ನವದೆಹಲಿ : KRS ಜಲಾಶಯಕ್ಕೆ ಆಗಬಹುದಾದ ಅನಾಹುತವನ್ನು ತಡೆಗಟ್ಟುವ ನಿಟ್ಟಿನಲ್ಲಿ ಏಕಾಂಗಿ ಹೋರಾಟ ಪ್ರಾರಂಭಿಸಿರುವ ಸುಮಲತಾ ಅಂಬರೀಶ್, ಹೋರಾಟವನ್ನು ದೆಹಲಿಗೆ ವಿಸ್ತರಿಸಿದ್ದಾರೆ. ಕೆ.ಆರ್.ಎಸ್ ಗೆ ಆಗಬಹುದಾದ ಅಪಾಯವನ್ನು ತಡೆಯುವ ನಿಟ್ಟಿನಲ್ಲಿ ಯಡಿಯೂರಪ್ಪ ಅವರಿಗೆ ಮನಸ್ಸಿಲ್ಲ ಅನ್ನುವುದು ಸ್ಪಷ್ಟವಾಗುತ್ತಿದ್ದಂತೆ, ಕೇಂದ್ರ ಸರ್ಕಾರಕ್ಕೆ ದೂರು ಸಲ್ಲಿಸಿರುವ ಅವರು ದಯವಿಟ್ಟು ಜಲಾಶಯ ರಕ್ಷಿಸಿ ಅಂದಿದ್ದಾರೆ.
ಸಂಬಂಧ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿರುವ ಸುಮಲತಾ, ಸುದೀರ್ಘ ಮನವಿ ಪತ್ರವನ್ನು ಸಲ್ಲಿಸಿದ್ದಾರೆ. ಮನವಿ ಪತ್ರದಲ್ಲಿ ಜಲಾಶಯದ ಪ್ರಸ್ತುತ ಪರಿಸ್ಥಿತಿ, ಅಧಿಕಾರಿಗಳ ಒಳ ಒಪ್ಪಂದೊಂದಿಗೆ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ, ಇದರಿಂದ ಡ್ಯಾಮ್ ಮೇಲಾಗುತ್ತಿರುವ ಪರಿಣಾಮ, ಮುಂದೆ ಆಗಬಹುದಾದ ಅಪಾಯ, ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಈವರೆಗೆ ಹೊರಡಿಸಿರುವ ಆದೇಶ, ತಜ್ಞರ ವರದಿಗಳನ್ನು ಉಲ್ಲೇಖಿಸಿದ್ದಾರೆ.
ಇವತ್ತು ಸುಮಲತಾ ಅವರನ್ನು ನೋಡಿದರೆ ಇದು ರಾಜ್ಯ ಸರ್ಕಾರದ ವಿರುದ್ಧದ ನೇರ ಸಮರ ಅನ್ನುವುದರಲ್ಲಿ ಅನುಮಾನವಿಲ್ಲ. ಮಂಡ್ಯದ ಜೆಡಿಎಸ್ ಸಾಕಷ್ಟು ನಡೆಸುತ್ತಿದ್ದಾರೆ ಎನ್ನಲಾದ ಅಕ್ರಮಗಳ ವಿರುದ್ಧ ರಾಜ್ಯ ಸರ್ಕಾರ ಕೈಗೊಳ್ಳುತ್ತಿಲ್ಲ. ಈಗಾಗಲೇ ಸಾಕಷ್ಟು ಮನವಿ ಕೊಟ್ಟರು ಅದಕ್ಕೆ ಸರ್ಕಾರ ಸ್ಪಂದಿಸಿಲ್ಲ. ಅಷ್ಟು ಮಾತ್ರವಲ್ಲದೆ ಬಿಜೆಪಿ ಸರ್ಕಾರದ ಅನೇಕ ಸಚಿವರು ಸುಮಲತಾ ವಿರುದ್ಧವೇ ತಿರುಗಿ ಬಿದ್ದಿದ್ದರು.
ಹೀಗಾಗಿ ಅನಿವಾರ್ಯವಾಗಿ ಕಟ್ಟೆ ರಕ್ಷಿಸುವ ನಿಟ್ಟಿನಲ್ಲಿ ಸುಮಲತಾ ಕೇಂದ್ರದ ಮೆಟ್ಟಿಲು ಹತ್ತಿದ್ದಾರೆ.
Discussion about this post