ಮಂಡ್ಯ ರಣಾಂಗಣದಲ್ಲಿ ವಾಕ್ಸಮರ ಜೋರಾಗಿದೆ. ಸುಮಲತಾ ವಿರುದ್ಧ ರೇವಣ್ಣ ಕೀಳು ಮಟ್ಟದ ರಾಜಕೀಯದ ಮಾತುಗಳನ್ನಾಡಿದ್ದಾ ರೆ. ಗಂಡ ಸತ್ತು ಒಂದು ತಿಂಗಳಲ್ಲಿ ಸುಮಲತಾ ಏನು ಮಾಡ್ತಿದ್ದಾರೆ ಗೊತ್ತಿದೆ ಎಂದು ಅಪಹಾಸ್ಯ ಮಾಡಿದ್ದಾರೆ. ಸಿಎಂ ಕುಮಾರಸ್ವಾಮಿ ಬಗ್ಗೆ ಸುಮಲತಾಗೆ ಕೃತಜ್ಞತೆ ಇರಬೇಕಿತ್ತು. ಅಂಬರೀಶ್ ಸತ್ತಾಗ ಹೇಗೆ ನಡೆದುಕೊಂಡಿದ್ದಾರೆ ಎಂದು ಗೊತ್ತಿರಬೇಕು ಎಂದಿದ್ದಾರೆ.
ಸುಮಲತಾ ಅವರು ಚಾಲೆಂಜ್ ಮಾಡಿದ ಕಾರಣಕ್ಕೆ ನಿಖಿಲ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಯ್ತು. ಇಲ್ಲವಾದರೆ ಕಾರ್ಯಕರ್ತನೊಬ್ಬನನ್ನು ಇಳಿಸಲು ನಿರ್ಧರಿಸಲಾಗಿತ್ತು ಎಂದು ಸುಳ್ಳು ಬೇರೆ ಹೇಳಿದ್ದಾರೆ ರೇವಣ್ಣ.
ಉಪ ಚುನಾವಣೆಯಲ್ಲಿ ಶಿವ ರಾಮೇಗೌಡ ಗೆದ್ದ ಬೆನ್ನಲ್ಲೇ, ನಿಖಿಲ್ ಹೆಸರು ಪ್ರಸ್ತಾಪವಾಗಿತ್ತು ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸುತ್ತೇವೆ ಅನ್ನುವುದೆಲ್ಲಾ ಬರೀ ಬೊಗಳೆ ಮಾತು ರೇವಣ್ಣ ಅವರದ್ದು. ಅತ್ತ ಪ್ರಜ್ವಲ್ ಕಣಕ್ಕಿಳಿಯುತ್ತಿದ್ದಂತೆ ಕುಟುಂಬ ರಾಜಕೀಯ ಗರಿ ಕೆದರಿದ್ದು ಅನ್ನುವುದನ್ನು ಅರಿಯದಷ್ಟು ಮುಗ್ದರಲ್ಲ ರಾಜ್ಯದ ಜನ.
ದೇವೇಗೌಡರೇ, ರೇವಣ್ಣ ಕ್ಷಮೆ ಕೇಳಲ್ಲ ಎಂದು ಪಟ್ಟು ಹಿಡಿದು ಕೂತಿದ್ದಾರೆ. ನೀವಾದರೂ ನಿಮ್ಮ ಮಗನನ್ನು ಕರೆದು ಬುದ್ದಿ ಹೇಳಿ. ಸೂತಕದ ಮನೆಯ ನೋವು ಏನು ಅನ್ನುವುದು ವ್ಯಕ್ತಿಯನ್ನು ಕಳೆದುಕೊಂಡವರಿಗೆ ಗೊತ್ತು.
ಮಾಜಿ ಪ್ರಧಾನಿಯಾದ ನಿಮ್ಮ ಮೇಲೆ ನಂಬಿಕೆ ಇದೆಯೋ ಇಲ್ಲವೋ ಬೇರೆ ಪ್ರಶ್ನೆ, ಆದರೆ ಗೌರವವಂತು ಇದ್ದೇ ಇದೆ.
ಒಬ್ಬ ಹೆಣ್ಣು ಮಗಳ ಬಗ್ಗೆ ಮಾತನಾಡುವಾಗ ನಿಮ್ಮ ಮಗನ ತಲೆಯಲ್ಲಿ ಬುದ್ದಿ ಇರಬೇಕಿತ್ತು. ದಯವಿಟ್ಟು ಅದನ್ನು ರೇವಣ್ಣ ತಲೆಗೆ ತುಂಬಿಸಿ.
Discussion about this post