ಬೆಂಗಳೂರು : ನಿರೂಪಕಿ ಕಮ್ ನಟಿ ಅನುಶ್ರೀ ಡ್ರಗ್ಸ್ ನಂಟಿನ ಬಗ್ಗೆ ಸ್ಫೋಟಕ ಮಾಹಿತಿ ಸಿಕ್ಕಿದೆ. ಮಂಗಳೂರು ಪೊಲೀಸರು ಸಲ್ಲಿಸಿರುವ ಜಾರ್ಜ್ ಶೀಟ್ ನಲ್ಲಿ ಅನುಶ್ರೀ ಹೆಸರು ಉಲ್ಲೇಖಿಸಲಾಗಿದ್ದು, ಎ2 ಕಿಶೋರ್ ಅಮಾನ್ ಶೆಟ್ಟಿ ನೀಡಿರುವ ಹೇಳಿಕೆ ಆಧಾರದಲ್ಲಿ ಹೆಸರನ್ನು ಉಲ್ಲೇಖಿಸಲಾಗಿದೆ.
ಕಿಶೋರ್ ಅಮಾನ್ ಶೆಟ್ಟಿ ಹೇಳಿಕೆ ಪ್ರಕಾರ, ತರುಣ್ ಅನ್ನುವ ವ್ಯಕ್ತಿ ಅನುಶ್ರೀಯನ್ನು ಪರಿಚಯಿಸಿದ್ದ, ಕುಣಿಯೋಣ ಬಾರಾ ರಿಯಾಲಿಟಿ ಶೋ ನಲ್ಲಿ ಇಬ್ಬರ ಪರಿಚಯವಾಗಿದೆ. ಇದಾದ ಬಳಿಕ ರಿಯಾಲಿಟಿ ಶೋನಲ್ಲಿ ನಾವಿಬ್ಬರೂ ಸೇರಿ ಪಾಲ್ಗೊಂಡಿದ್ದೇವೆ.
ಇದಕ್ಕಾಗಿ ತರುಣ್ ಬಾಡಿಗೆ ಮನೆಯಲ್ಲೂ ನಾವು ಪ್ರ್ಯಾಕ್ಟಿಸ್ ಮಾಡುತ್ತಿದ್ದೇವು. ಕೆಲವೊಮ್ಮೆ ಅನುಶ್ರೀ ತರುಣ್ ಇಬ್ಬರೇ ರೂಮ್ ನಲ್ಲಿ ಇರುತ್ತಿದ್ದರು. ನಾವು ಮೂವರು ಸೇರಿದ ಸಂದರ್ಭದಲ್ಲಿ ECSTASY ಮಾತ್ರೆಗಳನ್ನು ಸೇವಿಸುತ್ತಿದ್ದೇವು. ಇವು ಡ್ಯಾನ್ಸ್ ಮಾಡಲು ಉತ್ಸಾಹ ತುಂಬುತ್ತಿತ್ತು ಎಂದು ಅಮಾನ್ ಶೆಟ್ಟಿ ಹೇಳಿದ್ದಾನೆ.
Discussion about this post