ರಾಜ್ಯ ಸರ್ಕಾರ ಕೂಡಾ ಹೀಗೆ ಬೆಳಗ್ಗೆ ಕೊಟ್ಟ ಆದೇಶವನ್ನು ಸಂಜೆ ಹಿಂಪಡೆಯುತ್ತದೆ ಹಾಗಂತ Mangaluru ಪೊಲೀಸರು ಹೀಗೆ ಮಾಡಬಾರದಿತ್ತು…
ಮಂಗಳೂರು : ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಿಗೆ ಅವಕಾಶವಿಲ್ಲ ಅನ್ನುವ ಕುರಿತಂತೆ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಹೇಳಿಕೆ ಕೊಟ್ಟ ಬೆನ್ನಲ್ಲೇ ಈ ಆದೇಶವನ್ನು ಕೆಲವೇ ಗಂಟೆಗಳಲ್ಲಿ ಹಿಂಪಡೆಯಲಾಗುತ್ತದೆ ಅನ್ನುವ ಪ್ರತಿಕ್ರಿಯೆ Mangaluru ಸಾಮಾಜಿಕ ಜಾಲ ತಾಣದಲ್ಲಿ ವ್ಯಕ್ತವಾಗಿತ್ತು.
ಹಾಗೇ ಆಗಿದೆ ಕೂಡಾ, ಆದೇಶ ಹೊರಡಿಸಿದ ಕೆಲವೇ ಗಂಟೆಗಳಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಅವರು, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಈ ನಿರ್ಧಾರದಿಂದ ಹಿಂದಕ್ಕೆ ಸರಿಯಲಾಗಿದೆ ಅಂದಿದ್ದಾರೆ.
ಅಲೋಕ್ ಕುಮಾರ್ ರಂತಹ ಅಧಿಕಾರಿ ನಿಯಮಗಳನ್ನು ರೂಪಿಸುವಾಗ ಸಾಕಷ್ಟು ಎಚ್ಚರಿಕೆ ವಹಿಸುತ್ತಾರೆ. ಸಾಧಕ ಬಾಧಕಗಳನ್ನು ಯೋಚಿಸಿದರೆ ಅವರು ನಿರ್ಧಾರಗಳನ್ನು ಕೈಗೊಳ್ಳುವುದಿಲ್ಲ. ಜೊತೆಗೆ ಸಾಕಷ್ಟು ಹೋಮ್ ವರ್ಕ್ ಕೂಡಾ ಮಾಡಿಕೊಂಡಿರುತ್ತಾರೆ. ಹಾಗಿರುವಾಗ ಹಿಂಬದಿ ಸವಾರರಿಗೆ ಅವಕಾಶವಿಲ್ಲ ಅನ್ನುವ ನಿಯಮ ಜಾರಿಗೆ ತಂದ ಮೇಲೆ ಯಾರು ಒತ್ತಡ ತಂದ್ರು ಅನ್ನುವುದೇ ಯಕ್ಷ ಪ್ರಶ್ನೆ.
ಇದನ್ನೂ ಓದಿ : Kateel temple : ಕಟೀಲು ಕ್ಷೇತ್ರಕ್ಕೆ ಬಂದವರಿಗೆ ಪಾರ್ಕಿಂಗ್ ಹೊರೆ : ಆಸ್ತಿಕರ ಕೆಂಗಣ್ಣಿಗೆ ಗುರಿಯಾದ ಬಿಜೆಪಿ ಸರ್ಕಾರ
Discussion about this post