ಬೆಂಗಳೂರು : ಬಿಜೆಪಿ ಪಕ್ಷ ಅಂದ್ರೆ ಶಿಸ್ತಿನ ಪಕ್ಷ ಅನ್ನುವ ಹೆಸರಿತ್ತು. ಆದರೆ ಕರ್ನಾಟಕದಲ್ಲಿ ಹೀಗೆ ಅಂದ್ರೆ ಅದು ಜೋಕ್ ಅನ್ನಿಸುತ್ತದೆ. ಶಿಸ್ತು ಬಿಡಿ, ಕನಿಷ್ಟ ಕಾಳಜಿ ಅನ್ನುವುದು ಇಲ್ಲಿನ ನಾಯಕರಿಗಿಲ್ಲ. ತಮ್ಮ ಸ್ವ ಹಿತವನ್ನೇ ಕಾಪಾಡಿಕೊಳ್ಳುವುದು ಬಿಜೆಪಿಯ ಬಹುತೇಕ ನಾಯಕರಿಗೆ
ಜನ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲೇ ಬಿಜೆಪಿ ನಾಯಕರು ಪ್ರಹಸನಗಳನ್ನು ಶುರುವಿಟ್ಟುಕೊಳ್ಳುತ್ತಾರೆ. ಅದೊಂದು ಅವರಿಗೆ ಚಾಳಿಯಾಗಿ ಬಿಟ್ಟಿದೆ. ಬೇಕಿದ್ರೆ ಒಂದ್ಸಲ ಹಿಂತಿರುಗಿ ನೋಡಿ. ಯಡಿಯೂರಪ್ಪ ಹಿಂದೊಮ್ಮೆ ಸಿಎಂ ಆಗಿದ್ದ ವೇಳೆ ಅರ್ಧ ಕರ್ನಾಟಕ ಮುಳುಗಿ ಹೋಗಿತ್ತು. ಜನ ಮನೆ ಮಠ ಕಳೆದುಕೊಂಡಿದ್ದರು. ಬಿಜೆಪಿ ನಾಯಕರು ರೆಸಾರ್ಟ್ ರಾಜಕೀಯದಲ್ಲಿ ಮುಳುಗಿದ್ದರು. ಅದಾದ ಬಳಿಕ ಮತ್ತೊಮ್ಮೆ ಯಡಿಯೂರಪ್ಪ ಸಿಎಂ ಆದ್ರು, ಆಗ್ಲೂ ಸಂಪುಟ ವಿಸ್ತರಣೆ ಮಾಡದ ಯಡಿಯೂರಪ್ಪ ಏಕಾಂಗಿಯಾಗಿ ಓಡಾಡಿ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಇಟ್ರು. ಏಕಾಂಗಿ ಓಡಾಟದಿಂದ ಮಾಧ್ಯಮಗಳಲ್ಲಿ ಹೀರೋ ಆದ್ರು, ಆದರೆ ಜನರ ಕಣ್ಣಿನಲ್ಲಿ ಅವರ ನಾಯಕನಾಗಲಿಲ್ಲ. ಇದೀಗ ಕೊರೋನಾ ಅಬ್ಬರಿಸುತ್ತಿದೆ, ಜನ ಸಂಕಷ್ಟದಲ್ಲಿದ್ದಾರೆ. ಈಗ್ಲೂ ಮತ್ತೆ ಅದೇ ಕಥೆ, ಯಡಿಯೂರಪ್ಪ ಅವರನ್ನು ಕೆಳಗಿಸುತ್ತೇವೆ ಅಂತ ಒಂದು ಬಣ, ಅದು ಹೇಗೆ ಅಂತಾ ನಾವು ನೋಡ್ತೀವಿ ಅಂತಾ ಮತ್ತೊಂದು ಬಣ.
ಈ ನಡುವೆ ರಾಜ್ಯದಲ್ಲಿರುವುದು ಬಿಜೆಪಿ ಸರ್ಕಾರವಲ್ಲ, ಮೂರು ಪಕ್ಷಗಳ ಹೊಂದಾಣಿಕೆ ಸರ್ಕಾರ ಅನ್ನುವ ಸಿಪಿ ಯೋಗೀಶ್ವರ್ ಆರೋಪ ಕುರಿತಂತೆ ವಿವರಣೆ ಪಡೆಯುವುದಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಂಡವರೆಲ್ಲಾ ದಡ್ಡರು ಅನ್ನದೇ ವಿಧಿಯಿಲ್ಲ. ಹಿಂದೆ ಯತ್ನಾಳ್ ಎದ್ರೆ ಕುಂತ್ರೆ ನಿಂತ್ರೆ ಯಡಿಯೂರಪ್ಪ ವಿರುದ್ಧ ಮಾತನಾಡುತ್ತಿದ್ದರು. ವಿಜಯೇಂದ್ರ ವಿರುದ್ದ ನೇರ ನೇರಾ ತೊಡೆ ತಟ್ಟಿದ್ದರು. ಆಗ್ಲೂ ಶಿಸ್ತು ಕ್ರಮ, ಉಚ್ಛಾಟನೆ, ವಿವರಣೆ ಅನ್ನುವ ಪದಗಳು ಕೇಳಿ ಬಂದಿತ್ತು. ಇದೀಗ ಸಿಪಿ ಯೋಗೀಶ್ವರ್ ಸರದಿ. ಸಿಪಿವೈ ಆಕ್ರೋಶ ಕಾರಣವೇನು ಅನ್ನುವುದನ್ನು ನಳಿನ್ ಅವರು ಅರ್ಥ ಮಾಡಿಕೊಂಡಿದ್ರೆ ಈ ಹೇಳಿಕೆ ಬರುತ್ತಿರಲಿಲ್ಲ.
Discussion about this post