ಅಫ್ಫಾನಿಸ್ತಾನದಲ್ಲಿ ಇಸ್ಲಾಮಿಕ್ ಷರಿಯಾ ಅನ್ವಯ ಹೊಸ ಕಾನೂನು ಜಾರಿ
ಅಫ್ಘಾನಿಸ್ತಾನದಲ್ಲಿ ಚುನಾಯಿತ ಸರ್ಕಾರವನ್ನು ಪದಚ್ಯುತಗೊಳಿಸಿ 2021ರಲ್ಲಿ ಅಧಿಕಾರಕ್ಕೆ ಬಂದಿರುವ ತಾಲಿಬಾನ್ ಉಗ್ರ ಸರ್ಕಾರ ದೇಶದಲ್ಲಿ ಇಸ್ಲಾಮಿಕ್ ಷರಿಯಾ ಅನ್ವಯ ಹೊಸ ಕಾನೂನು ಜಾರಿಗೊಳಿಸಿದೆ. ಮೇಲ್ನೋಟಕ್ಕೆ ಮಹಿಳೆಯರು ಮತ್ತು ಪುರುಷರಿಗಾಗಿ ನಿಯಮ ರೂಪಿಸಲಾಗಿದೆಯಾದರೂ ಬಹುತೇಕ ಕಾನೂನು ಮಹಿಳೆಯರನ್ನು ಟಾರ್ಗೇಟ್ ಮಾಡಿದೆ ಅನ್ನೋದು ಸ್ಪಷ್ಟ.
35 ವಿಧಿಗಳನ್ನು ಒಳಗೊಂಡ 114 ಪುಟಗಳ ಕಾನೂನನ್ನು ಅಫ್ಘಾನಿಸ್ತಾನದ ನೈತಿಕ ಸಚಿವಾಲಯ ಬಿಡುಗಡೆ ಮಾಡಿ ದೇಶ ವ್ಯಾಪ್ತಿಯಲ್ಲಿ ಜಾರಿಗೊಳಿಸಿದೆ.
ಯಾವುದೆಲ್ಲಾ ನಿಷೇಧ
ಮಹಿಳೆಯರು ಸಾರ್ವಜನಿಕವಾಗಿ ಮುಖ ತೋರಿಸುವ ಹಾಗಿಲ್ಲ
ತೆಳು ಬಿಗಿ ಚಿಕ್ಕದಾದ ಬಟ್ಟೆಯನ್ನು ಧರಿಸೋ ಹಾಗಿಲ್ಲ
ವಾಹನ ಮಾಲೀಕರು ಹೆಂಡತಿಯಲ್ಲದೆ ಬೇರೆ ಮಹಿಳೆಯರನ್ನು ಕರೆದೊಯ್ಯಬಾರದು
ಪುರುಷರು ಗಡ್ಡ ಬಿಡಲೇಬೇಕು, ಗಡ್ಡ ಕತ್ತರಿಸೋ ಹಾಗಿಲ್ಲ
ಪ್ರಾರ್ಥನೆ ಮತ್ತು ಧಾರ್ಮಿಕ ಉಪವಾಸ ಮಾಡೋದು ಕಡ್ಡಾಯ
ನಿಯಮ ಉಲ್ಲಂಘಿಸಿದ್ರೆ ಆಸ್ತಿ ಜಪ್ತಿ, ಬಂಧನ ಹಾಗೂ ಕಠಿಣ ಕ್ರಮ
ಇದರೊಂದಿಗೆ ಮಹಿಳೆಯರು ಸಾರ್ವಜನಿಕವಾಗಿ ಹಾಡಬಾರದು, ಪಠಣ ಮಾಡಬಾರದು, ಗಟ್ಟಿಯಾಗಿ ಓದುವುದನ್ನು ಮಾಡಬಾರದು. ರಕ್ತ ಸಂಬಂಧಿ, ಪತಿ ಬಿಟ್ಟು ಬೇರೆ ಗಂಡಸರನ್ನು ನೋಡಬಾರದು, ಸಂಗೀತ ನುಡಿಸಬಾರದು, ಸಾರ್ವಜನಿಕವಾಗಿ ಪುರುಷರನ್ನು ಸೇರಬಾರದು ಎಂದು ನೈತಿಕ ಸಚಿವಾಲಯ ಸ್ಪಷ್ಟವಾಗಿ ಹೇಳಿದೆ.
ಇನ್ನು ಈ ನಿಯಮಗಳನ್ನು ಉಲ್ಲಂಘಿಸಿದ್ರೆ ಮೊದಲು ಸಲಹೆ ನೀಡಲಾಗುತ್ತದೆ, ಎರಡನೇ ಬಾರಿಗೆ ಎಚ್ಚರಿಕೆ ನೀಡಲಾಗುತ್ತದೆ ನಂತರ ಆಸ್ತಿ ಜಪ್ತಿ, ಒಂದು ಗಂಟೆಯಿಂದ ಮೂರು ದಿನಗಳ ಕಾಲ ಬಂಧನ ಹಾಗೂ ಇತರ ಕಠಿಣ ಶಿಕ್ಷೆಗಳ ಎಚ್ಚರಿಕೆ ನೀಡಲಾಗಿದೆ.