ಮಂಗಳೂರು : ಕಡಬ ಪೊಲೀಸ್ ಇನ್ಸ್ ಪೆಕ್ಟರ್ ಅವರ ಜೀಪು ಹಾಗೂ ಖಾಸಗಿ ಬೊಲೆರೋ ವಾಹನ ಮುಖಾಮಮುಖಿ ಡಿಕ್ಕಿಯಾದ ಘಟನೆ ಉಪ್ಪಿನಂಗಡಿ ಸುಬ್ರಹ್ಮಣ್ಯ ಹೆದ್ದಾರಿಯ ಕಳಾರ ಎಂಬಲ್ಲಿ ನಡೆದಿದೆ.
ಶನಿವಾರ ಕಡಬ ಎಸ್ ಐ ರುಕ್ಮನಾಯ್ಕ್ ತನ್ನ ಸಿಬ್ಬಂದಿಗಳೊಂದಿಗೆ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕಳಾರ ಸಮೀಪ ವಿರುದ್ಧ ದಿಕ್ಕಿನಿಂದ ಬಂದ ಬೊಲೆರೋ ವಾಹನ ಮುಖಾಮುಖಿ ಡಿಕ್ಕಿಯಾಗಿದೆ. ಘಟನೆ ಎರಡೂ ವಾಹನಗಳು ಜಖಂಗೊಂಡಿದೆ. ಅದೃಷ್ಟ ಅನ್ನುವಂತೆ ಎರಡೂ ವಾಹನದಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಘಟನೆಗೆ ಎರಡೂ ವಾಹನ ಚಾಲಕರ ಅತಿವೇಗವೇ ಕಾರಣ ಎನ್ನಲಾಗಿದೆ.
ಕೆಲ ದಿನಗಳ ರುಕ್ಮ ನಾಯಕ್ ಸಾರ್ವಜನಿಕರೊಬ್ಬರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಅನ್ನುವ ಆರೋಪ ಕೇಳಿ ಬಂದಿತ್ತು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ರುಕ್ಮನಾಯ್ಕ್ ನಾನು ಯಾರನ್ನೂ ನಿಂದಿಸಿಲ್ಲ, ನನ್ನ ಕರ್ತವ್ಯ ಮಾಡಿದ್ದೇನೆ ಎಂದು ಪ್ರತಿಕ್ರಿಯಿಸಿದ್ದರು.
Discussion about this post