20 ವರ್ಷಗಳ ಹಿಂದೆ ತಿಪ್ಪೇಸ್ವಾಮಿ ಪುತ್ರಿಯನ್ನು ಕಳೆದುಕೊಂಡಿದ್ದರು. ಇದೀಗ ಪುತ್ರನನ್ನು ( Molakalmur Tippeswamy son) ಕಳೆದುಕೊಂಡ ನೋವು
ಚಿತ್ರದುರ್ಗ : ಮೊಳಕಾಲ್ಮೂರು ಕ್ಷೇತ್ರದ ಮಾಜಿ ಶಾಸಕ ನೆರ್ಲಗುಂಟೆ ಎನ್. ತಿಪ್ಪೇಸ್ವಾಮಿ ಪುತ್ರ ಶಿವಕುಮಾರ್ ಬುಧವಾರ ಮೃತಪಟ್ಟಿದ್ದಾರೆ. 32 ವರ್ಷದ ಶಿವಕುಮಾರ್ ( Molakalmur Tippeswamy son ) ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದರು. ತಮ್ಮ ಆರೋಗ್ಯ ಸುಧಾರಣೆ ಸಲುವಾಗಿ ಬೆಂಗಳೂರು, ದಾವಣಗೆರೆ, ಚಿತ್ರದುರ್ಗದಲ್ಲಿ ಚಿಕಿತ್ಸೆ ಪಡೆದಿದ್ದ ಅವರು ಚಿತ್ರದುರ್ಗದ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೃತ ಪಟ್ಟಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ತಿಪ್ಪೇಸ್ವಾಮಿ ಟಿಕೆಟ್ ವಂಚಿತರಾಗಿದ್ದರು. ಶ್ರೀರಾಮುಲು ಕ್ಷೇತ್ರಕ್ಕೆ ವಲಸೆ ಬಂದ ಕಾರಣ ತಿಪ್ಪೇಸ್ವಾಮಿ ಪಕ್ಷೇತರರಾಗಿ ಸ್ಪರ್ಧಿಸಿ ಭಾರೀ ಅಂತರದಿಂದ ಸೋಲು ಕಂಡಿದ್ದರು. ಈ ವೇಳೆ ತಂದೆಯ ಗೆಲುವಿಗಾಗಿ ಶಿವಕುಮಾರ್ ಸಿಕ್ಕಾಪಟ್ಟೆ ಶ್ರಮಿಸಿದ್ದರು.
ಇದನ್ನೂ ಓದಿ : ಝೀ ನ್ಯೂಸ್ Anchor ಬಂಧಿಸಲು 2 ರಾಜ್ಯದ ಪೊಲೀಸರ ನಡುವೆ ಕಿತ್ತಾಟ
ತಂದೆಯ ರಾಜಕೀಯ ಭವಿಷ್ಯಕ್ಕಾಗಿ ಓಡಾಡುತ್ತಿದ್ದ ಶಿವಕುಮಾರ್ ಕ್ಷೇತ್ರದ ಜನರ ಪ್ರೀತಿಗೆ ಪಾತ್ರರಾಗಿದ್ದರು. ವಿಧಿಯಾಟ ಅಂದ್ರೆ 20 ವರ್ಷಗಳ ಹಿಂದೆ ತಿಪ್ಪೇಸ್ವಾಮಿ ಪುತ್ರಿಯೊಬ್ಬಳನ್ನು ಕಳೆದುಕೊಂಡಿದ್ದರು. ಇದೀಗ ಪುತ್ರ ಶೋಕ. ಇಬ್ಬರೂ ಮಕ್ಕಳನ್ನು ಕಳೆದುಕೊಂಡು ತಿಪ್ಪೇಸ್ವಾಮಿ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.
ಬಂಟ್ವಾಳದಲ್ಲಿ ಮನೆ ಮೇಲೆ ಬಿದ್ದ ಗುಡ್ಡ : ಮಣ್ಣಿನಡಿ ಸಿಲುಕಿದ ನಾಲ್ವರು ಕಾರ್ಮಿಕರು
ದಕ್ಷಿಣ ಕನ್ನಡ ಜಿಲ್ಲೆಯ ಮಳೆ ಅಬ್ಬರಿಸುತ್ತಿದೆ. ಹಲವು ಕಡೆಗಳಲ್ಲಿ ಅನಾಹುತ ಸಂಭವಿಸಿದೆ. ಆದರೆ ಜಿಲ್ಲೆಯಿಂದ ಸಚಿವರಾದ ಮೂವರು ನಾಪತ್ತೆಯಾಗಿದ್ದಾರೆ. ಪರಿಹಾರ ಕಾರ್ಯಗಳತ್ತ ಅದ್ಯಾವ ಸಚಿವನೂ ಚಿತ್ತ ಹರಿಸಿಲ್ಲ. ಈ ನಡುವೆ Mangalore rain ಅಬ್ಬರಕ್ಕೆ ಮನೆಯ ಮೇಲೆ ಗುಡ್ಡ ಕುಸಿದು ಬಿದ್ದಿದೆ.
ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ತೀವ್ರವಾಗಿದೆ.( Mangalore rain) ಹಲವು ಕಡೆಗಳಲ್ಲಿ ಅನಾಹುತ ಸಂಭವಿಸಿದೆ. ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಂಜಿಕಲ್ಲಿನಲ್ಲಿ ಮನೆಯ ಮೇಲಿದ್ದ ಗುಡ್ಡ ಕುಸಿದು ನಾಲ್ವರು ಮಣ್ಣಿನಡಿ ಸಿಲುಕಿದ ದುರ್ಘಟನೆ ಸಂಭವಿಸಿದೆ.
ಹೆನ್ರಿ ಅನ್ನುವವರಿಗೆ ಸೇರಿದ ಜಾಗದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮನೆಯ ಹೊರಗಿರುವ ಕೊಠಡಿಗೆ ಗುಡ್ಡ ಜರಿದು ಬಿದ್ದ ಪರಿಣಾಮ ಹೆನ್ರಿಯವರ ತೋಟದ ಕೆಲಸಕ್ಕೆ ಬಂದ ಉತ್ತರ ಕನ್ನಡದ ನಾಲ್ವರು ಮಣ್ಣಿನೊಳಗೆ ಸಿಲುಕಿಕೊಂಡಿದ್ದಾರೆ. ಇದೀಗ ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದು, ಇನ್ನುಳಿದ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಸ್ಥಳಕ್ಕೆ ಜೆಸಿಬಿ
Discussion about this post