ನವದೆಹಲಿ : ಕೊರೋನಾ ಸೋಂಕು ಜಗತನ್ನು ಕಂಗಾಲು ಮಾಡಿರುವ ಬೆನ್ನಲ್ಲೇ ಚಿತ್ರ ವಿಚಿತ್ರ ವೈರಸ್ ಗಳ ಕಾಟ ಶುರುವಾಗಿದೆ. ಹಲವು ವರ್ಷಗಳ ಹಿಂದೆ ಸಮಾಜಕ್ಕೆ ಕಂಟಕ ಅನ್ನಿಸಿಕೊಂಡಿದ್ದ ವೈರಸ್ ಗಳು ಮತ್ತೆ ಎಂಟ್ರಿ ಕೊಟ್ಟಿರುವುದು ಹೊಸ ಆತಂಕಕ್ಕೆ ಕಾರಣವಾಗಿದೆ.
ಚೀನಾದಲ್ಲಿ ವುಹಾನ್ ವೈರಸ್ ಅಬ್ಬರಿಸಿದ ಬೆನ್ನಲ್ಲೇ ಮಂಕಿ ಬಿ ವೈರಸ್ ಕಾಟ ಶುರುವಾಗಿದೆ. ಇದರ ಬೆನ್ನಲ್ಲೇ ಬ್ರಿಟನ್ ನಲ್ಲಿ ವೊಮಿಟಿಂಗ್ ಬಗ್ ಎಂದು ಹೇಳಲಾಗುವ ನೊರೋ ವೈರಸ್ ಕಾಟ ಕಾಲಿಟ್ಟಿದೆ. ತೀವ್ರ ಸೋಂಕು ಉಂಟು ಮಾಡಬಲ್ಲ ಇದು ಬ್ರಿಟನ್ ನಾದ್ಯಂತ ಕಾಡುತ್ತಿದೆ ಎಂದು ಅಲ್ಲಿಗೆ ಆರೋಗ್ಯ ಇಲಾಖೆ ಹೇಳಿದೆ.
ನೊರೋವೈರಸ್ ಅಧಿಕ ಅಂಟು ಜಾಡ್ಯವನ್ನು ಹೊಂದಿದ್ದು, ಅಮೆರಿಕಾದಲ್ಲಿ ಆಹಾರದಿಂದ ಬರುವ ಅರ್ಧದಷ್ಟು ರೋಗಗಳಿಗೆ ಇದೇ ವೈರಸ್ ಕಾರಣವಾಗಿದೆ. ನೊರೋ ವೈರಸ್ ಅನ್ನು ಹೊಟ್ಟೆ ಜ್ವರ ಎಂದು ಕೂಡಾ ಕರೆಯಲಾಗುತ್ತದೆ. ಹಾಗಂತ ಇದು ಜ್ವರವಲ್ಲ,
ಹೊಟ್ಟೆನೋವು, ಅತಿಸಾರ, ವಾಂತಿ,ವಾಕರಿಕೆ, ಜ್ವರ, ತಲೆನೋವು ಮೈಕ್ ನೋವು ಈ ರೋಗದ ಲಕ್ಷಣಗಳಾಗಿದೆ. ಜೊತೆಗೆ ತೀವ್ರ ಜಠರ ಉರಿಗೂ ಈ ಸೋಂಕು ಕಾರಣವಾಗುತ್ತದೆ. ಇದು ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡುತ್ತದೆ. ಸೋಂಕು ಅಪಾಯಕಾರಿಯಲ್ಲದಿದ್ದರೂ ಮುಂಜಾಗ್ರತೆ ವಹಿಸುವುದು ಅತೀ ಅಗತ್ಯ ಎಂದು ತಜ್ಞರು ಹೇಳಿದ್ದಾರೆ.
Discussion about this post