ತೋಟಗಾರಿಕಾ ಇಲಾಖೆ ಅಧಿಕಾರಿಯ ಚಪಲ ಬೆಳಗಾವಿ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಕಾನೂನು ಸುವ್ಯವಸ್ಥೆ ಅಂತಾ ಓಡಾಡುತ್ತಿದ್ದ ( Navyashree) ಪೊಲೀಸರು ಬಿರಿಯಾನ್, ಪಲಾವ್ ಎಂದು ಓಡಾಡಬೇಕಾಗಿದೆ.
ಬೆಳಗಾವಿ : ಪಂಚೆ ಗಟ್ಟಿ ಇಲ್ಲದ, ವೀಕ್ನೆಸ್ ಇರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಮೊದಲು ಮನೆಗೆ ಕಳುಹಿಸಬೇಕು. ಇವರಿಂದಲೇ ನಮ್ಮ ನ್ಯಾಯಾಂಗ, ಪೊಲೀಸ್ ವ್ಯವಸ್ಥೆಯ ಸಮಯ ವ್ಯರ್ಥವಾಗುತ್ತಿದೆ. ಕಾನೂನು ಮೀರಿ ಸಂಸಾರ ನಡೆಸುವವರಿಗೊಂದು ತಕ್ಕ ಪಾಠ ಕಲಿಸದೇ ಇದ್ರೆ ಮುಂದಿನ ದಿನಗಳಲ್ಲಿ ತುಂಬಾ ಕಷ್ಟ ಇದೆ. ಇದಕ್ಕೆ ಬೆಸ್ಟ್ ಉದಾಹರಣೆ ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ ಟಾಕಳೆ ಹಾಗೂ ಕಾಂಗ್ರೆಸ್ ನಾಯಕಿ ನವ್ಯಾಶ್ರೀಯವರ ( Navyashree) ಪ್ರೇಮ ಪ್ರಸಂಗ.
ನವ್ಯಾಶ್ರೀ ( Navyashree) ಕಡೆಯಿಂದ ತೊಂದರೆಯಾಗಿದೆ ಎಂದು ದೂರು ಕೊಟ್ಟ ತೋಟಗಾರಿಕಾ ಇಲಾಖೆ ಅಧಿಕಾರಿ ರಾಜಕುಮಾರ ಟಾಕಳೆ, ಬೆಂಗಳೂರಿನ ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಆಡಬಾರದ ಆಟ ಆಡಿ ಸಿಕ್ಕಿ ಬಿದ್ದಿದ್ದಾನೆ. ಚಾಕಳೆ ದೂರಿನ ಬೆನ್ನಲ್ಲೇ ಅತ್ಯಾಚಾರ, ಗರ್ಭಪಾತ, ದೈಹಿಕ ಹಲ್ಲೆ ಸೇರಿ ಹತ್ತು ಸೆಕ್ಷನ್ ಗಳ ಅಡಿಯಲ್ಲಿ ನವ್ಯಾಶ್ರೀ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ : zameer ahmed : ಡಿಕೆಶಿಯೂ ಅಲ್ಲ ಸಿದ್ದುಗೂ ಇಲ್ಲ : ಮುಂದಿನ ಸಿಎಂ ಜಮೀರ್ ಅಹಮ್ಮದ್
ಈ ದೂರಿನ ಅನ್ವಯ ಎಪಿಎಂಸಿ ಪೊಲೀಸರು ನವ್ಯಶ್ರೀಯವರನ್ನು ( Navyashree) ವೈದ್ಯಕೀಯ ತಪಾಸಣೆ ಸಲುವಾಗಿ ಬೆಳಗಾವಿಯ ಬೀಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ನವ್ಯಶ್ರೀ ಇಲ್ಲಿ ಕಿರಿಕ್ ಪ್ರಾರಂಭಿಸಿದ್ದು, ಆಸ್ಪತ್ರೆ ಊಟ ಬೇಡ, ಹೋಟೆಲ್ ಊಟವೇ ಬೇಕು, ಚಿಕನ್ ಬಿರಿಯಾನಿಯೇ ಬರಬೇಕು, ಸ್ನಾನ ಮಾಡಲು ಬಿಸಿ ನೀರು ಬೇಕು ಹೀಗೆ ಹಲವು ಬೇಡಿಕೆಯ ಪಟ್ಟಿಯೊಂದಿಗೆ ಪಟ್ಟು ಹಿಡಿದಿದ್ದಾರೆ.
ನವ್ಯಶ್ರೀ ಬೇಡಿಕೆಯ ಪಟ್ಟಿ ನೋಡಿದ ಆಸ್ಪತ್ರೆ ಸಿಬ್ಬಂದಿ ಮತ್ತು ಪೊಲೀಸರು ಗಾಬರಿಯಾಗಿದ್ದಾರೆ. ಕೊನೆಗೆ ನವ್ಯಾಶ್ರೀ ಬೇಡಿಕೆ ಮಣಿದಿರುವ ಆಸ್ಪತ್ರೆ ಹಾಗೂ ಪೊಲೀಸರು, ಸ್ನಾನಕ್ಕೆ ಬಿಸಿ ನೀರು ಮತ್ತು ಹೋಟೆಲ್ ನಿಂದ ಪಲಾವ್ ವ್ಯವಸ್ಥೆ ಮಾಡಿದ್ದಾರಂತೆ. ಈ ಪ್ರಕರಣ ಒಂದು ಹಂತಕ್ಕೆ ಬರುವ ಹೊತ್ತಿಗೆ ಇನ್ನೇನು ಕಾದಿದೆಯೋ.
Discussion about this post