ಪಳನಿ ದೇವಾಲಯ Palani temple ಪಿಕ್ನಿಕ್ ತಾಣವಲ್ಲ : ಧ್ವಜಸ್ಥಂಭದ ಬಳಿ ಸೂಚನಾ ಫಲಕ ಅಳವಡಿಸಿ
ತಮಿಳುನಾಡಿನ ಪ್ರಸಿದ್ಧ ಪಳನಿ ಮುರುಗನ್ Palani temple ದೇವಸ್ಥಾನಕ್ಕೆ ಹಿಂದೂಯೇತರರು ದೇವಸ್ಥಾನ ಪ್ರವೇಶಿಸುವ ಹಾಗಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಆದೇಶಿಸಿದೆ. ಒಂದು ವೇಳೆ ಹಿಂದೂಗಳಲ್ಲದವರು ಪ್ರವೇಶಿಸಲು ಬಯಸಿದ್ರೆ ಅಂತಹ ವ್ಯಕ್ತಿಗಳು ಹಿಂದೂ ಧರ್ಮ ಮತ್ತು ಅದರ ಪದ್ಧತಿ ಹಾಗೂ ದೇವರಲ್ಲಿ ನಂಬಿಕೆ ಇರಿಸುವುದಾಗಿ ಘೋಷಿಸಬೇಕು ಎಂದು ಸೂಚಿಸಿದೆ.
If any non-Hindu wishes to enter the temple, a written undertaking should be obtained from such person that she believes in Hindu religion, its customs and the temple deities
ಕಳೆದ ವರ್ಷದ ಜೂನ್ ತಿಂಗಳಲ್ಲಿ ಪಳನಿ ಬೆಟ್ಟದ ತುದಿಗೆ ತೆರಳಲು ಮುಸ್ಲಿಂ ಕುಟುಂಬವೊಂದು ಟಿಕೆಟ್ ಪಡೆದಿತ್ತು. ಈ ವೇಳೆ ಆ ಕುಟುಂಬ ಪ್ರವೇಶವನ್ನು ಅಧಿಕಾರಿಗಳು ತಡೆದಿದ್ದರು. ಈ ವೇಳೆ ವಾದಿಸಿದ್ದ ಕುಟುಂಬ ಸದಸ್ಯರು ಹಿಂದೂಯೇತರರಿಗೆ ಪ್ರವೇಶವಿಲ್ಲ ಎಂದು ಎಲ್ಲೂ ಬೋರ್ಡ್ ಇಲ್ಲ ಎಂದು ವಾದಿಸಿದ್ದರು. ಇದಾದ ಬಳಿಕ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು.
ಇದನ್ನೂ ಓದಿ : ಹತ್ತೂರ ಒಡೆಯನ ಸನ್ನಿಧಿಯ ಅಭಿವೃದ್ಧಿಗೆ 2 ಕೋಟಿ ರೂ ಅನುದಾನ ತಂದ ಅಶೋಕ್ ರೈ
ದಿಂಡಿಗಲ್ ಜಿಲ್ಲೆಯ ಪಳನಿ ನಿವಾಸಿ ಸೆಂಥಿಲ್ ಕುಮಾರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ನ ಮಧುರೈ ಪೀಠ, ದೇವಾಲಯಗಳು ಪಿಕ್ನಿಕ್ ತಾಣಗಳಲ್ಲ, ಇತರ ಸಮುದಾಯದವರಂತೆ ಹಿಂದೂಗಳೂ ಕೂಡಾ ಹಸ್ತಕ್ಷೇಪವಿಲ್ಲದೆ ತಮ್ಮ ಧರ್ಮವನ್ನು ಆಚರಿಸುವ ಅಧಿಕಾರ ಹೊಂದಿದ್ದಾರೆ ಅಂದಿರುವ ನ್ಯಾಯಮೂರ್ತಿ ಎಸ್ ಜಸ್ಟಿಸ್ ಶ್ರೀಮತಿಯವರು ಧ್ವಜ ಸ್ತಂಭ ಮೀರಿ ಹಿಂದೂಯೇತರರಿಗೆ ಪ್ರವೇಶವಿಲ್ಲ ಎಂದು ಬೋರ್ಡ್ ಹಾಕುವಂತೆ ತಮಿಳುನಾಡು ಸರ್ಕಾರ ಮತ್ತು ಧಾರ್ಮಿಕ ದತ್ತಿ ಇಲಾಖೆಗೆ ಆದೇಶಿದ್ದಾರೆ.
ಒಂದು ವೇಳೆ ಹಿಂದೂಗಳಲ್ಲದವರು ಪ್ರವೇಶಿಸಲು ಬಯಸಿ, ಹಿಂದೂ ಧರ್ಮ ಮತ್ತು ಅದರ ಪದ್ಧತಿ ಹಾಗೂ ದೇವರಲ್ಲಿ ನಂಬಿಕೆ ಇರಿಸುವುದಾಗಿ ಘೋಷಿಸಿದರೆ ಅದನ್ನು ರಿಜಿಸ್ಟರ್ ನಲ್ಲಿ ನಮೂದಿಸಬೇಕು ಮತ್ತು ಅದನ್ನು ಸಂಬಂಧಪಟ್ಟ ದೇವಾಲಯ ನಿರ್ವಹಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಈ ಹಿಂದೆ PIL ಸಲ್ಲಿಸಿದ್ದ ಸೆಂಥಿಲ್ ಕುಮಾರ್ ಪಳನಿ ಮುರುಗನ್ ದೇವಸ್ಥಾನಕ್ಕೆ ಪ್ರತಿದಿನ ಸಾವಿರಾರು ಜನರು ಭೇಟಿ ನೀಡುತ್ತಾರೆ.ಹಿಂದೂ ಧರ್ಮವನ್ನು ಹೊರತುಪಡಿಸಿ ಇತರ ಧರ್ಮಗಳಿಗೆ ಸೇರಿದ ಜನ ದೇವಸ್ಥಾನಕ್ಕೆ ಬರುತ್ತಾರೆ ಆ ಪೈಕಿ ಹಿಂದೂ ದೇವರ ಮೇಲೆ ನಂಬಿಕೆ ಇಲ್ಲದವರೂ ಇರುತ್ತಾರೆ, ಅವರೂ ಕೂಡಾ ದೇವಾಲಯವನ್ನು ಪ್ರವೇಶಿಸುತ್ತಾರೆ, ಇದು ದೇವರನ್ನು ನಂಬುವವರಿಗೆ ನೋವುಂಟು ಮಾಡುತ್ತದೆ. ಹೀಗಾಗಿ ಹಿಂದೂಯೇತರರಿಗೆ ದೇವಾಲಯ ಪ್ರವೇಶಿಸಲು ಅವಕಾಶ ನೀಡಬಾರದು ಎಂದು ಮನವಿ ಮಾಡಿದ್ದರು.
In his plea, Senthilkumar said that in June last year, a Muslim family with several women in “Burquas,” had purchased tickets at the winch station to go to the Palani hilltop, the temple’s premises. After the authorities tried stopping them, they argued that there was no board barring the entry of non-Hindus. The family wanted to go to the hilltop to click pictures, Senthilkumar told the Court.
ಇದಕ್ಕೂ ಮುನ್ನ ನಡೆದ ವಾದ ಪ್ರತಿವಾದ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಪರವಾಗಿ ಹಾಜರಿದ್ದ ವಕೀಲರು, ದೇವಾಲಯದ ಸುತ್ತ ಹಿಂದೂಯೇತರರಿಗೆ ಪ್ರವೇಶವಿಲ್ಲ ಅನ್ನುವ ಬೋರ್ಡ್ ಹಾಕಿದ್ರೆ, ದೇವಸ್ಥಾನಕ್ಕೆ ಬರುವವರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಬಹುದು. ಜೊತೆಗೆ ಪಳನಿ ಬೆಟ್ಟಕ್ಕೆ ಕೇವಲ ಧಾರ್ಮಿಕ ನಂಬಿಕೆಯಿಂದ ಮಾತ್ರವಲ್ಲದೆ Hill top View ನೋಡಲು ಬರುವವರಿದ್ದಾರೆ ಎಂದು ವಾದಿಸಿದ್ರು.
ಆದರೆ ಅದನ್ನು ಒಪ್ಪದ ನ್ಯಾಯಾಲಯ Hindu Religion & Charitable Endowment Department ಇರುವುದೇ ಹಿಂದೂ ಧರ್ಮದ ರಕ್ಷಣೆಗಾಗಿ ಅಂದಿದೆ. ಜೊತೆಗೆ ಆದೇಶದ ಸಂದರ್ಭದಲ್ಲಿ Temple Entry Authorisation Act, 1947 ಅನ್ನು ಉಲ್ಲೇಖಿಸಿದ ಜಸ್ಟಿಸ್ ಶ್ರೀಮತಿಯವರು ಈ ಮೇಲಿನ ಆದೇಶವನ್ನು ಹೊರಡಿಸಿದ್ದಾರೆ.
Discussion about this post