ಸಂಸದರಿಗೆ ಬ್ರಹ್ಮರಕೂಟ್ಲು ರಸ್ತೆಯ ಅವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವಾಗಿಲ್ಲ. ಇದೀಗ ಈ ಸಂಬಂಧ ನರೇಂದ್ರ ಮೋದಿಯವರಿಗೆ ( narendra modi ) ದೂರು ನೀಡಲಾಗಿದೆ
ಮಂಗಳೂರು : ಬುದ್ದಿವಂತರ ಜಿಲ್ಲೆ ಎಂದು ಕರೆಸಿಕೊಂಡ ದಕ್ಷಿಣ ಕನ್ನಡದಲ್ಲಿ ದಡ್ಡತನದ ಅನೇಕ ಕೆಲಸಗಲು ನಡೆಯುತ್ತಿರುತ್ತದೆ. ಸ್ಮಾರ್ಟ್ ಸಿಟಿ ಹೆಸರಿನಲ್ಲಿ ನಡೆಯುತ್ತಿರುವ ಕಾಮಗಾರಿಯಲ್ಲಿ ಆಗುತ್ತಿರುವ ಎಡವಟ್ಟುಗಳೇ ಇದಕ್ಕೆ ಬೆಸ್ಟ್ ಎಕ್ಸಾಂಪಲ್. ಈ ಸಾಲಿಗೆ ಮತ್ತೊಂದು ಸೇರ್ಪಡೆ ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಕರ್ಮಕಾಂಡ. ( narendra modi )
ಹೆದ್ದಾರಿ ಕಾಮಗಾರಿ ಪ್ರಾರಂಭವಾಗಿ ವರ್ಷ ಹಲವು ಕಳೆಯಿತು. ಕಾಮಗಾರಿ ಮಾತ್ರ ಆಮೆ ವೇಗಕ್ಕಿಂತಲೂ ಕಡಿಮೆಯಾಗಿದೆ. ಈ ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದಿರುವ ಗುಂಡಿಗಳನ್ನು ನೋಡಿದರೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಆದ್ಯಾಕೆ ಈ ಕಡೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಅನ್ನಿಸುತ್ತಿದೆ. ಅಥವಾ ಮಳೆಯ ನೆಪ ಹೇಳಿ ಅವರನ್ನೂ ದಾರಿ ತಪ್ಪಿಸಲಾಗಿದೆಯೇ.
ಇದನ್ನೂ ಓದಿ : police investigation : ಪತ್ನಿಯನ್ನು ಕೊಂದ ಪತಿಯನ್ನು ಆರೆಸ್ಟ್ ಮಾಡಿದ್ದೆ INTERESTING: ರೋಚಕ ಕಾರ್ಯಾಚರಣೆ
ಈ ನಡುವೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಬಿಸಿರೋಡ್ ಸಮೀಪದ ಬ್ರಹ್ಮರಕೂಟ್ಲು ಟೋಲ್ ( Brahmarakotlu ) ಸಮೀಪದ ರಸ್ತೆ ಗುಂಡಿ ಬಿದ್ದು ಹಾಳಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ವೈರಲ್ ಆದರೂ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾಗಲಿ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾಗಲಿ ದನಿ ಎತ್ತಲಿಲ್ಲ. ಜನ ಮಾತ್ರ ಟೋಲ್ ಕಟ್ಟಿಯೇ ಈ ಕಚಡಾ ರಸ್ತೆಯಲ್ಲಿ ಸಾಗಬೇಕಾಗಿದೆ.
ಇದೀಗ ರಸ್ತೆಯನ್ನು ಸರಿಪಡಿಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರರದ ಪುತ್ತೂರಿನ ರಾಜೇಶ್ ಕೃಷ್ಣ ಹಾಗೂ ರೋಶನ್ ಕುಮಾರ್ ಕುಂಬ್ಳೆಯವರು ಪ್ರಧಾನಮಂತ್ರಿ ಸಚಿವಾಲಯದ ಮೊರೆ ಹೋಗಿದ್ದಾರೆ. ರಸ್ತೆ ಫೋಟೋ ಹಾಗೂ ಪರಿಸ್ಥಿತಿಯನ್ನು ವಿವರವಾಗಿ ಬರೆದು ಪಿಎಎಂಒಗೆ ಕಳುಹಿಸಿಕೊಡಲಾಗಿದೆ.
ಜೊತೆಗೆ ಕೇಂದ್ರ ಭೂಸಾರಿಗೆ ಸಚಿವಾಲಯ ಮತ್ತು ಕರ್ನಾಟಕ ಸಿಎಂ ಕಚೇರಿಗೂ ಮಾಹಿತಿ ನೀಡಲಾಗಿದೆ. ಇದೀಗ ದೂರು ಸ್ವೀಕೃತವಾಗಿದೆ. ಮೋದಿಯವರ ಹೆಸರಿನಲ್ಲಾದರೂ ಈ ರಸ್ತೆ ರಿಪೇರಿಯಾಗುತ್ತದೆಯೇ ಕಾದು ನೋಡಬೇಕು.
ಮನೆಗೆ ಸೊಸೆ ತುಂಬಿಸಿಕೊಳ್ಳಲು ಮುಂದಾದ ರವಿಚಂದ್ರನ್ : ಮನೋರಂಜನ್ ಕೈ ಹಿಡಿಯಲಿರುವ ಹುಡುಗಿ ಯಾರು ಗೊತ್ತಾ..?
ಕ್ರೇಜಿ ಸ್ಟಾರ್ ರವಿಚಂದ್ರನ್ ಮಗಳ ಮದುವೆ ಮುಗಿಸಿದ ನಂತ್ರ ಒಂದಿಷ್ಟು ರಿಲ್ಯಾಕ್ಸ್ ಆಗಿದ್ದರು. ಇದೀಗ ಪುತ್ರ ಮನೋರಂಜನ್ ಮದುವೆ ಕಾರ್ಯಕ್ಕೆ ಮುಂದಾಗಿದ್ದಾರೆ.
ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಗೃಹಸ್ಥಾಶ್ರಮಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮಾಹಿತಿಗಳ ಪ್ರಕಾರ ಆಗಸ್ಚ್ 21 ಮತ್ತು 22 ರಂದು ವಿವಾಹ ಕಾರ್ಯಕ್ರಮ ನಡೆಯಲಿದೆ. ಹೌದು ನಟ ರವಿಚಂದ್ರನ್ ಇದೀಗ ಮನೆಗೆ ಸೊಸೆ ತುಂಬಿಸಿಕೊಳ್ಳಲು ಮುಂದಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಹುಡುಗಿ ಜೊತೆಗೆ ಮನೋರಂಜನ್ ವಿವಾಹ ನೆರವೇರಲಿದೆಯಂತೆ.
ಮನೋರಂಜನ್ 2017ರಲ್ಲಿ ಸಾಹೇಬ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ನಂತರ ಬೃಹಸ್ಪತಿ ಅನ್ನುವ ಸಿನಿಮಾದಲ್ಲಿ ನಟಿಸಿದರು. 2021ರಲ್ಲಿ ಮುಗಿಲ್ ಪೇಟೆ ಸಿನಿಮಾ ತೆರೆಗೆ ಬಂತು. 2022ರಲ್ಲಿ ಪ್ರಾರಂಭ ಅನ್ನುವ ಸಿನಿಮಾ ಮೂಲಕ ತಮ್ಮ ಅದೃಷ್ಟ ಪರೀಕ್ಷೆಯನ್ನು ಮನೋರಂಜನ್ ನಡೆಸಿದ್ದಾರೆ. ಆದರೆ ರವಿಚಂದ್ರನ್ ಪುತ್ರನ ಸಿನಿಮಾ ಅಂದ ಮೇಲೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತದೆ ಅನ್ನುವ ನಿರೀಕ್ಷೆ ಇತ್ತು. ಆದರೆ ಹಾಗಾಗಿಲ್ಲ.
ಇನ್ನು ರವಿಚಂದ್ರನ್ ಕಿರಿಯ ಮಗ ಕೂಡಾ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಇತ್ತೀಚೆಗೆ ತ್ರಿವಿಕ್ರಮ ಅನ್ನುವ ಸಿನಿಮಾ ಬಿಡುಗಡೆಯಾಗಿತ್ತು. ಆದರೆ ಈ ಸಿನಿಮಾ ಕೂಡಾ ನಿರೀಕ್ಷೆಯ ಮಟ್ಟಕ್ಕೆ ಗೆಲುವು ಕಾಣಲಿಲ್ಲ.
ಇನ್ನು ರವಿಚಂದ್ರನ್ ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಕಿರುತೆರೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಅದರೊಂದಿಗೆ ಹೊಸಬರ ಸಿನಿಮಾಗಳಿಗೆ ಪ್ರೋತ್ಸಾಹಿಸುತ್ತಿರುವ ಅವರು ಚಂದನವನ ನಿಂತ ನೀರಾಗಬಾರದೆಂದು ಹೊಸ ಪ್ರತಿಭೆಗಳ ಬೆನ್ನು ತಟ್ಟುವ ಕೆಲಸ ಮಾಡುತ್ತಿದ್ದಾರೆ.
Discussion about this post