ಕರಾವಳಿ ಜಿಲ್ಲೆಗಳಲ್ಲಿ ಸದ್ದು ಮಾಡುತ್ತಿದ್ದ ನೈತಿಕ ಪೊಲೀಸ್ ಗಿರಿ ಈಗ ರಾಜಧಾನಿ ಬೆಂಗಳೂರಿಗೂ ಕಾಲಿಟ್ಟಿದೆ. ನಗರದ ಡೈರಿ ಸರ್ಕಲ್ ಬಳಿ ಮುಸ್ಲಿಂ ಸಂಘಟನೆ ಯುವಕರು ನೈತಿಕ ಪೊಲೀಸ್ ಗಿರಿ ಮೆರೆದಿದ್ದು, ಸಹೋದ್ಯೋಗಿ ಮುಸ್ಲಿಂ ಮಹಿಳೆಯನ್ನು ಕರೆದುಕೊಂಡು ಹೋಗುತ್ತಿದ್ದ ಮಹೇಶ್ ಅನ್ನುವವರ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ಘಟನೆ ಯಾವಾಗ ನಡೆದಿದೆ ಅನ್ನುವ ಬಗ್ಗೆ ಇನ್ನೂ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಜೊತೆಗೆ ಹಲ್ಲೆಗೊಳಗಾದ ಯುವಕ ಆಗ್ಲಿ ಅಥವಾ ಪುಂಡರ ಅಸಭ್ಯ ವರ್ತನೆಯಿಂದ ಹಿಂಸೆ ಅನುಭವಿಸಿದ ಮಹಿಳೆಯಾಗಲಿ ಯಾವುದೇ ದೂರು ಸಲ್ಲಿಸಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಆಧರಿಸಿ ವಾಹಿನಿಯೊಂದು ಈ ಸಂಬಂಧ ಸುದ್ದಿ ಪ್ರಸಾರ ಮಾಡಿದ್ದು ಪೊಲೀಸರು ಕ್ರಮ ಕೈಗೊಳ್ಳುತ್ತಾರೆಯೇ ಕಾದು ನೋಡಬೇಕು.
ವೈರಲ್ ಆಗಿರುವ ವಿಡಿಯೋದಲ್ಲಿ ಹಿಂದೂ ಯುವಕನೊಂದಿಗೆ ಮುಸ್ಲಿಂ ಮಹಿಳೆಯೊಬ್ಬರು ಬೈಕ್ ನಲ್ಲಿ ಪ್ರಯಾಣಿಸುತ್ತಿರುವುದನ್ನು ಪತ್ತೆ ಹಚ್ಚಿದ ಪುಂಡರ ಬೈಕ್ ಅಡ್ಡ ಹಾಕುತ್ತಾರೆ. ಏನು ಎತ್ತ ಎಂದು ವಿಚಾರಿಸಿದೆ ಹಲ್ಲೆಯನ್ನು ನಡೆಸುತ್ತಾರೆ. ಅಷ್ಟೇ ಅಲ್ಲದೆ ಬುರ್ಖಾ ಹಾಕಿರುವ ನಿಮಗೆ ಹೀಗೆ ಅನ್ಯಧರ್ಮಿಯರ ಜೊತೆ ಹೋಗಲು ನಾಚಿಕೆಯಾಗೋದಿಲ್ವ ಎಂದು ನಿಂದಿಸಿ ಗೂಂಡಾಗಿರಿ ಮೆರೆದಿದ್ದಾರೆ.
ಅನ್ಯ ಧರ್ಮಿಯರ ಜೊತೆ ಬೇಕಿದ್ರೆ ಮಲಗಿಕೊಳ್ಳಿ ಬುರ್ಖಾ ತೆಗೆದು ಹೋಗಿ ನಮಗೆ ಅದು ಬೇಕಿಲ್ಲ ಅನ್ನುವ ಮೂಲಕ ಒಬ್ಬ ಮಹಿಳೆಯ ಜೊತೆ ಹೇಗೆ ಮಾತನಾಡಬಾರದೋ ಹಾಗೇ ಮಾತನಾಡಿದ್ದಾರೆ.
ಅಷ್ಟೇ ಅಲ್ಲದೆ ಮಹಿಳೆಯರ ಮನೆಯವರ ಫೋನ್ ನಂಬರ್ ಪಡೆದು ಬಳಿಕ ಮನೆಯವರನ್ನೂ ನಿಂದಿಸಿದ್ದಾರೆ. ಬಳಿಕ ಬೈಕ್ ನಿಂದ ಕೆಳಗಿಳಿಸಿ ಆಟೋದಲ್ಲಿ ಹೋಗುವಂತೆ ತಾಲಿಬಾನ್ ಮನಸ್ಥಿತಿಯ ಪುಂಡರು ತಾಕೀತು ಮಾಡಿದ್ದಾರೆ.
Discussion about this post