ಹೀಗೆ ಜನ ಸಾಮಾನ್ಯನೊಬ್ಬ ಓಡಾಟ ಮಾಡಿರುತ್ತಿದ್ರೆ ಟ್ರಾಫಿಕ್ ಪೊಲೀಸರು ಮನೆ ಬಾಗಿಲಿಗೆ ಬಂದು ನೋಟಿಸ್ ಕೊಡ್ತಾ ಇದ್ರು ( Nirani Bike)
ಬೆಳಗಾವಿ : ದೇಶದ ಕಾನೂನುಗಳು ವಿಐಪಿಗಳಿಗೆ ಅನ್ವಯವಾಗೋದಿಲ್ಲ ಅನ್ನುವುದು ಜನಸಾಮಾನ್ಯರು ಪ್ರತೀ ಸಲ ವ್ಯಕ್ತಪಡಿಸುತ್ತಿರುವ ಆಕ್ರೋಶ. ಈ ಕೊರೋನಾ ನಿಯಮಗಳು ನೋಡಿ, ಆದ್ಯಾವ ರಾಜಕಾರಣಿಗಳು ಫಾಲೋ ಮಾಡ್ತಾರೆ. ಟ್ರಾಫಿಕ್ ನಿಯಮಗಳು ( Nirani Bike) ಆದ್ಯಾವ ಮಂತ್ರಿಗಳಿಗೆ ಅನ್ವಯವಾಗುತ್ತದೆ.
ಇದನ್ನು ಓದಿ : ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು
ಇಂದು ಬೆಳಗಾವಿಯಲ್ಲೂ ಹೀಗೆ ಆಗಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೆಲ್ಮೆಟ್ ಇಲ್ಲದೆ ಹಿಂಬಂದಿ ಸವಾರನಾಗಿ ಬೈಕ್ ನಲ್ಲಿ ( Nirani Bike) ಕೂತು ಸುವರ್ಣ ಸೌಧಕ್ಕೆ ಆಗಮಿಸಿದ್ದಾರೆ. ಮಾತ್ರವಲ್ಲದೆ ಬೈಕ್ ಚಲಾಯಿಸುತ್ತಿದ್ದ ಮಾಧ್ಯಮದ ಸಿಬ್ಬಂದಿಯೂ ಹೆಲ್ಮೆಟ್ ಹಾಕಿರಲಿಲ್ಲ. ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ್ರೂ ದಂಡ ವಸೂಲಿ ಬಗ್ಗೆ ಪೊಲೀಸರು ತಲೆ ಕೆಡಿಸಿಕೊಂಡಿಲ್ಲ.
ಜನ ಸಾಮಾನ್ಯನೊಬ್ಬ ಹೀಗೆ ರಸ್ತೆಯಲ್ಲಿ ಬರುತ್ತಿದ್ರೆ ನಾಲ್ಕೈದು ಮಂದಿ ಪೊಲೀಸರು ಅಡ್ಡ ಹಾಕಿ, ದಂಡ ಪೀಕಿಸುತ್ತಿದ್ರು. ಆದರೇನು ಮಾಡುವುದು ದೇಶದ ಕಾನೂನುಗಳು, ಕಾನೂನು ಮಂದಿಗೆ ಅನ್ವಯಿಸುತ್ತದೆಯೇ.
ಸುವರ್ಣ ಸೌಧಕ್ಕೆ ಬರುವ ದಾರಿಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಹೀಗಾಗಿ ಸಾಹೇಬ್ರು ಬೈಕ್ ಏರಬೇಕಾಯ್ತು ಅನ್ನೋದು ನಿರಾಣಿ ಆಪ್ತ ಬಳಗದ ಪ್ರತಿಕ್ರಿಯೆ. ಹೋಗ್ಲಿ ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿಯಾದ್ರು ಹೆಲ್ಮೆಟ್ ಹಾಕಬೇಕಾಗಿತ್ತು ತಾನೇ.
Discussion about this post