ಎಲ್ಲಾ ಆನೆಗಳು ತಾಲಿಮಿಗೆ ಉತ್ತಮವಾಗಿ ಸ್ಪಂದಿಸಿವೆ
ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಜಂಬೂ ಸವಾರಿಯ ಗಜಪಡೆ ಹಾಗೂ ಅಶ್ವರೋಹಿ ಪಡೆಗೆ ಇಂದು ಕುಶಾಲು ತೋಪಿನ ತಾಲಿಮು ನಡೆಸಲಾಯಿತು.
ಅಕ್ಟೋಬರ್ ೧೨ ರಂದು ನಡೆಯಲಿರುವ ಜಂಬೂ ಸವಾರಿಯ ದಿನದಂದು ೨೧ ಬಾರಿ ಕುಶಾಲು ತೋಪು ಹಾರಿಸುವುದರಿಂದ ಅಂದು ಆನೆ ಮತ್ತು ಅಶ್ವರೋಹಿ ಪಡೆಗಳು ಬೆದರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಚಿನ್ನದ ಅಂಬಾರಿ ಹೊರುವ ಅಭಿಮನ್ಯು ಸೇರಿದಂತೆ ಒಟ್ಟು ೧೪ ಆನೆಗಳಿಗೆ ಮೂರು ಸುತ್ತಿನ ೨೧ ಕುಶಾಲು ತೋಪಿನ ತಾಲೀಮು ನಡೆಸಲಾಯಿತು.
ವಿಜಯ ದಶಮಿಯಂದು ನಡೆಯಲಿರುವ ಕುಶಾಲು ತೋಪಿನ ಶಬ್ದಕ್ಕೆ ಹೊಂದಿಕೊಳ್ಳಲೆಂದು ಮುನ್ನೆಚ್ಚರಿಕೆಯಾಗಿ ತಾಲಿಮು ನಡೆಸಲಾಗಿದೆ,. ಎಲ್ಲಾ ಆನೆಗಳು ತಾಲಿಮಿಗೆ ಉತ್ತಮವಾಗಿ ಸ್ಪಂದಿಸಿವೆ ಹಾಗೂ ಎಲ್ಲಾ ಆನೆಗಳು ಅರೋಗ್ಯಯುತವಾಗಿವೆ ಎಂದು ಹಿರಿಯ ಅರಣ್ಯಧಿಕಾರಿ ಡಾ ಪ್ರಭುಗೌಡ ತಿಳಿಸಿದ್ದಾರೆ.