ಮಂಗಳೂರು : ಒಂದಿಷ್ಟು ತಿಂಗಳ ಹಿಂದೆ ಕರ್ನಾಟಕದಲ್ಲಿ ಡ್ರಗ್ಸ್ ಪ್ರಕರಣ ಜೋರಾಗಿ ಸದ್ದು ಮಾಡಿತ್ತು. ರಾಜ್ಯದ ಮೂಲೆ ಮೂಲೆಯಲ್ಲೂ ದಾಳಿ ಮಾಡಿದ ಪೊಲೀಸರು, ಅಬಕಾರಿ ಇಲಾಖೆ ಒಂದೊಂದು ಗಾಂಜಾ ಗಿಡ ಬೆಳೆದವರ ವಿರುದ್ಧವೂ ಪ್ರಕರಣ ದಾಖಲಿಸಿತ್ತು. ಇನ್ನು ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಹೈ ಪ್ರೋಫೈಲ್ ಕೇಸ್ ಗಳು ದಾಖಲಾಗಿತ್ತು.
ಈ ಪೈಕಿ ಮಂಗಳೂರಿನಲ್ಲಿ ಗಮನ ಸೆಳೆದದ್ದು ಡ್ರಗ್ಸ್ ದಂಧೆಯಲ್ಲಿ ಕೇಳಿ ಬಂದ ಅನುಶ್ರೀ ಹೆಸರು. ಈ ಸಂಬಂಧ ಪೊಲೀಸರು ಅನುಶ್ರೀಯನ್ನು ವಿಚಾರಣೆಗೂ ಕರೆದಿದ್ದರು. ಆದರೆ ಅನುಶ್ರೀ ವಿರುದ್ಧ ಸೂಕ್ತ ಸಾಕ್ಷಿಗಳು ಪೊಲೀಸರಿಗೆ ಸಿಕ್ಕಿರಲಿಲ್ಲ. ಇದೇ ತನಿಖೆ ನಡೆಯುತ್ತಿದ್ದ ವೇಳೆ ತನಿಖಾಧಿಕಾರಿಯನ್ನೇ ಸರ್ಕಾರ ವರ್ಗಾಯಿಸಿದ್ದು ಹಲವು ಅನುಮಾನಕ್ಕೂ ಕಾರಣವಾಗಿತ್ತು. ಜೊತೆಗೆ ಅನುಶ್ರೀ ರಕ್ಷಣೆಗೆ ಕರ್ನಾಟಕದ ಮಾಜಿ ಸಿಎಂ ಒಬ್ಬರು ಪ್ರಯತ್ನಿಸುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರರು ಆರೋಪಿಸಿದ್ದರು.
ಈ ನಡುವೆ ಜಾರ್ಜ್ ಶೀಟ್ ಸಲ್ಲಿಕೆಯಾದ 9 ತಿಂಗಳ ಬಳಿಕ ಏಕಾಏಕಿ ಅನುಶ್ರೀ ಹೆಸರು ಜಾರ್ಜ್ ಶೀಟ್ ನಲ್ಲಿದೆ ಅನ್ನುವ ಸ್ಪೋಟಕ ಸುದ್ದಿ ಸಿಕ್ಕಿದೆ. ಸ್ಥಳೀಯ ಸಂಸ್ಥೆ ಚುನಾವಣೆ ಗುಂಗಿನಲ್ಲಿರುವ ಸಂದರ್ಭದಲ್ಲೇ ಬಂದ ಸುದ್ದಿ ಅಚ್ಚರಿಗೂ ಕಾರಣವಾಗಿತ್ತು. ಜೊತೆಗೆ ಜಾರ್ಜ್ ಶೀಟ್ ನೋಡಿದ ಮೇಲೆ ಪೊಲೀಸರ ತನಿಖೆ ಬಗ್ಗೆ ಪ್ರಶ್ನೆಗಳು ಎದ್ದಿತ್ತು.
ಇದೀಗ ಜಾರ್ಜ್ ಶೀಟ್ ಕುರಿತಂತೆ ಪ್ರತಿಕ್ರಿಯಿಸಿರುವ ಮಂಗಳೂರು ಪೊಲೀಸ್ ಆಯುಕ್ತ, 2007ರಲ್ಲಿ ನಡೆದ ಘಟನೆ ಕುರಿತಂತೆ ಪೊಲೀಸರು ತನಿಖೆ ನಡೆಸಿದ್ದಾರೆ. ಆದರೆ ಇದರಲ್ಲಿ ಉಲ್ಲೇಖಿಸಲಾದ ಬಹುತೇಕ ಆರೋಪಿಗಳ ಮೇಲೆ ಯಾವುದೇ ಸಾಕ್ಷಿಗಳು ಲಭಿಸಿಲ್ಲ. 2007ರಲ್ಲಿ ನಡೆದ ಘಟನೆ ಇದಾಗಿದ್ದು 13 ವರ್ಷಗಳೇ ಕಳೆದು ಹೋಗಿದೆ. ಅನುಶ್ರೀಯ ಪಾತ್ರ ಬಗ್ಗೆಯೂ ಸಾಕ್ಷಿಗಳು ಸಿಕ್ಕಿಲ್ಲ.
ನಮ್ಮ ಪೊಲೀಸರು ಈಗಾಗಲೇ ಜಾರ್ಜ್ ಶೀಟ್ ಅನ್ನು 2020ರ ಡಿಸೆಂಬರ್ ನಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಟ್ರಯಲ್ ಪ್ರಾರಂಭವಾಗುವ ಸಂದರ್ಭದಲ್ಲಿ ಸರ್ಕಾರಿ ಅಭಿಯೋಜಕರು ಹಾಗೂ ತನಿಖಾಧಿಕಾರಿಗಳು ಸೂಕ್ತ ಉತ್ತರವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡುತ್ತಾರೆ ಅಂದಿದ್ದಾರೆ. ಇನ್ನು ಈ ಪ್ರಕರಣ ದಾಖಲಾದ ಸಂದರ್ಭದಲ್ಲಿ ನಾನು ಪೊಲೀಸ್ ಆಯುಕ್ತನಾಗಿ ಇರಲಿಲ್ಲ. ನಾನು ಇಲ್ಲಿಗೆ ಬರುವ ಮುನ್ನ ಅಂತಿಮ ವರದಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿತ್ತು ಎಂದು ಶಶಿಕುಮಾರ್ ಸ್ಪಷ್ಟಪಡಿಸಿದ್ದಾರೆ
Discussion about this post