ಬೆಂಗಳೂರು : ಕಾಂಗ್ರೆಸ್ ನಲ್ಲಿ ಸಿದ್ದು ಸಿಎಂ ವಿವಾದದ ಬೆಂಕಿ ಒಂದಿಷ್ಟು ಹೆಚ್ಚೇ ಅನ್ನುವಂತೆ ಉರಿಯುತ್ತಿದೆ. ಜಮೀರ್ ಅಹಮ್ಮದ್ ಶುರುಮಾಡಿದ ಈ ಕಾರ್ಯ ಇದೀಗ ಪಕ್ಷವನ್ನು ಸೋಲಿನತ್ತ ತಳ್ಳಿದರೂ ಅಚ್ಚರಿ ಇಲ್ಲ.
ಈ ನಡುವೆ ಸಿದ್ದರಾಮಯ್ಯ ಅವರಿಗೆ ನೇರವಾಗಿ ಟಾಂಗ್ ಕೊಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಇಂತಹ ಹೇಳಿಕೆ ನೀಡುವವರಿಗೆ ಹೈಕಮಾಂಡ್ ಏನು ಹೇಳಬೇಕೋ ಅದನ್ನು ಹೇಳಿದೆ. ಇನ್ನು ಶಾಸಕರ ವಿಚಾರವನ್ನು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೋಡಿಕೊಳ್ಳುತ್ತಾರೆ. ಒಂದು ವೇಳೆ ಅವರು ನೋಡಿಕೊಳ್ಳದಿದ್ದರೆ ಆ ಕುರಿತು ಗಮನ ಹರಿಸಲು ಕಾಂಗ್ರೆಸ್ ಪಕ್ಷ ಬದುಕಿದೆ ಅಂದಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿರುವ ಅವರು ನಮ್ಮಲ್ಲಿ ಯಾವ ಕುರ್ಚಿಯೂ ಖಾಲಿ ಇಲ್ಲ. ನಮ್ಮ ಗುರಿ ಬಿಜೆಪಿ ಸೋಲಿಸುವುದು, ನಾನು ಮುಖ್ಯಮಂತ್ರಿಯಾಗುವ ಆತುರದಲ್ಲಿ ಇಲ್ಲ, ನನ್ನ ಗುರಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವುದು ಅಂದಿದ್ದಾರೆ.
ಮತ್ತೊಂದು ಕಡೆ ಸಿದ್ದರಾಮಯ್ಯ ಹುಡುಗರ ಪರ ಕಿಡಿ ಕಾರಿರುವ ಸಂಸದ ಡಿಕೆ ಸುರೇಶ್, ಇವೆಲ್ಲಾ ಅಧಿಕಾರಕ್ಕಾಗಿ ಕಾಂಗ್ರೆಸ್ ಗೆ ಬಂದಿರುವವರ ಕಿತಾಪತಿ, ಅಧಿಕಾರಕ್ಕಾಗಿ ಜೋತು ಬಿದ್ದಿರುವವರು ಇಂತ ಹೇಳಿಕೆ ನೀಡ್ತಾರೆ. ಪ್ರಸ್ತುತ ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲ, ಕೆಲವರು ಈಗಲೇ ಸಿಎಂ ಆಗುವುದಾದರೆ ಅವರು ದೇವರು ಒಳ್ಳೆಯದು ಮಾಡಲಿ ಅಂದಿದ್ದಾರೆ.
ಮಲಗಿದ್ದ ಕೆಲವರು ಈಗ ಎದ್ದಿದ್ದಾರೆ. ನ್ಯೂಸ್ ಚಾನೆಲ್ ಗಳಲ್ಲಿ ಮುಖ ಕಾಣಿಸಿಕೊಳ್ಳಲಿ ಎಂದು ಈ ರೀತಿ ಮಾತನಾಡುತ್ತಿದ್ದಾರೆ. ಇವರೆಲ್ಲಾರ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ ಅಂದಿದ್ದಾರೆ.
Discussion about this post