ವಿಶ್ವಗುರುವಾಗುವತ್ತ ಭಾರತ ಅನ್ನುವ ಮಾತುಗಳಿಗೆ ಈಗ ಮತ್ತೊಮ್ಮೆ ಬಲ ಬಂದಿದೆ ( mexico modi)
ನವದೆಹಲಿ : ಇನ್ನು ಮುಂದಿನ 5 ವರ್ಷಗಳ ಕಾಲ ವಿಶ್ವದಲ್ಲಿ ಯಾವುದೇ ಯುದ್ಧ ನಡೆಯದಂತೆ ನೋಡಿಕೊಳ್ಳಲು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಳಗೊಂಡ ಆಯೋಗವೊಂದನ್ನು ಸ್ಥಾಪಿಸಬೇಕು ಎಂದು ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮ್ಯಾನ್ಯುಯೆಲ್ ಲೋಪೆಜ್ ಆಬ್ರೆಆರ್ ( Mexican President Andres Manuel Lopez Obrador) ಆಗ್ರಹಿಸಿದ್ದಾರೆ. ಈ ಸಂಬಂಧ ವಿಶ್ವಸಂಸ್ಥೆಗೆ ಲಿಖಿತ ಪ್ರಸ್ತಾಪ ಸಲ್ಲಿಸುವುದಾಗಿಯೂ ಅವರು ಹೇಳಿದ್ದಾರೆ. ( ( mexico modi)
ವಿಶ್ವದಲ್ಲಿ ಇನ್ನು ಮುಂದಿನ 5 ವರ್ಷ ಯುದ್ಧ ಹಾಗೂ ವಾಣಿಜ್ಯ ಸಮಯ ನಡೆಯಬಾರದು. ಇದನ್ನು ತಡೆಯುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಆಯೋಗ ರಚನೆಯಾಗಬೇಕು. ಸಮಿತಿಯಲ್ಲಿ ಪೋಪ್ ಫ್ರಾನ್ಸಿಸ್, ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮತ್ತು ಮೋದಿ ಇರಬೇಕು.
ವಿಶ್ವದಲ್ಲಿನ ಆರ್ಥಿಕ ಸಮಸ್ಯೆ, ಹಣದುಬ್ಬರ, ಆಹಾರ ಕೊರತೆ, ಬಡತನಕ್ಕೆ ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಕಾರಣ. ಎಂದು ಮೆಕ್ಸಿಕೋ ಅಧ್ಯಕ್ಷರು ದೂರಿದ್ದಾರೆ.
ಇದನ್ನು ಓದಿ : BS Yediyurappa : ಬಿಜೆಪಿಯ ರಾಜಾಹುಲಿಗೆ ಟಾಂಗ್ ಕೊಟ್ರ ನಳಿನ್ ಕುಮಾರ್ ಕಟೀಲು
Discussion about this post