ಕನ್ನಡ ಹೋರಾಟಗಾರ ಎಂದು ಕರೆಸಿಕೊಂಡಿರುವ ವ್ಯಕ್ತಿಗಳು ಹೀಗೆ ಮಾಡಿದ್ರೆ ಹೋರಾಟಗಾರರ ಬಗ್ಗೆ ನಂಬಿಕೆ ಎಲ್ಲಿ ಉಳಿಯುತ್ತದೆ ( Murder Case)
ಬೆಂಗಳೂರು : ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಒಬ್ಬರಿಗೆ ಸಿಕ್ಕಿ ಸಣ್ಣ ಮಾಹಿತಿಯೊಂದರ ಬೆನ್ನು ಹತ್ತಿದ ಪೊಲೀಸರು ಕನ್ನಡ ಹೋರಾಟಗಾರನೊಬ್ಬ ತನ್ನ ಪುತ್ರನೊಂದಿಗೆ ಸೇರಿ ನಡೆಸಿದ ಕೊಲೆ ಕೃತ್ಯವನ್ನು ( Murder Case ) ಬಯಲಿಗೆಳೆದಿದ್ದಾರೆ.
ಈ ಮೂಲಕ ಹೋರಾಟಗಾರ ಎಂದು ಕರೆಸಿಕೊಂಡವನು ಮಾಡುತ್ತಿದ್ದ ಅಡ್ಡ ಕಸುಬಿ ವ್ಯವಹಾರವನ್ನು ಕೂಡಾ ಪೊಲೀಸರು ಸಾರ್ವಜನಿಕರ ಮುಂದಿಟ್ಟಿದ್ದಾರೆ.( Murder Case)
Read More : Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ
ಕೆಲ ತಿಂಗಳ ಹಿಂದೆ ಸರ್ಕಾರ ವತಿಯಿಂದ ಸಬ್ಸಿಡಿ ದರದಲ್ಲಿ ಕಾರುಗಳನ್ನು ಕೊಡಿಸುವುದಾಗಿ ಮೃತ ಶರತ್ ಕುಮಾರ್ ಚಿಕ್ಕಬಳ್ಳಾಪುರ ಮತ್ತು ಯಲಹಂಕ ಭಾಗದ ಅನೇಕರಿಂದ ಲಕ್ಷಾಂತರ ರೂಪಾಯಿ ಹಣ ಸಂಗ್ರಹ ಮಾಡಿದ್ದ. ಈ ಶರತ್ ಕೂಡಾ ಕರವೇ ಸಂಘಟನೆಯಲ್ಲೇ ಗುರುತಿಸಿಕೊಂಡಿದ್ದ.
ಆದರೆ ಸಕಾಲಕ್ಕೆ ಕಾರುಗಳನ್ನು ಕೊಡಿಸದ ಕಾರಣ ಹಣ ಕೊಟ್ಟವರು ಹಣ ಮರಳಿಸುವಂತೆ ಒತ್ತಾಯಿಸಿದ್ದಾರೆ. ಆದರೆ ಶರತ್ ಹಣ ಕೊಡಲಿಲ್ಲ. ಹೀಗಾಗಿ ಹಣ ಕಳೆದುಕೊಂಡವರು ಚಿಕ್ಕಬಳ್ಳಾಪುರ ಜಿಲ್ಲೆಯ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಚಲಪತಿ ಅಗಲಗುರ್ಕಿ ಅಲಿಯಾಸ್ ವೆಂಕಟ ಚಲಪತಿಗೆ ಮನವಿ ಮಾಡಿದ್ದಾರೆ. ಕನ್ನಡಕ್ಕಾಗಿ, ಕರ್ನಾಟಕಕ್ಕಾಗಿ ಹೋರಾಡ್ತೀನಿ ಅಂದವ ಯಾವಾಗ ಈ ಡೀಲ್ ಗೆ ಕೈ ಹಾಕಿದ್ನೋ ವ್ಯವಹಾರದ ಸ್ವರೂಪವೇ ಬದಲಾಯ್ತು.
ಶರತ್ ಕುಮಾರ್ ಕಡೆಯಿಂದ ಹಣ ವಸೂಲಿ ಮಾಡುವ ಕಾರ್ಯವನ್ನು ಕರವೇ ಮುಖಂಡ ತನ್ನ ಪುತ್ರ ಎವಿ ಶರತ್ ಕುಮಾರ್ ಗೆ ವಹಿಸಿದ್ದಾನೆ. ಇದೇ ಎವಿ ಶರತ್ ಮೃತ ಶರತ್ ನನ್ನು ಚಲಪತಿಗೆ ಸೇರಿದ ಗೌರಿಬಿನೂರಿನಲ್ಲಿರುವ ತೋಟದ ಮನೆಯಲ್ಲಿ ಬಂಧಿಸಿಟ್ಟು ಚಿತ್ರಹಿಂಸೆ ಕೊಟ್ಟಿದ್ದಾರೆ.
ಬಳಿಕ ಮತ್ತೊಬ್ಬ ಆರೋಪಿ ಸಂಕೇತ್ ಅನ್ನುವವನ ವಾಟದಹೊಸಹಳ್ಳಿಯಲ್ಲಿ ಮಾವಿನ ತೋಟಕ್ಕೆ ಕರೆದುಕೊಂಡು ಹೋಗಿ ಮನ ಬಂದಂತೆ ಹೊಡೆದು ಶರತ್ ನನ್ನು ಕೊಲೆ ಮಾಡಿದ್ದಾರೆ. ಬಳಿಕ ಮೃತ ದೇಹವನ್ನು ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್ ನಲ್ಲಿ ಎಸೆದು ಚಿಕ್ಕಬಳ್ಳಾಪುರಕ್ಕೆ ಮರಳಿ ಬಂದಿದ್ದಾರೆ.
ಇವೆಲ್ಲಾ ನಡೆದು 9 ತಿಂಗಳು ಕಳೆದು ಹೋಗಿದೆ. ಮಗ ನಾಪತ್ತೆಯಾಗಿದ್ದರೂ, ಮೃತ ಶರತ್ ಮನೆಯವರು ಪೊಲೀಸರಿಗೆ ದೂರು ನೀಡಿರಲಿಲ್ಲ. ಹೀಗಾಗಿ ತನಿಖೆಯೂ ನಡೆಯಲಿಲ್ಲ. ಈ ನಡುವೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಒಬ್ಬರಿಗೆ ಫೈನಾನ್ಸಿಯರ್ ಶರತ್ ಕುಮಾರ್ ಹತ್ಯೆಯ ಬಗ್ಗೆ ಮಾಹಿತಿ ಸಿಕ್ಕಿದೆ. ಚಲಪತಿ ತಂಡದ ಕೃತ್ಯದ ಬಗ್ಗೆ ಸಿಕ್ಕ ಮಾಹಿತಿಯನ್ನು ಹೆಡ್ ಕಾನ್ ಸ್ಟೇಬಲ್ ನಂದೀಶ್ ಹಿರಿಯ ಅಧಿಕಾರಿಗಳಿಗೆ ತಲುಪಿಸಿದ್ದಾರೆ. ಇದೇ ಹೊತ್ತಿಗೆ ಅನಾಮೇಧಯ ಪತ್ರ ಮತ್ತು ಪೆನ್ ಡ್ರೈವ್ ಪೊಲೀಸರ ಕೈ ಸೇರಿದೆ. ಪೆನ್ ಡ್ರೈವ್ ನಲ್ಲಿದ್ದ ವಿಡಿಯೋ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸರು ಇದೀಗ ಕೊಲೆಗಾರರನ್ನು ಜೈಲಿಗೆ ಅಟ್ಟಿದ್ದಾರೆ.
ಬಂಧಿತರನ್ನು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಚಲಪತಿ, ಆತನ ಪುತ್ರ ಎವಿ ಶರತ್, ಕೆ ಧನುಷ್, ಆರ್ ಶ್ರೀಧರ್, ಯಲಹಂಕದ ಎಂ.ವಿ ಮಂಜುನಾಥ್ ಎಂದು ಗುರುತಿಸಲಾಗಿದೆ. ಇನ್ನೂ ಹಲವಾರು ಮಂದಿ ಆರೋಪಿಗಳು ತಲೆ ಮರೆಸಿಕೊಂಡಿದ್ದು ಅವರೆಲ್ಲರನ್ನೂ ಬಂಧಿಸುತ್ತೇವೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ ಗೌಡ ಹೇಳಿದ್ದಾರೆ.
Discussion about this post