ಕಾಬೂಲ್ : ವಿಶ್ವ ಒಪ್ಪುವ ಆಡಳಿತ ಮಾಡುತ್ತೇವೆ ಎಂದು ಭರವಸೆ ಕೊಟ್ಟಿರುವ ಭೂಮಿಯ ಮೇಲಿನ ರಕ್ಕಸರಂದೇ ಖ್ಯಾತರಾಗಿರುವ ತಾಲಿಬಾನಿಗಳ ಅಸಲಿ ಮುಖ ನಿಧಾನವಾಗಿ ಬಯಲಾಗುತ್ತಿದೆ. ಈಗಾಗಲೇ ಮಹಿಳೆಯರ ಮೇಲೆ ದೌರ್ಜನ್ಯ ಪ್ರಾರಂಭಿಸಿರುವ ಅವರು ನಾಯಿ ಬಾಲ ಎಂದಿಗೂ ಡೊಂಕೇ ಅನ್ನುವುದನ್ನು ಸಾಬೀತು ಮಾಡಲು ಹೊರಟಿದ್ದಾರೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಸರ್ಕಾರ ರಚನೆಗೆ ಕಾಲ ಸನ್ನಿಹಿತವಾಗಿರುವಂತೆ ಅನೇಕ ಕಠಿಣ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದ್ದಾರೆ. ಈಗಾಗಲೇ ಜೈಲಿನಿಂದ ಬಿಡುಗಡೆಯಾಗಿರುವ ಕೈದಿಗಳನ್ನೇ ವಾರ್ಡನ್ ಗಳನ್ನಾಗಿ ನೇಮಿಸಿರುವ ತಾಲಿಬಾನಿಗಳು ಯಾವ ತಪ್ಪಿಗೆ ಯಾವ ಶಿಕ್ಷೆ ಅನ್ನುವುದನ್ನು ಪ್ರಕಟಿಸಿದ್ದಾರೆ.
ಈಗಿನ ಪ್ರಕಟನೆ ಪ್ರಕಾರ ಉದ್ದೇಶಪೂರ್ವಕ ಕೊಲೆ ಮಾಡಿದವನನ್ನ ಹತ್ಯೆ ಮಾಡುವುದು. ಕೊಲೆ ಉದ್ದೇಶರಹಿತವಾಗಿದ್ದಲಿ ದಂಡ ವಸೂಲಿ, ಕಳ್ಳತನ ಮಾಡಿದರೆ ಕೈ ಕಟ್, ಅನೈತಿಕ ಸಂಬಂಧ ಹೊಂದಿದ್ದಲ್ಲಿ ಕಲ್ಲಿನಿಂದ ಹೊಡೆದು ಸಾಯಿಸುವುದು, ಮಹಿಳೆ ಮತ್ತು ಪುರುಷ ಇಬ್ಬರೂ ಅನೈತಿಕ ಸಂಬಂಧದಲ್ಲಿ ತೊಡಗಿದ್ದರೆ ಅವರನ್ನು ಸಾರ್ವಜನಿಕವಾಗಿ ಹತ್ಯೆ ಮಾಡುವುದು ಆದರೆ ಈ ಪ್ರಕರಣದಲ್ಲಿ ನಾಲ್ವರು ಸಾಕ್ಷಿಗಳು ಒಂದೇ ರೀತಿಯಲ್ಲಿ ಸಾಕ್ಷಿ ಹೇಳಬೇಕು.
ಹೀಗೆ ಹತ್ತು ಹಲವು ಕಠಿಣ ನಿಯಮಗಳು ತಾಲಿಬಾನ್ ನಲ್ಲಿ ಜಾರಿಗೆ ಬಂದಿದೆ. ಹಾಗಂತ ಅಫ್ಘಾನಿಸ್ತಾನದ ಬೀದಿಗಳಲ್ಲಿ ಅಡ್ಡಾಡುತ್ತಿರುವ ನೈತಿಕ ಪೊಲೀಸರಿಗೆ ಯಾವುದೇ ಶಿಕ್ಷೆ ಇಲ್ವಂತೆ. ಇಷ್ಟೇ ಅಲ್ಲದೆ ಈ ರೀತಿಯ ಕಾನೂನು ಜಾರಿ ಮಾಡುವುದು ಮಾನವ ಹಕ್ಕಿನ ಉಲ್ಲಂಘನೆಯಾಗಿದ್ದರೂ, ಅನೇಕ ಮಾನವ ಹಕ್ಕು ಹೋರಾಟಗಾರರು ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ತಾಲಿಬಾನಿಗಳ ವಿರುದ್ಧ ಮಾತನಾಡುವ ತಾಕತ್ತು ಮಾನವ ಹಕ್ಕು ಹೋರಾಟಗಾರರಿಗೆ ಎಲ್ಲಿದೆ.
Waheedullah Hashimi, a senior figure in the Taliban who is close to the leadership, said that the group would fully implement its version of sharia, or Islamic law, despite pressure from the international community to allow women the right to work where they want.
Discussion about this post