ಈ ಪ್ರಮಾಣದಲ್ಲಿ ಮೊಳೆ ಬಿದ್ದಿದೆ ಅಂದ್ರೆ ಪಂಕ್ಚರ್ ಅಂಗಡಿಯವರ ಮೇಲೆ ಸಂಶಯ ಸಹಜವೇ
ಬೆಂಗಳೂರಿನ ಅದ್ಯಾವುದಾದ್ರೂ ರಸ್ತೆಯಲ್ಲಿ ವಾಹನಗಳ ಟಯರ್ back to Back ಪಂಕ್ಚರ್ ಆಗುತ್ತಿದ್ರೆ ಎಲ್ಲರೂ ಕೇಳುವುದೇ ಒಂದೇ ಪ್ರಶ್ನೆ ಮುಂದೆ ಪಂಕ್ಚರ್ ಅಂಗಡಿ ಉಂಟೇ ಅಂತಾ. ಅದಕ್ಕೂ ಕಾರಣವಿದೆ ವ್ಯಾಪಾರದ ಉದ್ದೇಶದಿಂದ ಕೆಲ ಪಂಕ್ಚರ್ ಅಂಗಡಿ ಮಾಲೀಕರು ರಸ್ತೆಯಲ್ಲಿ ಮೊಳೆ ಎಸೆದು ಹೋಗಿರುವ ಪ್ರಕರಣಗಳು ಈ ಹಿಂದೆ ಬೆಳಕಿಗೆ ಬಂದಿತ್ತು.
2015ರ ಏಪ್ರಿಲ್ ತಿಂಗಳಲ್ಲಿ HSR Layput ಪೊಲೀಸ್ ಠಾಣೆ ಅಧಿಕಾರಿಗಳು ಫವಾಜ್ ಅನ್ನುವವನ್ನು ಈ ಸಂಬಂಧ ಬಂಧಿಸಿದ್ದರು. ಅಗ್ಲೇ ಇಂತಹುದೊಂದು ಮಾಫಿಯಾ ಬೆಂಗಳೂರಿನಲ್ಲಿ ನಡೆಯುತ್ತಿದೆ ಅನ್ನೋದು ಬೆಳಕಿಗೆ ಬಂದಿದ್ದು.
ಈ ನಡುವೆ ಜಾಲಹಳ್ಳಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಕುವೆಂಪು ವೃತ್ತದ ಕೆಳ ಸೇತುವೆ ರಸ್ತೆಯಲ್ಲಿ ಮೊಳೆಗಳನ್ನು ಸಂಗ್ರಹಿಸುವ ಮೂಲಕ ಪೊಲೀಸರು ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ಈ ದಿನ ಠಾಣಾ ಸರಹದ್ದಿನ ಕುವೆಂಪು ವೃತ್ತದ ಅಂಡರ್ ಪಾಸ್ ನಲ್ಲಿ ಬಿದ್ದಿದ್ದ ಮಳೆಗಳಿಂದ ವಾಹನಗಳು ಪಂಚರ್ ಆಗುತ್ತಿದ್ದುದನ್ನು ಗಮನಿಸಿದ ಠಾಣೆಯ ಸಿಬ್ಬಂದಿಯವರು, ಮಳೆಗಳನ್ನು ತೆರವುಗೊಳಿಸಿ, ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು .@blrcitytraffic@Jointcptraffic@DCPTrNorthBCP@acp_north pic.twitter.com/jnhzEzKMxK
— JALAHALLI TRAFFIC BTP (@jalahallitrfps) July 27, 2024
ಕೆಳ ಸೇತುವೆ ರಸ್ತೆಯಲ್ಲಿ ಇತ್ತೀಚೆಗೆ ಹಲವು ವಾಹನಗಳ ಪಂಕ್ಚರ್ ಆಗುತ್ತಿದ್ದ ಹಿನ್ನಲೆಯಲ್ಲಿ ಸಂಚಾರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸಣ್ಣ ಸಣ್ಣ ಮೊಳೆಗಳು ಬಿದ್ದಿರುವುದು ಕಂಡು ಬಂದಿದೆ. ತಕ್ಷಣ ಪೊಲೀಸ್ ಸಿಬ್ಬಂದಿ ಮೊಳೆಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದ್ದಾರೆ.
ಇದನ್ನೂ ಓದಿ : 17 ಸಾವಿರ ಗಡಿ ದಾಟಿದ ಡೆಂಘೀ, ಆರೋಗ್ಯ ಇಲಾಖೆಯ ಹೋರಾಟಕ್ಕೆ ಮಣಿಯದ ಸೋಂಕು
ಪೊಲೀಸರ ಈ ಕಾರ್ಯಕ್ಕೆ ಇದೀಗ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ ಮಾತ್ರವಲ್ಲದೆ ಹೀಗೆ ರಸ್ತೆಯಲ್ಲಿ ಈ ಪ್ರಮಾಣದಲ್ಲಿ ಮೊಳೆಗಳು ಬೀಳಲು ಪಂಕ್ಚರ್ ಅಂಗಡಿಗಳ ಕೈವಾಡವಿದೆ ಅನ್ನುವ ಸಂಶಯವೂ ಎದ್ದಿದೆ.
ಸಮೀಪದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲನೆ ನಡೆಸಿದರೆ ಪಂಕ್ಚರ್ ಮಾಫಿಯಾ ಬೆಳಕಿಗೆ ಬರಬಹುದು ಅಂದಿದ್ದಾರೆ. ಕುವೆಂಪು ವೃತ್ತದ ಸಮೀಪದ ದೇವಿನಗರ ಬಳಿ ಇರುವ ಪಂಕ್ಚರ್ ಶಾಪ್ ಗಳ ಕೈವಾಡ ಇರುವ ಸಾಧ್ಯತೆ ಇದ್ದು, ಇವರ ಮೇಲೆ ಕಣ್ಣಿಡಿ ಎಂದು ಅನೇಕರು ಪೊಲೀಸರಿಗೆ ಮನವಿ ಮಾಡಿದ್ದಾರೆ.