ಸೆಲೆಬ್ರೆಟಿಗಳು ಮಾತನಾಡುವ ಮುನ್ನ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡೋ ಮುನ್ನ ಸಾವಿರ ಸಲ ಯೋಚಿಸಬೇಕು. ಒಂದಿಷ್ಟು ತಪ್ಪಿದರೂ ಕಥೆ ಮುಗಿಯಿತು.
ಹೇಳಿ ಕೇಳಿ ಇದು 4G ಕಾಲ. ಇಂಟರ್ ನೆಟ್ ದುಬಾರಿಯಾಗಿದ್ರೆ ವೈರಲ್ ಅನ್ನುವ ಕಾನ್ಸೆಪ್ಟ್ ಇರುತ್ತಿರಲಿಲ್ಲ. ಯಾವಾಗ ಇಂಟರ್ ನೆಟ್ ಬಿಟ್ಟಿಯಾಗಿ ಸಿಗಲಾರಂಭಿಸಿತೋ, ವೈರಲ್ ಅನ್ನುವ ಕಾನ್ಸೆಪ್ಟ್ ಸದ್ದು ಮಾಡುತ್ತಿದೆ.
ಹೀಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ನಿಖಿಲ್ ಕುಮಾರಸ್ವಾಮಿ ಮಾಡಿದ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಪೋಸ್ಟ್ ವೈರಲ್ ಆಗಲು ಕಾರಣ ಕನ್ನಡವನ್ನು ತಪ್ಪು ತಪ್ಪಾಗಿ ಟೈಪ್ ಮಾಡಿದ್ದು.
ಬರೆಯುವಾಗ ತಪ್ಪು ಯಾರು ಮಾಡೋದಿಲ್ಲ, ಅದ್ಯಾಕೆ ವೈರಲ್ ಮಾಡಬೇಕಿತ್ತು ಎಂದು ಪ್ರಶ್ನಿಸಬಹುದು. ಆದರೆ ಅಲ್ಲೇ ಆಗಿರೋದು ಯಡವಟ್ಟು.
ಒಂದೇ ಪೋಸ್ಟ್ ಅನ್ನು 9 ಸಲ ಎಡಿಟ್ ಮಾಡಿದರೂ ಸರಿಯಾಗಿ ಪೋಸ್ಟ್ ಮಾಡಲು ಅವರಿಂದ ಆಗಲಿಲ್ಲ. ಹೀಗಾಗಿಯೇ ಅದು ವೈರಲ್ ಆಗಿದೆ.
Discussion about this post