ಬೆಂಗಳೂರು : ನರೇಂದ್ರ ಮೋದಿಯ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯ ಬಗ್ಗೆ ಸಾವಿರ ನಿರೀಕ್ಷೆಗಳಿತ್ತು. ಆದರೆ ಮೋದಿಯ ಮುಖ ನೋಡಿ ಸ್ವಚ್ಛ ಆಡಳಿತದ ನಿರೀಕ್ಷೆಯಲ್ಲಿ ಮತದಾರರು ಇದೀಗ ನಿರಾಶೆಗೊಂಡಿದ್ದಾರೆ. ನರೇಂದ್ರ ಮೋದಿಯ ಆಡಳಿತ ಚೆನ್ನಾಗಿದೆ. ಆದರೆ ಕೆಲ ಹಂತದಲ್ಲಿ ಎಲ್ಲವೂ ಸರಿ ಇಲ್ಲ ಅನ್ನುವುದು ಮತದಾರರ ದೂರು.
ಇನ್ನು ಕಾಂಗ್ರೆಸ್ ಜೆಡಿಎಸ್ ಪಕ್ಷದ ಕುಟುಂಬ ರಾಜಕಾರಣದ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಬಿಜೆಪಿ ಕುಟುಂಬ ರಾಜಕಾರಣ ಮಾಡೋದಿಲ್ಲ ಎಂದು ನಿರೀಕ್ಷಿಸಲಾಗಿತ್ತು. ಇದಕ್ಕೆ ಪೂರಕವಾಗಿ ಸಂತೋಷ್ ಜಿ, ಡಿಎನ್ಎ ಬಗ್ಗೆ ಮಾತನಾಡಿದ್ದರು. ಅನಂತಕುಮಾರ್ ನಿಧನರಾದ ಬಳಿಕ ಅವರ ಪತ್ನಿಗೆ ಟಿಕೆಟ್ ಕೊಡಲು ನಿರಾಕರಿಸಲಾಗಿತ್ತು. ಆದರೆ ಈಗ ಎಲ್ಲವೂ ಉಲ್ಟಾ.
ಶಾಸಕಿ ಶಶಿಕಲಾ ಜೊಲ್ಲೆಯವರ ಪತಿ ಸಂಸದರಾಗಿದ್ದಾರೆ, ಅಲ್ಲಿ ಬಿಜೆಪಿ ಕುಟುಂಬ ಮುಗಿಯುತ್ತಿದ್ರೆ ಪರವಾಗಿರಲಿಲ್ಲ, ಬದಲಾಗಿ ಇದೀಗ ಶಶಿಕಲಾ ಜೊಲ್ಲೆಯವರಿಗೆ ಮಂತ್ರಿ ಸ್ಥಾನ ಬೇರೆ ಕೊಡಲಾಗಿದೆ. ಒಂದೇ ಮನೆಗೆ ಇಷ್ಟೊಂದು ಅವಕಾಶಗಳನ್ನು ಕೊಟ್ರೆ ನಿಷ್ಟೆಯಿಂದ ದುಡಿಯುವ ಕಾರ್ಯಕರ್ತರ ಕಥೆಯೇನಾಗಬೇಕು.
ಅಷ್ಟೇ ಅಲ್ಲ ಶಶಿಕಲಾ ಜೊಲ್ಲೆಯವರ ಮೇಲೆ ಭ್ರಷ್ಟಚಾರದ ಆರೋಪವಿದೆ. ಮೊಟ್ಟೆ ಟೆಂಡರ್ ಕುರಿತಂತೆ ಕನ್ನಡದ ವಾಹಿನಿಯೊಂದು ಸ್ಟಿಂಗ್ ಆಪರೇಷನ್ ಮಾಡಿತ್ತು. ಈ ಬಗ್ಗೆ ತನಿಖೆಗೆ ಆದೇಶ ನೀಡಬೇಕಾಗಿದ್ದ ಸರಕಾರ ಮೌನವಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಜೊತೆಗೆ ಈ ಬಗ್ಗೆ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್ ನಿಂದ ತಡೆಯಾಜ್ಞೆ ಕೂಡಾ ತರಲಾಗಿದೆ.ಕನಿಷ್ಟ ಪಕ್ಷ ಮೊಟ್ಟೆ ವ್ಯವಹಾರದಲ್ಲಿ ಜೊಲ್ಲೆ ಅವ್ಯವಹಾರ ಮಾಡಿಲ್ಲ ಅನ್ನುವುದನ್ನು ಬಿಜೆಪಿ ನಾಯಕರು ರಾಜ್ಯದ ಜನತೆಗೆ ಹೇಳಬೇಕಾಗಿತ್ತು ತಾನೇ.
ಅಷ್ಟೇ ಅಲ್ಲ ಮೊಟ್ಟೆ ಪ್ರಕರಣದಿಂದ ಸಚಿವ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದ ಶಶಿಕಲಾ ಜೊಲ್ಲೆ ದಿಲ್ಲಿಯಲ್ಲಿ ಪ್ರಬಲ ಲಾಬಿ ನಡೆಸಿ ಸಚಿವ ಸ್ಥಾನ ಪಡೆದಿದ್ದಾರೆ ಎನ್ನಲಾಗಿದೆ. ಇನ್ನು ಶಶಿಕಲಾ ಜೊಲ್ಲೆ ಪ್ರಮಾಣ ವಚನ ಕಾರ್ಯಕ್ರಮಕ್ಕೆ ತಡವಾಗಿ ಬಂದ ಕಾರಣ ವಿಮಾನ ನಿಲ್ದಾಣದಿಂದ ರಾಜಭವನಕ್ಕೆ ನೇರವಾಗಿ ಬರಲು ಝೀರೋ ಟ್ರಾಫಿಕ್ ವ್ಯವಸ್ಥೆ ಬೇರೆ ಮಾಡಲಾಗಿತ್ತು.
ಬೊಮ್ಮಾಯಿ ಸರ್ಕಾರವಾದರೂ ಮೋದಿಯ ಮೇಲಿಟ್ಟ ಭರವಸೆ ಈಡೇರಿಸುತ್ತಾರೆ ಅಂದುಕೊಂಡ್ರೆ ಸುಳ್ಳಾಗುವ ಎಲ್ಲಾ ಲಕ್ಷಣಗಳು ಮೊದಲ ವಾರವೇ ಗೋಚರಿಸಿದೆ.
Discussion about this post