಗ್’ಗಾಗಿ ಇಡುವ ಅಭ್ಯಾಸವಿದ್ದರೆ ಕಳಪೆ ಗುಣಮಟ್ಟದ ಪವರ್ ಬ್ಯಾಂಕ್’ಗಳು ಓವರ್ ಚಾರ್ಜಿಂಗ್’ನಿಂದ ಸ್ಫೋಟಗೊಳ್ಳುವ ಸಾಧ್ಯತೆಗಳಿರಬಹುದು. ಆದುದರಿಂದ ಬ್ಯಾಟರಿಯಲ್ಲಿ ಲೀಥಿಯಂ-ಪಾಲಿಮರ್ ಅಂಶ ಹೆಚ್ಚಿರುವ ಪವರ್ ಬ್ಯಾಂಕುಗಳನ್ನು ಬಳಸಿ. ಇನ್ನು ಪ್ರಯಾಣದ ವೇಳೆ ಈ ಕೆಳಗಿನ ಪವರ್ ಬ್ಯಾಂಕ್ ಬಳಸುವುದನ್ನು ರೂಢಿಸಿಕೊಳ್ಳಿ.
6 . ಆ್ಯಂಪಿಯರ್ ಕೌಂಟ್ : ಪವರ್ ಬ್ಯಾಂಕ್ ಖರೀದಿಸುವಾಗ ಆ್ಯಂಪಿಯರ್ ಬಗ್ಗೆ ತಿಳಿದಿರಬೇಕಾದುದು ಅಗತ್ಯ. ಆ್ಯಂಪಿಯರ್ ಅಂದರೆ, ಪವರ್ ಬ್ಯಾಂಕಿನಿಂದ ಚಾರ್ಜ್ ಆಗುತ್ತಿರುವ ಉಪಕರಣಕ್ಕೆ ಪ್ರವಾಹವಾಗುತ್ತಿರುವ ವಿದ್ಯುತ್’ನ ಪ್ರಮಾಣ. ಉದಾಹರಣೆಗೆ, ಉಪಕರಣಕ್ಕೆ 2.1 ಆ್ಯಂಪ್ ವಿದ್ಯುತ್ ಅಗತ್ಯವಿದ್ದರೆ ಪವರ್ ಬ್ಯಾಂಕ್ ಕೂಡಾ ಅಷ್ಟೇ ವಿದ್ಯುತ್’ನ್ನು ಪೂರೈಸಬೇಕು. ಈ ಪ್ರಮಾಣದಲ್ಲಿ ವ್ಯತ್ಯಾಸವಿದ್ದರೆ ಒಂದೋ ಉಪಕರಣ ಚಾರ್ಜ್ ಆಗಲ್ಲ ಅಥವಾ ಬಹಳ ನಿಧಾನಗತಿಯಲ್ಲಿ ಚಾರ್ಜ್ ಆಗುವುದು.
7. ಕೇಬಲ್ : ಪವರ್ ಬ್ಯಾಂಕಿನೊಂದಿಗೆ ಬಂದಿರುವ ಕೇಬಲನ್ನೇ ಬಳಸುವುದು ಉತ್ತಮ ಅಭ್ಯಾಸ. ಪವರ್ ಬ್ಯಾಂಕಿನ ಕೇಬಲ್ ಕೂಡಾ ಬಹಳ ಮುಖ್ಯ. ಪವರ್ ಬ್ಯಾಂಕ್ ಚಾರ್ಜಿಂಗ್’ಗೆ ತೆಗೆದುಕೊಳ್ಳುವ ಸಮಯ ಅದರ ಕೇಬಲ್’ನ ಉದ್ದಳತೆ ಮೆಲೆಯೂ ಅವಲಂಬಿವಾಗಿರುತ್ತದೆ. ಜೊತೆಗೆ, ವಿದ್ಯುತ್ ಪೂರೈಕೆಯಲ್ಲಾಗುವ ಏರುಪೇರುಗಳಿಂದಲೂ ಕೂಡಾ ಉಪಕರಣವನ್ನು ಕೇಬಲ್ ರಕ್ಷಿಸುತ್ತದೆ. ಹೀಗಾಗಿ ಪವರ್ ಬ್ಯಾಂಕ್ ಜೊತೆಗೆ ಬಂದಿರುವ ಕೇಬಲ್ ಬಳಸಿ. ಒಂದು ವೇಳೆ ಕೇಬಲ್ ಕಳೆದು ಹೋದರೆ ಲೋಕಲ್ ಕೇಬಲ್ ಖರೀದಿಸಬೇಡಿ.
https://linksredirect.com/?pub_id=57646&url=https://www.amazon.in/b%3Fnode=17359505031%26pf_rd_p=bee02d85-e214-4910-995f-511fcaea5f51%26pf_rd_r=C27APJXTQCA5Y7FYR965
Discussion about this post