ಚಿತ್ರದುರ್ಗದಲ್ಲಿ ಮೋದಿ ಹೆಲಿಕಾಫ್ಟರ್ ನಿಂದ ಇಳಿಸಿದ ಬಾಕ್ಸ್ ಇದೀಗ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಅದರಲ್ಲೂ ಕಾಂಗ್ರೆಸ್ ನಾಯಕರು ಈ ವಿಷಯದ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತಪಡಿಸಿದ್ದಾರೆ. ಒಂದು ಕಡೆ ಪ್ರಿಯಾಂಕ ಖರ್ಗೆ ಸೂಕ್ತ ತನಿಖೆಗೆ ಆಗ್ರಹಿಸಿದ ಬೆನ್ನಲ್ಲೇ , ಕೋಲಾರದ ಸಮಾವೇಶದಲ್ಲಿ ಮಾತನಾಡಿದ ಸಚಿವ ಡಿಕೆ ಶಿವಕುಮಾರ್, ಮೋದಿ ಅವರ ಹೆಲಿಕಾಪ್ಟರ್ ನಲ್ಲಿ ತಂದಿದ್ದ ಟ್ರಂಕ್ ನಲ್ಲಿ ಹಣವಿತ್ತು.
ಮೋದಿ ಅವರಿಂದಲೇ ಹಣ ಸಾಗಣೆ ನಡೆಯುತ್ತಿದೆ. ಹಣ ಸಾಗಾಟ ಮಾಡುವುದು, ಶಾಸಕರನ್ನು ಕೊಂಡುಕೊಳ್ಳುವುದು ಅವರ ವೃತ್ತಿಯಾಗಿದೆ. ಎಲ್ಲರಿಗೂ ಒಂದೇ ನ್ಯಾಯ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಇದಕ್ಕೂ ಮುನ್ನ ಮಾತನಾಡಿದ ಸಿದ್ದರಾಮಯ್ಯ ಚುನಾವಣೆ ಸಂದರ್ಭದಲ್ಲಿ ಎಲ್ಲರನ್ನೂ ತಪಾಸಣೆ ಮಾಡುವ ಚುನಾವಣಾ ಅಧಿಕಾರಿಗಳು ಮೋದಿಯನ್ನು ಬಿಟ್ಟಿದ್ಯಾಕೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
Discussion about this post