ಮರಳಿ ಮನಸಾಗಿದೆ ಕಿರುತೆರೆಯಲ್ಲಿ ಈಗಷ್ಟೇ ಪ್ರಾರಂಭವಾಗಿರುವ ಧಾರವಾಹಿ. ಚಂದನ್ ಕುಮಾರ್ ಖಡಕ್ ಪೊಲೀ ಆಫೀಸರ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಧಾರವಾಹಿ ಜನ ಮೆಚ್ಚುಗೆಗೂ ಪಾತ್ರವಾಗಿದೆ. ಮಾತು ಕೊಟ್ಟ ಮನಸ್ಸುಗಳ ನಡುವೆ ಪ್ರೀತಿಯ ಸೇತುವೆ ಅನ್ನೋ ಟ್ಯಾಗ್ ಲೈನ್ ಹೊಂದಿರುವ ಧಾರವಾಹಿ ಹಿಟ್ ಆಗೋ ಎಲ್ಲಾ ಲಕ್ಷಣಗಳಿದೆ.
ಇಷ್ಟವಿಲ್ಲದಿದ್ದರೂ ಕೊಟ್ಟ ಮಾತಿಗೆ ಕಟ್ಟು ಬಿತ್ತು ನಾಯಕ ಹುಡುಗಿಯೊಬ್ಬಳನನ್ನು ಮದುವೆಯಾಗ್ತಾನೆ. ಆ ಹುಡುಗಿಗೂ ಈ ಮದುವೆ ಇಷ್ಟವಿರೋದಿಲ್ಲ. ಒಬ್ಬರನೊಬ್ಬರು ಇಷ್ಟ ಪಡದ ಸಂಸಾರ ಹೇಗೆ ಸಾಗುತ್ತದೆ ಅನ್ನುವುದೇ ಧಾರವಾಹಿಯ ಒಲ್ ಲೈನ್ ಸ್ಟೋರಿ.
ಈ ನಡುವೆ ಮರಳಿ ಮನಸಾಗಿದೆ ಧಾರವಾಹಿಯಲ್ಲಿ ಚಂದ್ರಲೇಖ ಪಾತ್ರಕ್ಕೆ ಜೀವ ತುಂಬಿದ್ದ ನಟಿ ಚೈತ್ರಾ ಧಾರವಾಹಿಯಿಂದ ಹೊರ ಬಂದಿದ್ದಾರೆ. ವೈಯುಕ್ತಿಕ ಕಾರಣ ಕೊಟ್ಟಿರುವ ಅವರು ಸೀರಿಯಲ್ ತಂಡ ತೊರೆದಿದ್ದಾರೆ.
ಈ ನಡುವೆ ವಿಕ್ರಾಂತ್ ದೊಡ್ಡಮ್ಮ ಚಂದ್ರಲೇಖ ಪಾತ್ರಕ್ಕೆ ಹೊಸ ಕಲಾವಿದರ ಆಯ್ಕೆಯೂ ನಡೆದಿದ್ದು, ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಚೈತ್ರಾ ಅವರ ಜಾಗಕ್ಕೆ ಹಿರಿಯ ನಟಿ ಮರಿನಾ ತಾರ ಅವರ ಆಗಮನವಾಗಿದ್ದು, ಚಂದ್ರಲೇಖ ಪಾತ್ರವನ್ನು ಮುನ್ನಡೆಸುತ್ತಿದ್ದಾರೆ.
ಹಾಗೇ ನೋಡಿದರೆ ಚಂದ್ರಲೇಖ ಪಾತ್ರಕ್ಕೆ ಚೈತ್ರಾ ಅವರಿಗಿಂತ ಮರಿನಾ ಅವರೇ ಸೂಕ್ತ ಅನ್ನಿಸುತ್ತಿದೆ. ಮರಿನಾ ಅವರ ಗತ್ತು ಗೈರತ್ತು ಚಂದ್ರಲೇಖ ಪಾತ್ರದ ತೂಕವನ್ನು ಹೆಚ್ಚಿಸಿದಂತಿದೆ.
ಅಂದ ಹಾಗೇ ಮರಿನಾ ಅವರು ಕಾವ್ಯಾಂಜಲಿ ಧಾರವಾಹಿಯಲ್ಲಿ ಕಾವ್ಯಾಳ ತಾಯಿ ಪ್ರೇಮಾ ಪಾತ್ರದಲ್ಲೂ ನಟಿಸುತ್ತಿದ್ದಾರೆ.
Discussion about this post