ಬೆಂಗಳೂರು : ರಮೇಶ್ ಜಾರಕಿಹೊಳಿ ಕಾಮಲೀಲೆಯ ಸಿಡಿ ಪ್ರಕರಣ ಇದೀಗ ಮತ್ತೊಂದು ಘಟ್ಟ ತಲುಪಿದೆ.
ಸಂತ್ರಸ್ಥೆ ಪರವಾಗಿ ಪೊಲೀಸರ ಮುಂದೆ ಹಾಜರಾಗಿರುವ ವಕೀಲ ಜಗದೀಶ್ ಜಾರಕಿಹೊಳಿ ವಿರುದ್ಧ ದೂರು ಸಲ್ಲಿಸಿದ್ದಾರೆ. ಮುಂದುವರಿದ ಭಾಗವಾಗಿ ಇದೀಗ ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ಕೂಡಾ ದಾಖಲಾಗಿದೆ.
ಅತ್ತ ದೂರು ದಾಖಲಾಗುತ್ತಿದ್ದಂತೆ ಇತ್ತ ಪ್ರತಿಕ್ರಿಯೆ ನೀಡಿರುವ ರಮೇಶ್ ಜಾರಕಿಹೊಳಿ, ವಿರೋಧಿಗಳು ಕೊನೆಯ ಬಾಣ ಬಿಟ್ಟಿದ್ದಾರೆ. ಇದು ಅವರ ಕೊನೆಯ ಅಸ್ತ್ರವಾಗಿದೆ. ಅಲ್ಲಿಗೆ ಮುಗಿಯಿತು.
ಇದೀಗ ನಮ್ಮ ಆಟ ಶುರು, ನಾಳೆಯಿಂದ ನಮ್ಮ ಆಟ ಶುರುವಾಗಲಿದೆ ಎಂದು ಹೇಳಿರುವ ರಮೇಶ್ ಜಾರಕಿಹೊಳಿ, ಇಂತಹ 10 ದೂರುಗಳು ಬರ್ಲಿ ನಾನು ಎದುರಿಸುತ್ತೇನೆ ಅಂದಿದ್ದಾರೆ.
10 ವಕೀಲರು ಬರ್ಲಿ ನಮ್ಮಲ್ಲೂ ವಕೀಲರಿದ್ದಾರೆ. ಸುಪ್ರೀಂಕೋರ್ಟ್ ವಕೀಲರಿದ್ದಾರೆ. ನಾನು ತಪ್ಪು ಮಾಡಿಲ್ಲ. ಹೀಗೆಲ್ಲಾ ಆಗುತ್ತದೆ ನನಗೆ ಮುಂಚೆಯೇ ಗೊತ್ತಿತ್ತು.
ತನ್ನ ಮೈಯನ್ನು ಓಪನ್ ಆಗಿ ಜಗತ್ತಿಗೆ ತೋರಿಸಿದ ಹುಡುಗಿ ನನ್ನ ಪರವಾಗಿ ಮಾತನಾಡಲು ಸಾಧ್ಯವೇ ಎಂದು ಪ್ರಶ್ವಿಸಿರುವ ಜಾರಕಿಹೊಳಿ ನನ್ನ ದೂರಿನ ಆಧಾರದಲ್ಲಿ ದಾಖಲಾಗಿರುವ ಎಫ್.ಐ.ಆರ್ ಬಗ್ಗೆ ತನಿಖೆ ನಡೆಯಲಿ. ಅದು ಮೊದಲು ಇತ್ಯರ್ಥವಾಗಬೇಕು ಎಂದು ಒತ್ತಾಯಿಸಿದ್ದಾರೆ.
ಯುವತಿ ಮನೆಯಲ್ಲಿ 10 ಲಕ್ಷ ಸಿಕ್ಕಿದೆ, ಕಿಂಗ್ ಪಿನ್ ಮನೆಯಲ್ಲಿ ರೊಕ್ಕ, ಬಂಗಾರ ಸಿಕ್ಕಿವೆ. ಅದು ವಿಚಾರಣೆಯಾಗಬೇಕು ಎಂದು ಒತ್ತಾಯಿಸಿರುವ ರಮೇಶ್ ಜಾರಕಿಹೊಳಿ, ನಾನು ಹೆದರಿಲ್ಲ, ಹಿಂದೆಯೂ ಹೋರಾಟ ಮಾಡಿಕೊಂಡು ಬಂದವನು ಹೀಗಾಗಿ ನಾಳೆಯಿಂದ ನಮ್ಮ ಆಟ ಶುರು ಅಂದಿದ್ದಾರೆ.
ಇನ್ನು ಸರ್ಕಾರ ಉರುಳಿಸಿದವರಿಗೆ ಈ ಕೇಸ್ ಲೆಕ್ಕವೇ ಅಂದಿರುವ ಜಾರಕಿಹೊಳಿ ನಾವೆಷ್ಟು ಪ್ರಭಾವಶಾಲಿ ಅನ್ನುವುದನ್ನು ಸೂಚ್ಯವಾಗಿ ಹೇಳಿದ್ದಾರೆ. ಜಾರಕಿಹೊಳಿಯವರ ಈ ಮಾತು ಹಲವು ಅನುಮಾನಕ್ಕೆ ಕಾರಣವಾಗಿದೆ.
Discussion about this post