ರಾಮನಗರ : ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ರಾಮನಗರಕ್ಕೆ ಬರ್ತಿರೋದರಿಂದ ಕಾಂಗ್ರೆಸ್ ನವರಿಗೆ ಭಯ ಹುಟ್ಟಿರಬೇಕು ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ನೇರ ಟಾಂಗ್ ಕೊಟ್ಟಿದ್ದಾರೆ.
ರಾಮನಗರದ ವಡ್ಡರದೊಡ್ಡಿಯಲ್ಲಿ ಮಾತನಾಡಿದ ಅವರು ಕೆಲ ದಿನಗಳ ಹಿಂದೆ ನಿಖಿಲ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಗಲಾಟೆಗೆ ಪ್ರತಿಕ್ರಿಯಿಸಿ, ನಿಖಿಲ್ ಅಂದ್ರೆ ಕಾಂಗ್ರೆಸ್ ನವರಿಗೆ ಭಯವಿರಬೇಕು ಅಂದಿದ್ದಾರೆ.
ಕೆಲ ವಾರಗಳ ಹಿಂದೆ ರಾಮನಗರದ ಚೀಲೂರು ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ನಾಟಕ ಕಾರ್ಯಕ್ರಮಕ್ಕೆ ಬಂದಿದ್ದ ನಿಖಿಲ್ ಭಾಷಣಕ್ಕೆ ಕೆಲ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿದ್ದರು. ಡಿಕೆ ಡಿಕೆ ಅನ್ನುವ ಮೂಲಕ ಕಿಚಾಯಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ನಿಖಿಲ್ ನೀವೇನ್ ಕಿತ್ತಾಕಿದ್ದೀರಾ ಎಂದು ಟಾಂಗ್ ಕೊಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಡಿಕೆ ಶಿವಕುಮಾರ್ ನಿಖಿಲ್ ಅವರಿಗೆ ಸರಿಯಾಗಿಯೇ ತಿರುಗೇಟು ಕೊಟ್ಟಿದ್ದರು.
ಈ ಎಲ್ಲಾ ಬೆಳವಣಿಗೆ ನಡುವೆ ಅನಿತಾ ಕುಮಾರಸ್ವಾಮಿ ಮತ್ತೆ ಡಿಕೆಶಿಯವರನ್ನು ಕೆಣಕಿದ್ದಾರೆ.
ಇದೇ ವೇಳೆ ದೇವೇಗೌಡ ದಂಪತಿಗಳಿಗೆ ಕೊರೋನಾ ಸೋಂಕು ತಗುಲಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು ದೇವೇಗೌಡರು ದೆಹಲಿಗೆ ಹೋಗಿದ್ದರು, ಬಳಿಕ ಹೊಳೆನರಸೀಪುರದ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರಿಗೆ ಕೊರೋನಾ ಸೋಂಕು ಹರಡಿರುವ ಸಾಧ್ಯತೆಗಳಿದೆ.
ಇನ್ನು ಕುಮಾರಸ್ವಾಮಿಯವರು ಕೂಡಾ ದೆಹಲಿಗೆ ಹೋಗಿದ್ದ ಕಾರಣ ಅವರಿಗೂ ಕೊರೋನಾ ಪರೀಕ್ಷೆ ನಡೆಸಲಾಗಿದೆ ಅಂದಿದ್ದಾರೆ.
Discussion about this post