ವಿಶ್ವೇಶ್ವರ ಹೆಗಡೆಯವರು ಸ್ಪೀಕರ್ ಆಗಿ ವಿಧಾನಸಭೆಯಲ್ಲಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಮಾತನಾಡಿದ್ದ ನಿಕಟಪೂರ್ವ ಸ್ಪೀಕರ್ ರಮೇಶ್ ಕುಮಾರ್ ಹಲವು ಮಾತುಗಳನ್ನು ಪ್ರಸ್ತಾಪಿಸಿದ್ದರು.
ರಮೇಶ್ ಕುಮಾರ್ ಅವರು ಹೇಳಿದ ಮಾತುಗಳು ಕೆಲ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ರಮೇಶ್ ಅವರು ಆರ್ ಎಸ್ ಎಸ್ ಕುರಿತಂತೆ ಮಾತನಾಡಿರುವುದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಅಸಮಾಧಾನಕ್ಕೂ ಕಾರಣವಾಗಿದೆ.
ಹೀಗಾಗಿ ಫೇಸ್ ಬುಕ್ ನಲ್ಲಿ ವಿಡಿಯೋ ಒಂದನ್ನು ಅಪ್ ಲೋಡ್ ಮಾಡಿರುವ ಸುರೇಶ್ ಕುಮಾರ್, ರಮೇಶ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Discussion about this post